ಕಾಜೂರು | ಹಯಾತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಂದ ಮಿಲಾದುನ್ನಭಿ ಕಾರ್ಯಕ್ರಮ

ಕಾಜೂರು : ಮೀಲಾದುನ್ನಬಿ ಪ್ರಯುಕ್ತ ಹಮ್ಮಿಕೊಳ್ಳಲಾದ ಹಯಾತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳ ಕಲಾ ಸ್ಪರ್ಧೆ ಮತ್ತು ಮೌಲಿದ್ ಮಜ್ಲಿಸ್ ಸೋಮವಾರ ತಾಜುಲ್ ಉಲಾಮ ಮಸೀದಿ ಜಿ ನಗರ ಮಸೀದಿ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.
ರಹಮಾನಿಯಾ ಜುಮ್ಮಾ ಮಸೀದಿ ಮತ್ತು ದರ್ಗಾ ಶರೀಫ್ ಕಾಜೂರು ಇದರ ಅಂಗ ಸಂಸ್ಥೆಯಾದ ತಾಜುಲ್ ಉಲಾಮ ಮಸೀದಿ ಜಿ ನಗರ ಹಾಗೂ ನುಸ್ರತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ಜಿ ನಗರ, ಕಾಜೂರು ಇದರ ಆಶ್ರಯದಲ್ಲಿ ಇಶಾಲ್ ಮದೀನಾ ಮೀಲಾದ್ ಫೆಸ್ಟ್ 2025 ಕಾರ್ಯಕ್ರಮ ನಡೆಯಿತು.
ಜಿ ನಗರ ಮಸೀದಿ ಸದರ್ ಉಸ್ತಾದ್ ಫಾರೂಕ್ ಜೌಹರಿ ದುಆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾಜೂರು ಕೇಂದ್ರ ಮಸೀದಿ ಅಧ್ಯಕ್ಷ ಕೆ ಯು ಇಬ್ರಾಹಿಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಕೆ ಪಿ ಸಯ್ಯದ್ ಝೈನುಲ್ ಅಬಿದೀನ್ ಜಮಾಲುಲ್ಲೈಲಿ ತಂಙಲ್ ಕಾಜೂರು ಸಂದೇಶ ಭಾಷಣ ನೀಡಿದರು. ನವಾಝ್ ಕಾಜೂರು ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಅಬ್ದುಲ್ ರಹೀಂ ಹನೀಫಿ ಅಸಂಶ ಭಾಷಣ ನೀಡಿ, ಮೌಲಿದ್ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ತಾಜುಲ್ ಉಲಾಮಾ ಮಸೀದಿ ಜಿ ನಗರ ಅಧ್ಯಕ್ಷ ಕೆ.ಪಿ.ಮುಹಮ್ಮದ್, ನುಸ್ರತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ರಿಯಾಝ್ ನೆಲ್ಲಿ ಗುಡ್ಡೆ, ಮತ್ತು ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕಲಾ ಪ್ರದರ್ಶನ, ಧಾರ್ಮಿಕ ಭಾಷಣ ಮತ್ತು ಮಜ್ಲಿಸ್ ನಡೆಯಿತು.







