ಮಂಗಳೂರು: ಡಿ.17ರಿಂದ 20ರವರೆಗೆ ಲ್ಯಾಂಡ್ ಟ್ರೇಡ್ಸ್ ಪ್ರಾಪರ್ಟಿ ಶೋ
‘ಲ್ಯಾಂಡ್ ಟ್ರೇಡ್ಸ್’ನ 32ನೇ ವರ್ಷದ ಸಂಭ್ರಮಾಚರಣೆ

ಮಂಗಳೂರು: ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ವತಿಯಿಂದ 5ನೇ ಆವೃತ್ತಿಯ ‘ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಪ್ರಾಪರ್ಟಿ ಶೋ’ ಡಿ.17ರಿಂದ 20ರವರೆಗೆ ಬಲ್ಮಠದ ಮೈಲ್ಸ್ಟೋನ್-25 ಬಿಲ್ಡಿಂಗ್ ನ 5ನೇ ಮಹಡಿಯಲ್ಲಿ ನಡೆಯಲಿದೆ.
‘ಲ್ಯಾಂಡ್ ಟ್ರೇಡ್ಸ್’ ಸಂಸ್ಥೆಯು ಕಳೆದ 4 ವರ್ಷಗಳಿಂದ ಪ್ರತೀ ಡಿಸೆಂಬರ್ ನಲ್ಲಿ ಪ್ರಾಪರ್ಟಿ ಶೋ ಏರ್ಪಡಿಸುತ್ತಿದೆ. ಈ ಶೋದಲ್ಲಿ ನೂತನ ಯೋಜನೆಗಳು ಮತ್ತು ಆರ್ಥಿಕ ಮಾರ್ಗದರ್ಶನದ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಅನೇಕ ರಾಷ್ಟ್ರೀಕೃತ ಬ್ಯಾಂಕ್ ಗಳು ಹಾಗೂ ಖಾಸಗಿ ಬ್ಯಾಂಕ್ ಗಳೂ ಇದ ರಲ್ಲಿ ಭಾಗವಹಿಸಲಿದ್ದು, ಸ್ಥಳದಲ್ಲೇ ಖರೀದಿ ಮಾಡಲು ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆ ವ್ಯವಸ್ಥೆ ಮಾಡಿದೆ ಎಂದು ಪ್ರಕಟನೆ ತಿಳಿಸಿದೆ.
32ನೇ ವರ್ಷದ ಸಂಭ್ರಮಾಚರಣೆ
ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ನ 32ನೇ ವರ್ಷದ ಸಂಭ್ರಮದ ಪ್ರಯುಕ್ತ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ನ ಗ್ರಾಹಕರು, ಹಿತೈಷಿಗಳು, ಮಾರ್ಗದರ್ಶಕರು ವ್ಯವಹಾರ ಸಹವರ್ತಿಗಳು ಮತ್ತು ಮಾಧ್ಯಮ ಸದಸ್ಯರಿಗೆ ಧನ್ಯವಾದ ಸಮರ್ಪಣೆ ಮಾಡಲಾಯಿತು.
1992ರ ಅ.28ರಂದು ಮಂಗಳೂರಿನಲ್ಲಿ ಕೆ. ಶ್ರೀನಾಥ್ ಹೆಬ್ಬಾರ್ ಮೊದಲ ತಲೆಮಾರಿನ ಉದ್ಯಮವಾಗಿ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆ ಸ್ಥಾಪಿಸಿದರು. ಈಗ ಸಂಸ್ಥೆಯು ಮಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮ ವಲಯದಲ್ಲಿ, ತನ್ನದೇ ಆದ ಯಶಸ್ವಿ ಪರಂಪರೆಯನ್ನು ಹೊಂದಿದೆ. ಕಾರ್ಕಳದ ಪುಟ್ಟ ಹಳ್ಳಿ ಕಬ್ಬಿನಾಲೆಯಿಂದ ಅನೇಕ ಕನಸುಗಳನ್ನು ಹೊತ್ತು ಮಂಗಳೂರಿಗೆ ಬಂದ ಹೆಬ್ಬಾರ್, ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಮೂಲಕ ಕನಸುಗಳನ್ನು ನನಸಾಗಿಸಿದರು. ಗ್ರಾಹಕರಿಗೆ ಸರ್ವಶ್ರೇಷ್ಠ ಕೊಡುಗೆಗಳನ್ನು ನೀಡುತ್ತಾ ಸತತ ಪರಿಶ್ರಮದಿಂದ ಈ ಎತ್ತರವನ್ನು ಸಾಧಿಸಿದರು ಎಂದು ಪ್ರಕಟನೆ ತಿಳಿಸಿದೆ.
