Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಾಚಾರ್ ಸಅದಿಗೆ 'ಫಿದಾಕ್ ಅವಾರ್ಡ್-24'

ಮಾಚಾರ್ ಸಅದಿಗೆ 'ಫಿದಾಕ್ ಅವಾರ್ಡ್-24'

ವಾರ್ತಾಭಾರತಿವಾರ್ತಾಭಾರತಿ30 Nov 2024 10:30 AM IST
share
ಮಾಚಾರ್ ಸಅದಿಗೆ ಫಿದಾಕ್ ಅವಾರ್ಡ್-24

ಬಂಟ್ವಾಳ: ಮಾಣಿ ದಾರುಲ್ ಇರ್ಶಾದ್ ಅಧೀನದ ಕೆಜಿಎನ್ ದಅ್ವಾ ಕಾಲೇಜ್ ವಿದ್ಯಾರ್ಥಿ ಸಂಘಟನೆ ಮುಈನುಸ್ಸುನ್ನಃ ನೀಡುವ 'ಫಿದಾಕ್ ಅವಾರ್ಡ್ -24'ಕ್ಕೆ ಯುವ ವಿದ್ವಾಂಸ, ಸುನ್ನಿ ಬರಹಗಾರ ಎಂ.ಇಸ್ಮಾಯೀಲ್ ಸಅದಿ ಅಲ್ ಅಫ್ಳಳಿ (ಮಾಚಾರ್ ಸಅದಿ) ಆಯ್ಕೆಯಾಗಿದ್ದಾರೆ.

ಇಫಾದ ಎಂಬ ದೈನಂದಿನ ಧ್ವನಿ ಪ್ರವಚನದ ಮೂಲಕ ಮತ್ತು ಅರಬಿ ಭಾಷೆಯಲ್ಲಿರುವ ಬುರ್ದಾ ಎಂಬ ಪ್ರವಾದಿ ಕೀರ್ತನಕಾವ್ಯದ ಕನ್ನಡ ಭಾವಾನುವಾದ ಸೇರಿದಂತೆ 47 ಕೃತಿಗಳನ್ನು ರಚಿಸಿರುವ ಮಾಚಾರ್ ಸಅದಿ ಪ್ರವಾದಿ(ಸ)ರ ನಡೆನುಡಿಗಳ ಜ್ಞಾನ ಪ್ರಸಾರ ಮಾಡಿರುವ ಸಾಧನೆಯನ್ನು ಗುರುತಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕೆಜಿಎನ್ ದಅ್ವಾ ಕಾಲೇಜು ಪ್ರಾಂಶುಪಾಲ ಸೈಯದ್ ಸ್ವಲಾಹುದ್ದೀನ್ ಜಮಲುಲ್ಲೈಲಿ ಅಲ್ ಅದನಿ, ಖ್ಯಾತ ಬರಹಗಾರ ಎಸ್.ಪಿ. ಹಂಝ ಸಖಾಫಿ, ಉಪನ್ಯಾಸಕ ಎ.ಕೆ.ನಂದಾವರವನ್ನೊಳಗೊಂಡ ಆಯ್ಕೆ ಸಮಿತಿಯು ಮಾಚಾರ್ ಸಅದಿಯವರನ್ನು ಪ್ರಶಸ್ತಿಗೆ ಅಂತಿಮಗೊಳಿಸಿದೆ.

ಡಿ.9ರಂದು ನಡೆಯುವ ಕೆಜಿಎನ್ ಕಾಲೇಜು ವಾರ್ಷಿಕೋತ್ಸವ-ಫಿದಾಕ್ ಸಮಾರೋಪದಲ್ಲಿ ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿಯವರು ಮಾಚಾರ್ ಸಅದಿಯವರಿಗೆ ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿಯು 25,000 ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರಲಿದೆ ಎಂದು ಮುಈನುಸ್ಸುನ್ನ ಪ್ರಕಟನೆ ತಿಳಿಸಿದೆ.

ಮೂಲತಃ ಬೆಳ್ತಂಗಡಿ ತಾಲೂಕಿನ ಬೆಳಾಲ್ ಮಾಚಾರ್ ನಿವಾಸಿಯಾಗಿರುವ ಇಸ್ಮಾಯೀಲ್ ಸಅದಿಯವರು ಮಾಣಿ ದಾರುಲ್ ಇರ್ಶಾದ್ ಹಾಗೂ ಕಾಸರಗೋಡು ಜಾಮಿಯ ಸಅದಿಯ್ಯಾದಲ್ಲಿ ಧಾರ್ಮಿಕ ಶಿಕ್ಷಣ ಪಡೆದು ಧಾರ್ಮಿಕ ಪದವಿ ಪಡೆದಿದ್ದಾರೆ. ಪ್ರಸಕ್ತ ಚಿಕ್ಕಮಗಳೂರು ಉಪ್ಪಳ್ಳಿ ಶಾದುಲ್ ಮಸೀದಿಯಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಲಮಾ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಅವರು ಸುಮಾರು 47 ಪುಸ್ತಕಗಳನ್ನು ಕನ್ನಡದಲ್ಲಿ ಬರೆದಿದ್ದಾರೆ. ಹಲವು ಅರಬಿಕ್ ಗ್ರಂಥಗಳನ್ನೂ ರಚಿಸಿರುವ ಅವರು ದೈನಂದಿನ ಇಫಾದ ಹದೀಸ್ ಧ್ವನಿಪ್ರವಚನಕ್ಕೆ ಹೆಸರುವಾಸಿಯಾಗಿದ್ದಾರೆ.

