ಇಖ್ರಾ ಅರೇಬಿಕ್ ಸ್ಕೂಲ್ | ಹಿಫ್ಝ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮನ್ನಣೆ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು: ಇತ್ತೀಚೆಗೆ ಹಿಫ್ಝ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮನ್ನಣೆ ಗಳಿಸಿದ ತನ್ನ ಮೂವರು ವಿದ್ಯಾರ್ಥಿಗಳನ್ನು ಇಖ್ರಾ ಅರೇಬಿಕ್ ಸ್ಕೂಲ್ ವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮವನ್ನು ʼವಾರ್ತಾಭಾರತಿʼಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಅವರು ಉದ್ಘಾಟಿಸಿದರು. ಆಳವಾದ ಜ್ಞಾನವನ್ನು ಪಡೆಯುವ ಮಹತ್ವವನ್ನು ಅವರು ಒತ್ತಿ ಹೇಳಿದರು. ವೈವಿಧ್ಯಮಯ ಕ್ಷೇತ್ರಗಳಲ್ಲಿ ಶ್ರೇಷ್ಠತೆಯ ಅನ್ವೇಷಣೆಗೆ ಕರೆಕೊಟ್ಟರು.
ಮೌಲಾನಾ ಯಾಹ್ಯಾ ತಂಙಳ್ ಅವರು ಶರಿಯಾ ತತ್ವಗಳಿಗೆ ಅನುಗುಣವಾಗಿ ಬದುಕುವ ಮಹತ್ವವನ್ನು ವಿವರಿಸಿದರು. ಅಬುಲ್ ಹಸನ್ ಅಲಿ ನದ್ವಿ ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸಯ್ಯದ್ ಬ್ಯಾರಿ ಸಾಹಿಬ್ ಅವರು ನೈತಿಕ ಮೌಲ್ಯಗಳ ಪಾತ್ರ ಮತ್ತು ಸಮಾಜದ ಸಮಗ್ರ ಅಭಿವೃದ್ಧಿಯ ಕುರಿತು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿ ಹನೀಫ್ ಹಾಜಿ ಸಾಹಿಬ್, ಪ್ರಾಂಶುಪಾಲ ಮೌಲಾನಾ ಸಾಲಿಮ್ ನದ್ವಿ ಮತ್ತು ವಿವಿಧ ಗೌರವಾನ್ವಿತ ಅತಿಥಿಗಳು ಭಾಗವಹಿಸಿದ್ದರು.
Next Story







