ಕೊಳತ್ತಮಜಲು: ಅಬ್ದುಲ್ ರಹ್ಮಾನ್ ಮನೆಗೆ ಕರ್ನಾಟಕ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಶಾಫಿ ಸಅದಿ ಭೇಟಿ

ಮಂಗಳೂರು: ಕೊಳತ್ತಮಜಲಿನಲ್ಲಿ ಕೋಮು ದ್ವೇಷಕ್ಕೆ ಬಲಿಯಾದ ಅಬ್ದುಲ್ ರಹ್ಮಾನ್ ಮನೆಗೆ ಕರ್ನಾಟಕ ವಕ್ಫ್ ಕೌನ್ಸಿಲ್ ಇದರ ಉಪಾಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ಅವರು ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ನೀಡಿದರು.
ನಿಯೋಗದಲ್ಲಿ ವಕ್ಫ್ ಕೌನ್ಸಿಲ್ ಸದಸ್ಯರಾದ ಅನೀಸ್ ಕೌಸರಿ, ವಕ್ಫ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿಎ ನಾಸಿರ್ ಲಕ್ಕಿ ಸ್ಟಾರ್ , ಚಿಕ್ಕಮಗಳೂರು ವಕ್ಫ್ ಅಧ್ಯಕ್ಷ ಸಾಹಿದ್ ರಝ್ವಿ , ಉಡುಪಿ ಜಿಲ್ಲಾ ಅಧ್ಯಕ್ಷರು ಸಿ ಹೆಚ್ ಅಬ್ದುಲ್ ಮುತ್ತಲಿಬ್ ವಂಡ್ಸೆ, ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಮ್ ಮೋಂಟುಗೊಳಿ, ಕೋಶಾಧಿಕಾರಿ ಮನ್ಸೂರ್ ಕೋಟು ಗದ್ದೆ, ಕೆ.ಸಿ.ಎಫ್ ರಾಷ್ಟೀಯ ನಾಯಕ ಹಂಝ ಮೈಂದಾಳ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಅಶ್ರಫ್ ಸಅದಿ ಮಲ್ಲೂರು, ಅಶ್ರಫ್ ಕಿನಾರ, ಎಸ್ ವೈ ಎಸ್ ನಾಯಕರಾದ ಅಡ್ವೊಕೇಟ್ ಹಂಝತ್ , ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಹಸೈನಾರ್ ಆನೆಮಹಲ್ , ಬದ್ರುದ್ದೀನ್ ಅಝ್ಝರಿ, ಸತ್ತಾರ್ ಸಖಾಫಿ , ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ , ನವಾಝ್ ಸಖಾಫಿ ಅಡ್ಯಾರ್ ಪದವು, ರಿಯಾಝ್ ಸಅದಿ , ಎಸ್ ಎಸ್ ಎಫ್ ರಾಜ್ಯ ಕೋಶಾಧಿಕಾರಿ ಇರ್ಷಾದ್ ಹಾಜಿ ಗೂಡೀನಬಳಿ, ರಷೀದ್ ವಗ್ಗ, ನಜೀಬ್ ಕೈಕಂಬ, ಅಬೂಬಕ್ಕರ್ ಸಿದ್ದೀಕ್ ಕಾಜೂರು, ಅಬ್ದುರ್ರಹ್ಮಾನ್ ಮೊಗರ್ಪನೆ, ಸೈದುದ್ದೀನ್ , ರಝಾಕ್ ಭಾರತ್, ಹಬೀಬ್ ಅಡ್ಡೂರು, ಸ್ಥಳೀಯ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ , ಸಿರಾಜ್ ಬಜ್ಪೆ, ನಿಸಾರ್ ಕರಾವಳಿ, ಅಬೂಬಕ್ಕರ್ ಸಜಿಪ, ಬಶೀರ್ ಕೈಕಂಬ , ಆಸೀಪ್ ಸ ಅದಿ ಕೈಕಂಬ ಸಹಿತ ಹಲವು ನಾಯಕರು ಉಪಸ್ಥಿತರಿದ್ದರು.