ಲಂಡನ್: ಬ್ರಿಟಿಷ್ ಸೇಫ್ಟಿ ಕೌನ್ಸಿಲ್ ನಿಂದ ಬ್ಯಾರೀಸ್ ಗ್ರೂಪ್ ಗೆ ‘ಸೋರ್ಡ್ ಆಫ್ ಆನರ್' ಜಾಗತಿಕ ಗೌರವ

ಬೆಂಗಳೂರು: ಚೆನ್ನೈನ ಅಂಬತ್ತೂರ್ ನಲ್ಲಿ ಬ್ಯಾರೀಸ್ ಗ್ರೂಪ್ ನಿರ್ಮಾಣ ಮಾಡಿದ ಎನ್‌ಟಿಟಿ NTT ಗ್ಲೋಬಲ್ ಡೇಟಾ ಸೆಂಟರ್ ಯೋಜನೆಗೆ ಬ್ರಿಟಿಷ್ ಸೇಫ್ಟಿ ಕೌನ್ಸಿಲ್ ನೀಡುವ ಪ್ರತಿಷ್ಠಿತ ‘ಸೋರ್ಡ್ ಆಫ್ ಆನರ್’ ಪ್ರಶಸ್ತಿ ಲಭಿಸಿದೆ. ಕೆಲಸದ ಸ್ಥಳದಲ್ಲಿ ಸುರಕ್ಷತೆ, ಆರೋಗ್ಯ ಹಾಗೂ ಪರಿಸರ ಸ್ನೇಹಿ ನಿರ್ವಹಣೆಯಲ್ಲಿ ಜಾಗತಿಕ ಶ್ರೇಷ್ಠತೆಯನ್ನು ಪ್ರತಿಬಿಂಬಿಸುವ ವಿಶೇಷ ಮಾನ್ಯತೆ ಇದಾಗಿದೆ.
ಈ ಗೌರವವನ್ನು ನ. 28, 2025ರಂದು ಲಂಡನ್‌ನ ಐತಿಹಾಸಿಕ ಡ್ರೇಪರ್ಸ್ ಹಾಲ್ ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ ಹಾಗೂ ಬ್ಯಾರೀಸ್ ಗ್ರೂಪ್ ಜನರಲ್ ಮ್ಯಾನೇಜರ್(Q& HSE) ಬಾಲಸುಬ್ರಹ್ಮಣ್ಯನ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಉದ್ಯೋಗ ಸ್ಥಳದಲ್ಲಿನ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಅತ್ಯುನ್ನತ ಸಾಧನೆ ಹಾಗೂ ಮಾದರಿ ಕಾರ್ಯಕ್ಷಮತೆಗೆ ಜಗತ್ತಿನ ವಿವಿಧ ದೇಶಗಳಿಂದ ಆಯ್ಕೆಯಾದ ಪ್ರಮುಖ ಸಂಸ್ಥೆಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.
ಬ್ರಿಟಿಷ್ ಸೇಫ್ಟಿ ಕೌನ್ಸಿಲ್ ನಡೆಸಿದ ಕಟ್ಟುನಿಟ್ಟಿನ ಆರೋಗ್ಯ–ಸುರಕ್ಷತಾ ಮೌಲ್ಯಮಾಪನದಲ್ಲಿ ಎನ್‌ಟಿಟಿ NTTಚೆನ್ನೈ ಫೈವ್ ಸ್ಟಾರ್ ರೇಟಿಂಗ್ ಪಡೆದುಕೊಂಡಿದ್ದು, ನಂತರದ ತೀರ್ಪುಗಾರರ ಹಂತದಲ್ಲಿಯೂ ಅತ್ಯುನ್ನತ ಅಂಕಗಳನ್ನು ಗಳಿಸುವ ಮೂಲಕ ಜಾಗತಿಕವಾಗಿ ಶ್ರೇಷ್ಠ ಯೋಜನೆಗಳ ಪಟ್ಟಿಗೆ ಸೇರಿದೆ.
ಬ್ಯಾರೀಸ್ ಗ್ರೂಪ್ ಮತ್ತು ಎನ್‌ಟಿಟಿ NTT ಗ್ಲೋಬಲ್ ನಡುವೆ ದೀರ್ಘಕಾಲದಿಂದ ಇರುವ ಸಹಯೋಗಕ್ಕೆ ಈ ಪ್ರತಿಷ್ಠಿತ ಗೌರವ ಮತ್ತಷ್ಟು ಬಲ ತುಂಬಿದ್ದು, ನಾವೀನ್ಯತೆ ಹಾಗೂ ಜಾಗತಿಕ ಅತ್ಯುತ್ತಮ ವಿಧಾನಗಳ ಪಾಲನೆಯಲ್ಲಿ ಎರಡೂ ಸಂಸ್ಥೆಗಳು ಅನುಸರಿಸುವ ಮೌಲ್ಯಗಳಿಗೆ ಜಾಗತಿಕ ಮಾನ್ಯತೆ ಸಿಕ್ಕಿದೆ.
ಈ ಸಾಧನೆಯು ಬ್ಯಾರೀಸ್ ಗ್ರೂಪ್ ಸುರಕ್ಷಿತ ಮತ್ತು ಸುಸ್ಥಿರ ನಿರ್ಮಾಣ ಪದ್ಧತಿಗಳತ್ತ ತೋರಿದ ನಿರಂತರ ಬದ್ಧತೆಗೆ ಲಭಿಸಿದ ಪ್ರಮುಖ ದೃಢೀಕರಣ. ಕೆಲಸದ ಸ್ಥಳದಲ್ಲಿ ಉದ್ಯೋಗಿಗಳ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆ ನಮಗೆ ಕೇವಲ ನಿಯಮ ಪಾಲನೆಯ ವಿಷಯವಲ್ಲ, ಇದು ನೈತಿಕ ಜವಾಬ್ದಾರಿ. ಭಾರತದ ನಿರ್ಮಾಣ ಕ್ಷೇತ್ರವನ್ನು ವಿಶ್ವದ ಉನ್ನತ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ರೂಪಿಸುವಲ್ಲಿ ಈ ಗೌರವ ಒಂದು ಮಹತ್ವದ ಮೈಲಿಗಲ್ಲಾಗಿದೆ ” ಎಂದು ಬ್ಯಾರೀಸ್ ಗ್ರೂಪ್ ಸ್ಥಾಪಕಾಧ್ಯಕ್ಷ ಸೈಯ್ಯದ್ ಮೊಹಮ್ಮದ್ ಬ್ಯಾರಿ ಪ್ರತಿಕ್ರಿಯಿಸಿದ್ದಾರೆ.







