ಕನ್ಯಾನ: ಎನ್.ಕೆ.ಈಶ್ವರ ಭಟ್ ನೀರ್ಪಾಜೆ ನಿಧನ

ವಿಟ್ಲ, ಅ.12 : ಕನ್ಯಾನ ನಿವಾಸಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ, ಸಂಘಟಕ, ಕನ್ಯಾನ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎನ್.ಕೆ.ಈಶ್ವರ ಭಟ್ ನೀರ್ಪಾಜೆ(84) ಅವರು ಅಸೌಖ್ಯದಿಂದ ಅ.12ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಈಶ್ವರ ಭಟ್ ಅವರು ಕನ್ಯಾನ ಗ್ರಾ.ಪಂ.ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ಯಾನ ಸರಕಾರಿ ಪ.ಪೂ. ಕಾಲೇಜು, ಕನ್ಯಾನ, ಬಂಡಿತ್ತಡ್ಕ ಶಾಲಾಭಿವೃದ್ದಿ ಸಮಿತಿಯಲ್ಲಿ ಮತ್ತು ಕನ್ಯಾನ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿ ಸಂಘದಲ್ಲಿ ಶ್ರಮಿಸಿದ್ದಾರೆ.
ಕನ್ಯಾನ ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿ, ಕನ್ಯಾನ ಯಕ್ಷಗಾನ ಸಂಘ ಮತ್ತು ಯುವಕ ಸಂಘದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನ ಹವ್ಯಾಸಿ ಕಲಾವಿದರಾಗಿದ್ದ ಅವರು ತಾಳಮದ್ದಳೆ ಅರ್ಥಧಾರಿಯಾಗಿ, ಪಾತ್ರಧಾರಿಯಾಗಿದ್ದುಕೊಂಡು ಸ್ವತಃ ಸಂಘಟಿಸುತ್ತಿದ್ದರು.
ಮೃತರು ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story





