ಕೊಣಾಜೆ | ಕೋಡಿಜಾಲ್ ರಿಫಾಯಿ ಜುಮಾ ಮಸ್ಜಿದ್‌ನಲ್ಲಿ ಮಿಲಾದುನ್ನಭಿ ಆಚರಣೆ

ಕೊಣಾಜೆ : ರಿಫಾಯಿ ಜುಮಾ ಮಸ್ಜಿದ್ ಕೋಡಿಜಾಲ್, ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ಕೋಡಿಜಾಲ್ ಹಾಗೂ ಕೆಎಸ್ಎ ಘಟಕ ಮತ್ತು ಹಯಾತುಲ್ ಇಸ್ಲಾಂ ಮದ್ರಸ ಕೋಡಿಜಾಲ್ ಇದರ ವತಿಯಿಂದ 1,500ನೇ ವರ್ಷದ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ. ಅ) ರವರ ಜನ್ಮ ದಿನಾಚರಣೆಯ ಅಂಗವಾಗಿ ಮಸೀದಿಯ ಹಿರಿಯ ಸ್ಥಾಪಕ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಗುರುವಾರ ನಡೆಯಿತು.
ಹಿರಿಯ ಸ್ಥಾಪಕ ಸದಸ್ಯರಾದ ಹಾಜಿ ಮುಹಮ್ಮದ್ ಗ್ರೀನ್ ಲ್ಯಾಂಡ್ ಕೋಡಿಜಾಲ್, ಹಾಜಿ ಡಿ.ಮುಹಮ್ಮದ್ ಕೋಡಿಜಾಲ್, ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಅಬೂಬಕ್ಕರ್ ಕೊಣಾಜೆ, ಉಸ್ಮಾನ್ ಕೆಎಸ್ ಕೋಡಿಜಾಲ್, ಅಬ್ದುಲ್ಲಾ ಕೆ.ಎಸ್ ಕೋಡಿಜಾಲ್, ಕೊಳ ಖಾದರ್ ಹಾಜಿ ಕೋಡಿಜಾಲ್, ಅಬ್ದುಲ್ ಖಾದರ್ ಅಂದುಚ್ಚ ಕೋಡಿಜಾಲ್, ಮುಹಮ್ಮದ್ ಗುಂಡ್ಯ, ಇಬ್ರಾಹಿಂ ಕೆಎಕೆ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಎಸೆಸೆಲ್ಸಿ, ಪಿಯುಸಿ ಹಾಗು ಡಿಗ್ರಿ ಅಂತಿಮ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಹಾಗೂ ಅವರ ಆಪ್ತ ಸಹಾಯಕರಾದ ಲಿಬ್ಝತ್ ಅವರನ್ನು ಗೌರವಿಸಲಾಯಿತು. ನಿವೃತ ಶಿಕ್ಷಕರಾದ ರವೀಂದ್ರ ರೈ ಹರೇಕಳ, ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬಳಿಕ ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ ಗುರುವಾರ ಮತ್ತು ಶುಕ್ರವಾರ ನಡೆಯಿತು. ಮಸ್ಜಿದ್ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಯಾತುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಮ್ ಮಹಮ್ಮದ್ ಝಾಕೀರ್ ಅನ್ಸಾರಿ ಉದ್ಘಾಟನೆಯನ್ನು ನೆರವೇರಿಸಿದರು.
ಮಸ್ಜಿದ್ ಖತೀಬರಾದ ಉವೈಸ್ ಮದನಿ ಅಲ್ ಅಝ್ಜರಿ ಮಿಲಾದ್ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಮಸ್ಜಿದ್ ಮುಹಝಿನ್ ಅಬ್ದುಲ್ ಮಜೀದ್ ಫೈಝಿ, ಇಬ್ರಾಹಿಂ ಮುಸ್ಲಿಯಾರ್, ಕಾರ್ಯದರ್ಶಿ ಸೂಫಿ ಕುಂಞಿ ಕೋಡಿಜಾಲ್, ಮಸೂದ್ ಗುಂಡ್ಯ, ಕೆ.ಐ.ಎ ಅಧ್ಯಕ್ಷ ಅಮೀರ್ ಕೋಡಿಜಾಲ್, ಕೆ.ಐ.ಎ ಕೆಎಸ್ಎ ಅಧ್ಯಕ್ಷ ಅನ್ಸಾರ್ ಕೋಡಿಜಾಲ್ , ಪ್ರಧಾನ ಕಾರ್ಯದರ್ಶಿ ಶರೀಫ್ ಕೋಡಿಜಾಲ್, ಕೋಶಾಧಿಕಾರಿ ಅಶ್ರಫ್ ಕೋಡಿಜಾಲ್, ಮದ್ರಸ ಆಡಳಿತ ಸಮಿತಿಯ ಇಬ್ರಾಹಿಂ ಕೆಎಂ ಕೋಡಿಜಾಲ್, ಹಸೈನಾರ್ ಕೊಣಾಜೆ, ಹಸನ್ ಕುಂಞಿ ಕೋಡಿಜಾಲ್ ಮತ್ತಿತರರು ಉಪಸ್ಥಿತರಿದ್ದರು.
ಕೊನೆಯಲ್ಲಿ ಮದ್ರಸ ವಿದ್ಯಾರ್ಥಿಗಳಿಗೆ ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ಕೋಡಿಜಾಲ್ ಕೆಎಸ್ಎ ಘಟಕದ ವತಿಯಿಂದ ಬಹುಮಾನ ವಿತರಿಸಲಾಯಿತು. ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೋಡಿಜಾಲ್ ಸ್ವಾಗತಿಸಿದರು. ಕೆ.ಐ.ಎ ಗೌರವಾಧ್ಯಕ್ಷ ಎಕೆ.ರಹಿಮಾನ್ ಕೋಡಿಜಾಲ್ ವಂದಿಸಿದರು.







