ನಡುಪದವು | ʼಚೈತನ್ಯ ಸಾಧನೆ ಸ್ವಚ್ಛ ಮನೆ ಘೋಷಣೆʼ ಕಾರ್ಯಕ್ರಮ

ಕೊಣಾಜೆ: ಬಾಳೆ ಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡುಪದವು ಪ್ರದೇಶದ ಸರ್ವ ಕುಟುಂಬಗಳೂ ಮನೆಗಳಲ್ಲಿ ಸೃಷ್ಠಿಯಾಗುವ ಹಸಿ, ಒಣ, ಅಪಾಯಕಾರಿ ಕಸಗಳನ್ನು ವಿಂಗಡಿಸಿ ಪಂಚಾಯತ್ ನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ನೀಡಿ ಸ್ವಚ ಮನೆ ಸ್ವಯಂ ಘೋಷಣೆ ಪತ್ರಗಳನ್ನು ಸಲ್ಲಿಸುವ ಮೂಲಕ ನಡುಪದವನ್ನು ಸ್ವಚ್ಚ ಹಸಿರು ನಡುಪದವು ಘೋಷಣೆಗೆ ಸಂಕಲ್ಪ ಮಾಡಲಾಯಿತು.
ಬಾಳೆ ಪುಣಿ ಗ್ರಾಮ ಪಂಚಾಯತ್, ಜನ ಶಿಕ್ಷಣ ಟ್ರಸ್ಟ್ ನಡುಪದವು ರಿಹಾಬ್ ಸೆಂಟರ್ ಸಹಯೋಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚೈತನ್ಯ ಸಾಧನೆ ಸ್ವಚ್ಛ ಮನೆ ಘೋಷಣೆ ಕಾರ್ಯಕ್ರಮದಲ್ಲಿ ಈ ಸಂಕಲ್ಪ ಮಾಡಲಾಯಿತು.
ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ ಘನ ತ್ಯಾಜ್ಯಗಳನ್ನು ಸಂಪನ್ಮೂಲವಾಗಿ ಪರಿವರ್ತಿಸಿ ಶೂನ್ಯ ಕಸ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ರೋಗ ಮುಕ್ತ ಆರೋಗ್ಯ ಕರ ಬದುಕಿಗೆ ಸ್ವಚ್ಚತೆಯ ಮಹತ್ವ ಮತ್ತು ಅಗತ್ಯದ ಬಗ್ಗೆ ಮುಡಿಪು ಪ್ರೌಢ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಇಬ್ರಾಹಿಂ ನಡುಪದವು, ಉದ್ಯಮಿ ನಾಸಿರ್ ನಡುಪದವು ಪಂ.ಕಾರ್ಯದರ್ಶಿ ಆಯಿಷಾ ಬಾನು ಮಾಹಿತಿ ನೀಡಿದರು. ವಿಶೇಷ ಚೇತನರಿಗೆ ಪಂಚಾಯತ್ ವತಿಯಿಂದ ವಿಶೇಷ ನೆರವಿನ ಚೆಕ್ ವಿತರಿಸಲಾಯಿತು. ಪಂ ಸದಸ್ಯರಾದ ಲಿಡಿಯ, ಅಂಜಲಿ, ರಜಿಯಾ ಮುಖ್ಯ ಶಿಕ್ಷಕಿ ಪ್ರೇಮ, ಕಾವ್ಯ ಉಪಸ್ಥಿತರಿದ್ದರು.
ಗ್ರಾ.ಪಂ.ಉಪಾಧ್ಯಕ್ಷ ಯಸ್ ಡಿ ಯಮ್ ಸಿ ಅಧ್ಯಕ್ಷ ಶರೀಫ್ ಪಟ್ಟೋರಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.







