ಮಂಗಳೂರು: ಜೆಪ್ಪುವಿನಲ್ಲಿ ನಿರ್ಮಾಣದ ಹಂತದ ಸೇತುವೆ ಕುಸಿತ; ಓರ್ವನಿಗೆ ಗಾಯ

ಮಂಗಳೂರು, ಡಿ.18: ಜೆಪ್ಪುವಿನ ಮಹಾಕಾಳಿಪಡ್ಪುವಿನಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ನಿರ್ಮಾಣವಾಗುತ್ತಿರುವ ರೈಲ್ವೆ ಸೇತುವೆ ಸೋಮವಾರ ಕುಸಿದು ಬಿದ್ದು ಓರ್ವನಿಗೆ ಗಾಯವಾಗಿರುವ ಘಟನೆ ವರದಿಯಾಗಿದೆ.
ಸ್ಲ್ಯಾಬ್ ನಿರ್ಮಾಣ ಕಾಮಗಾರಿ ವೇಳೆ ಕುಸಿತ ಉಂಟಾಗಿದೆ. ಗಾಯಾಳುವಿನ ವಿವರ ಗೊತ್ತಾಗಿಲ್ಲ.
ಮುಂಬೈನ ಸಂಸ್ಥೆಯೊಂದು 50 ಕೋಟಿ ರೂ. ವೆಚ್ಚದ ಕಾಮಗಾರಿಯ ಗುತ್ತಿಗೆಯನ್ನು ವಹಿಸಿಕೊಂಡಿತ್ತು. ಕಳೆದ ಆರು ತಿಂಗಳಿಂದ ಇಲ್ಲಿ ಕಾಮಗಾರಿ ನಡೆಯುತ್ತಿದೆ. 12 ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
Next Story





