ಜೆಪ್ಪು: ಹಯಾತುಲ್ ಇಸ್ಲಾಂ ಮದ್ರಸದಲ್ಲಿ ಮಾದಕ ದ್ರವ್ಯ ವಿರುದ್ಧ ಅಭಿಯಾನ
ಎಸ್ ಕೆ ಎಸ್ ಬಿವಿ ಗೆ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಎಸ್ ಕೆ ಐ ಎಮ್ ಬೋರ್ಡ್ ನಿರ್ದೇಶದಂತೆ ರಾಜ್ಯಾದ್ಯಂತ ಆಯೋಜಿಸಿದ್ದ ಮಾದಕ ದ್ರವ್ಯ ವಿರುದ್ಧ ಅಭಿಯಾನ ಹಾಗೂ ಎಸ್ ಕೆ ಎಸ್ ಬಿವಿ ಗೆ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಮೇ 19 ರಂದು ಜೆಪ್ಪು ಕುಡುಪಾಡಿ ಹಯಾತುಲ್ ಇಸ್ಲಾಂ ಮದ್ರಸಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಮದ್ರಸಾ ಸದರ್ ಮುಅಲ್ಲಿಂ ಹಂಝ ಅಶ್ರಫಿ ಅವರು ಮಾದಕ ದ್ರವ್ಯದಿಂದ ಉಂಟಾಗುವ ದುಷ್ಪರಿಣಾಮಗಳನ್ನು ವಿವರಿಸಿದರು.
ಅಧ್ಯಾಪಕರಾದ ಲುಕ್ಮಾನ್ ಸಅದಿ ಮುಖ್ಯ ಭಾಷಣ ಮಾಡಿದರು. ಜಾಫರ್ ಹನೀಫಿ ಪ್ರತಿಜ್ಞಾ ವಿಧಿ ಬೋಧಿಸಿದರು.
ನಂತರ ಸಮಸ್ತ ಅಧೀನದ ಮದ್ರಸಾ ವಿದಾರ್ಥಿಗಳ ಸಂಘಟನೆ ಎಸ್ ಕೆ ಎಸ್ ಬಿವಿಯ ನೂತನ ಪದಾಧಿಕಾರಿಗಳನ್ನು ಸದರ್ ಉಸ್ತಾದರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ಯುನಿಟ್ ಚೇರ್ಮಾನ್ : ಲುಕ್ಮಾನ್ ಸಅದಿ
ಅಧ್ಯಕ್ಷ: ಮುಹಮ್ಮದ್ ರಝೀನ್
ಉಪಾಧ್ಯಕ್ಷರು: ಮಾಹಿರ್, ಫಾಇಖ್, ಹನ್ನಾನ್
ಕಾರ್ಯದರ್ಶಿ: ಮುಹಮ್ಮದ್ ಮುಸ್ತಫಾ
ಜೊತೆ ಕಾರ್ಯದರ್ಶಿಗಳು: ಹಿಶಾಮ್, ಅಹ್ಲನ್
ಖಜಾಂಚಿ: ಮುಹಮ್ಮದ್ ಶುಹೈಬ್
ರೇಂಜ್ ಕೌನ್ಸಿಲರ್ ಗಳು: ಮುಹಮ್ಮದ್ ಸೈಫಾನ್, ಮುಹಮ್ಮದ್ ಸಮೀಹ್, ಮುಹಮ್ಮದ್ ನಿಹಾಲ್
ಮದ್ರಸಾ ವಿದ್ಯಾರ್ಥಿ ನಾಯಕರುಗಳಾಗಿ : ಮುಹಮ್ಮದ್ ರಝೀನ್ ಹಾಗೂ ಫಾತಿಮಾ ತಸ್ನಾ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಅಲ್ಲಿಮರಾದ ಹನೀಫ್ ಸಖಾಫಿ, ಹಾರೂನ್ ರಶೀದ್ ಸಖಾಫಿ, ಶಫೀಖ್ ಸಖಾಫಿ, ಯೂಸುಫ್ ಮುಸ್ಲಿಯಾರ್ ಉಪಸ್ಥಿತರಿದ್ದರು.