ಮಾಚಾರ್ ಸಅದಿಯವರ ಕನ್ನಡ ಕೃತಿಗಳು:

♦. ಪ್ರವಾದಿ ಪ್ರೇಮದ ಹೃದಯಾವಿಷ್ಕಾರ

♦. ಸಂಪೂರ್ಣ ಮನುಷ್ಯ

♦. ಕರ್ಮಶಾಸ್ತ್ರ ಅಧ್ಯಯನ (ಭಾಗ - 1)

♦. ಮಹಾವಿಸ್ಮಯ

♦. ಉಮ್ರಾ ಗೈಡ್

♦. ಹಜ್ 'ಗೈಡ್

♦ ಪ್ರೇಮಾನುಭವ

♦ ಪ್ರೀತಿ ಎಂದರೆ ಇದೇನಾ?

♦ ಅದ್ಭುತ ಪ್ರಪಂಚ

♦ ಈ ಸುಖ ಇನ್ನೆಲ್ಲಿ ?

♦ ಸಮಸ್ತ ವಿಭಜನೆಯ ಹಿನ್ನೆಲೆ

♦ ಕುರ್ ಆನ್ ನಿತ್ಯ ವಿಸ್ಮಯ

♦ ಉಳ್' ಹಿಯ್ಯತ್ ಪ್ರಶೋತ್ತರಗಳು

♦ ರಮಳಾನಿನ ಕರ್ಮಶಾಸ್ತ್ರ

♦ ಫಿತ್ರ್ ಝಕಾತ್

♦ ಮೌಲಿದಾಚರಣೆ

♦ ಕನಸು ಕಂಡವರ ಕಥೆಗಳು

♦ ಇಮಾಂ ಅಬೂ ಹನೀಫಾ (ರ)

♦ ಪ್ರವಾಸಿ ಗೈಡ್

♦ ಮೂರು ಇಮಾಮರುಗಳು

♦ ಯಾತ್ರಾ ವಿಸ್ಮಯ

♦ ನಲ್ಮೆಯ ಕಂದನಿಗೆ

♦ ಏಕೆ? ಹೇಗೆ? ಮುವತ್ತು ಪ್ರಶ್ನೆಗಳು

♦ ಅಲ್-ಹಜ್ಜುಲ್ ಮಬ್ರೂರ್

♦ ಇಸ್ಲಾಮಿನ ಸೌಂದರ್ಯ

♦ ನಾಳೆಯ ಖಾಝಿ ನಿಮ್ಮ ಮನೆಯಲ್ಲಿ

♦ ಪ್ರೇಮಕಾವ್ಯಗಳು

♦ ಜಮಾಅತೆ ಇಸ್ಲಾಮಿ (ಅನುವಾದ)

♦ ಪಂಚ ಮಹಾ ಔಲಿಯಾ ಶ್ರೇಷ್ಠರು (ಅನುವಾದ)

♦ ಸ್ಪೈನ್ ಭೂಮಿಯಲ್ಲೊಂದು ಪಯಣ (ಅನುವಾದ)

♦ ಖಸೀದತುಲ್ ಬುರ್ದಾ ಭಾಗ - 1

♦ ಖಸೀದತುಲ್ ಬುರ್ದಾ ಭಾಗ - 2

♦ ಮುಹಮ್ಮದಿಯ್ಯ ಸೌಂದರ್ಯ ಅಧ್ಯಯನ (ಇಫಾದ ಸರಣಿ)

♦ ಅಂತ್ಯ ದಿನದ ಲಕ್ಷಣಗಳು (ಇಫಾದ ಸರಣಿ)

♦ ದೌರತುಲ್ ಅರ್ಬಈನ್ (ಲಿಪ್ಯಂತರ)

♦ ಮದೀನಾ ಮಸ್ಜಿದ್

♦ ಕೊರೋನಾ ಕಲಿಸಿದ ಪಾಠ (ಇಫಾದ ಸರಣಿ)

♦ ಪ್ರವಾದಿ ﷺ ಪತ್ನಿ ಹಾಗೂ ಮಕ್ಕಳು (ಇಫಾದ ಸರಣಿ)

♦ ಟೈಮಿಗೆ ಟೈಮಿಲ್ಲ

♦ ಉಮ್ರಾನುಭವ

♦ ಮದೀನಾದ ಹಾದಿ

♦ A Route To Madeena (English)

♦ ಉಮ್ರಾನುಭವ (English Translate)

♦ ಮಖ್ದೂಮರಿಂದ ಕಾಂತಪುರಂ ತನಕ

♦ ಅಜ್ಮೀರ್ ಖಾಜಾ

♦ ಮಳೆಯಲ್ಲೊಂದು ಉಮ್ರಾ

Tags

FIdak Award
share
ವಾರ್ತಾಭಾರತಿ
ವಾರ್ತಾಭಾರತಿ
Next Story
X