ಕೃಷ್ಣಾಪುರ: ಅಬೂಬಕ್ಕರ್ ಎನ್ಎಮ್‌ಪಿಟಿ, ಫಾಯಿಝ್ ಸಿ.ಎ ಗೆ ಸನ್ಮಾನ

ಸುರತ್ಕಲ್: ಇಂಡಿಯನ್ ನ್ಯಾಷನಲ್ ಪೋರ್ಟ್ ಹಾಗೂ ಡಾಕ್ ವರ್ಕಸ್ ಫೆಡರೇಷನ್ ಇಂಟಕ್ ಇದರ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಅಬೂಬಕ್ಕರ್ ಎನ್ ಎಮ್ ಪಿ ಟಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಫಾಯಿಝ್ ಸಿ.ಏ ಇವರನ್ನು ಕೃಷ್ಣಾಪುರ ಏಳನೇ ಬ್ಲಾಕ್ ಬಿ.ಕೆ ಸಂಘ ವತಿಯಿಂದ ಕೃಷ್ಣಾಪುರ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸನ್ಮಾನಿಸಲಾಯಿತು.
ಬಿ.ಕೆ ಸಂಘದ ಅಧ್ಯಕ್ಷ ಬಿ.ಕೆ ಬಶೀರ್, ಸ್ಥಳೀಯ ಖತೀಬ್ ಉಮರುಲ್ ಫಾರೂಖ್ ಸಖಾಫಿ ಹಾಗೂ ಸಿನಾನ್ ಬಿ.ಕೆ ಅವರು ಸನ್ಮಾನಿಸಿದರು.
ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಝಾಕೀರ್ ಹುಸೈನ್, ಕಾರ್ಯದರ್ಶಿ ನಝೀರ್, ಹುಸೈನ್ ಬಡಗ, ಇಸ್ಮಾಯಿಲ್ ಉಂಞ, ಅಬೂಬಕ್ಕರ್ ಕನ್ನಡ ನಾಡು, ತೋಟ ಮುಹಮ್ಮದಲಿ, ಅಫ್ರೀದ್ , ಬಿ.ಎಂ .ಅಬೂಸ್ವಾಲಿಹ್, ಅಶ್ರಫ್, ನಿಸಾರ್ ಮುಂತಾದವರು ಉಪಸ್ಥಿತರಿದ್ದರು.
Next Story