ಜೆಪ್ಪಿನಮೊಗರು: ಗೋದಾಮಿನಲ್ಲಿ ಬೆಂಕಿ ಆಕಸ್ಮಿಕ; ಅಪಾರ ಹಾನಿ

ಮಂಗಳೂರು: ರಾ.ಹೆ.66ರ ಜೆಪ್ಪಿನಮೊಗರು-ಎಕ್ಕೂರು ಬಳಿ ರವಿವಾರ ರಾತ್ರಿ ಸುಮಾರು 11:30ಕ್ಕೆ ಗೋದಾಮಿನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.
ಸದಾಶಿವ ಶೆಟ್ಟಿ ಎಂಬವರಿಗೆ ಸೇರಿದ ಈ ಗೋದಾಮಿನಲ್ಲಿ ಗುಜರಿ ಸಾಮಗ್ರಿಗಳು, ಸೆಕೆಂಡ್ ಹ್ಯಾಂಡ್ ಪೀಠೋಪಕರಣ ಸಹಿತ ನಾನಾ ಸಾಮಗ್ರಿಗಳನ್ನು ತುಂಬಿಸಿಡಲಾಗಿತ್ತು. ರವಿವಾರ ರಾತ್ರಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಗೋದಾಮಿನಲ್ಲಿದ್ದ ಸಾಮಗ್ರಿಗಳು ಸುಟ್ಟುಕರಕಲಾಗಿದೆ.
ಪಕ್ಕದ ಮನೆಗೂ ಸ್ವಲ್ಪ ಹಾನಿಯಾಗಿದ್ದು, ತಕ್ಷಣವೇ ಪಾಂಡೇಶ್ವರ, ಕದ್ರಿ, ಬಂಟ್ವಾಳದ ಅಗ್ನಿಶಾಮಕ ದಳದ ಹಾಗೂ ಎಂಸಿಎಫ್ ಸಿಬ್ಬಂದಿ ವರ್ಗವು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದೆ.
ತಡರಾತ್ರಿ ಆರಂಭಗೊಂಡ ಬೆಂಕಿ ನಂದಿಸುವ ಕಾರ್ಯಾಚರಣೆಯು ಮುಂಜಾನೆ 5ರವರೆಗೂ ಮುಂದುವರಿದಿತ್ತು ಎಂದು ಮೂಲಗಳು ತಿಳಿಸಿವೆ.
Next Story