ಆಸ್ತಿ ವ್ಯವಹಾರದ ಕನ್ಸಲ್ಟನ್ಸಿಯಾಗಿ ಆರಂಭವಾದ ಲ್ಯಾಂಡ್ ಟ್ರೇಡ್ಸ್ ಮುಂದೆ ಗೃಹ ನಿವೇಶನಗಳ ಅಭಿವೃದ್ಧಿ ಉದ್ಯಮದಲ್ಲಿ 1993ರಲ್ಲಿ ಜೆಪ್ಪುಬಪ್ಪಲ್ ನಲ್ಲಿ ಮೊದಲ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿತು. ಎಲ್ಲ ವರ್ಗದ ಜನರಿಗೆ ಸಾಧ್ಯವಾಗುವಂತೆ ಬೃಹತ್, ಮಧ್ಯಮ, ಸಣ್ಣ ಪ್ರಮಾಣದ 25 ಗೃಹ ಬಡಾವಣೆಗಳನ್ನು ನಿರ್ಮಿಸಲಾಯಿತು. 21ನೇ ಶತಮಾನದ ಅಪಾರ್ಟ್ಮೆಂಟ್ ಸಂಸ್ಕೃತಿಗೆ ಅನುಗುಣವಾಗಿ 2008ರಲ್ಲಿ ಅಸ್ಟೋರಿಯಾ, ಮುಂದೆ ಪ್ರೀಮಿಯಂ ಯೋಜನೆಗಳಾದ ಸಾಲಿಟೇರ್, ಸಾಯಿ ಗ್ರಾಂಡ್ಯೂರ್, ನಕ್ಷತ್ರ, ಮೌರಿಷ್ಕ ಪ್ಯಾಲೇಸ್, ಅಟ್ಲಾಂಟಿಸ್, ಅದೀರಾ, ಮೈಲ್ಸ್ಟೋನ್-25 ಇತ್ಯಾದಿ ನಿರ್ಮಾಣಗೊಂಡವು. ಈಗ ಕದ್ರಿಯಲ್ಲಿ ಶಿವಭಾಗ್, ಬೆಂದೂರ್ವೆಲ್ನಲ್ಲಿ ಅಲ್ಟೂರ, ಚಿಲಿಂಬಿಯಲ್ಲಿ ಪ್ರಿಸ್ಟಿನ್, ಪಿವಿಎಸ್ ಜಂಕ್ಷನ್ ಬಳಿ ವಿಕ್ರಂ ನಿರ್ಮಾಣವಾಗುತ್ತಿದೆ. ಇದಲ್ಲದೇ ವಾಸ್ಲೇನ್ ನಲ್ಲಿ ಬಿಎಂಕೆ ಸ್ಕೈ ವಿಲ್ಲಾ ಹಾಗೂ ಅಳಕೆ ಕಂಬ್ಳದಲ್ಲಿ ಬಹುಮಹಡಿ ವಸತಿ ನಿಯೋಜನೆಗಳು ಪ್ರಾರಂಭವಾಗಲಿವೆ.
ನಿರ್ಮಾಣ ಕ್ಷೇತ್ರದ ಗರಿಷ್ಠ ಸಾಧನೆಗಳಾಗಿ ಐಎಸ್ಒ 9001:2015 ಮಾನ್ಯತೆ, ಕ್ರಿಸಿಲ್ನಿಂದ ಡಿಎ2 ಡೆವಲಪರ್ಸ್ ರೇಟಿಂಗ್ ಮಾನ್ಯತೆ ಇವು ಸಂಸ್ಥೆಗೆ ಬಂದ ಗರಿಮೆಗಳು. ಈವರೆಗೆ 42.52 ಲಕ್ಷ ಚ.ಅಡಿ ನಿರ್ಮಾಣವನ್ನು ಮುಕ್ತಾಯಗೊಳಿಸಿ ಹಸ್ತಾಂತರಿಸಿದ ಸಂಸ್ಥೆಯು ಇದೀಗ 11.70 ಲಕ್ಷ ಚ.ಅಡಿ ನಿರ್ಮಾಣವನ್ನು ಕೈಗೆತ್ತಿಗೊಂಡಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ರೂಪೇಶ್ ಶೆಟ್ಟಿ ಬ್ರ್ಯಾಂಡ್ ಅಂಬಾಸಡರ್
ಬಿಗ್ ಬಾಸ್ ಸೀಸನ್-9ರ ವಿಜೇತ, ಚಿತ್ರನಟ ರೂಪೇಶ್ ಶೆಟ್ಟಿಯವರು ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ನ ಬ್ರ್ಯಾಂಡ್ ಅಂಬಾಸಡರ್ ಆಗಿ ನಿಯೋಜನೆಗೊಂಡಿದ್ದಾರೆ. ಅವರ ಕಲಾ ಉತ್ಸಾಹ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ನ 32ರ ಸಂಭ್ರಮದ ಜೊತೆಗೆ ಮೇಳೈಸಿದೆ ಅನ್ನುವುದು ಹೆಮ್ಮೆಯ ಸಂಗತಿ ಎಂದು ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವೆಲಪರ್ಸ್ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಹೇಳಿದ್ದಾರೆ.







