ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟ: ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪೀಸ್ ಪಬ್ಲಿಕ್ ಸ್ಕೂಲ್ ಚಾಂಪಿಯನ್

ಮಂಗಳೂರು, ಆ.26: ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಲ್ಲಾಪುವಿನ ಪೀಸ್ ಪಬ್ಲಿಕ್ ಸ್ಕೂಲ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಈ ಪಂದ್ಯಾವಳಿಯಲ್ಲಿ ಮೊದಲ ಬಾರಿ ಸ್ಪರ್ಧಿಸಿದ ಪೀಸ್ ಪಬ್ಲಿಕ್ ಸ್ಕೂಲ್ ತಂಡ ಆರು ಪಂದ್ಯಗಳಲ್ಲಿ ಅತ್ಯುತ್ತಮವಾಗಿ ಆಡಿ ಫೈನಲ್ ಪ್ರವೇಶಿಸಿತ್ತು. ಫೈನಲ್ ಪಂದ್ಯದಲ್ಲಿ ಮೂಡುಬಿದಿರೆಯ ಅಲ್ ಪುರ್ಖಾನ್ ಪ್ರಾಥಮಿಕ ಶಾಲಾ ತಂಡವನ್ನು 1-0 ಅಂತರದ ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಪೀಸ್ ಪಬ್ಲಿಕ್ ಸ್ಕೂಲ್ ತಂಡಕ್ಕೆ ಕೋಚ್ ಎನ್.ಉಸ್ಮಾನ್ ಮುಸ್ತಫ ತರಬೇತಿ ನೀಡಿದ್ದರೆ, ಸ್ಕೂಲ್ ಫಿಟ್ನೆಸ್ ಟ್ರೈನರ್ ಅಂತಾರಾಷ್ಟ್ರೀಯ ಖ್ಯಾತಿಯ ಅತ್ಲೀಟ್ ಅಬ್ದುಲ್ ರಹ್ಮಾನ್ ಫಿಟ್ನೆಸ್ ಸಲಹೆ ನೀಡಿದ್ದಾರೆ.
ವಿಜೇತ ತಂಡವನ್ನು ಸ್ಕೂಲ್ ಆಡಳಿತ ಸಮಿತಿಯ ಮುಖ್ಯಸ್ಥ ಅಬ್ದುಲ್ ರಹಿಮಾನ್(ಬಾಶಾ) ಅಭಿನಂದಿಸಿದ್ದಾರೆ.
Next Story





