ಮಲಾರ್: ಅರಸ್ತಾನದ ನವೀಕೃತ ಅಲ್ ಮುಬಾರಕ್ ಜುಮಾ ಮಸ್ಜಿದ್ ಉದ್ಘಾಟನೆ

ಮಂಗಳೂರು: ಅರಸ್ತಾನದ ನವೀಕೃತ ಅಲ್ ಮುಬಾರಕ್ ಜುಮಾ ಮಸ್ಜಿದ್ ನ ಉದ್ಘಾಟನೆ ಕಾರ್ಯಕ್ರಮ ಆದಿತ್ಯವಾರ ನಡೆಯಿತು.
ದ.ಕ. ಖಾಝಿ ಹಾಗೂ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಇವರು ಉದ್ಘಾಟಿಸಿದರು.
MP ಅಬ್ದುಲ್ ರಹ್ಮಾನ್ ಇವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯ್ಯಿದ್ ಆಮಿರ್ ಅಸ್ಸಖಾಫ್ ತಂಙಳ್ ಅಮ್ಮೆಂಬಳ ದುಆ ನೆರೆವೇರಿಸಿದರು. ಸ್ವಲಾತ್ ಮಜ್ಲಿಸ್ ಹಾಗೂ ಆಧ್ಯಾತ್ಮಿಕ ಮಜ್ಲಿಸುನ್ನೂರ್ ಗೆ ಸ್ಥಳೀಯ ಖತೀಬರಾದ ಮುಹಮ್ಮದ್ ಶಫೀಕ್ ಕೌಸರಿ ಉಸ್ತಾದ್ ನೇತೃತ್ವ ವಹಿಸಿದರು
ಈ ಸಂದರ್ಭದಲ್ಲಿ ಮುಹಮ್ಮದ್ ಶಹೀರ್ ಕೌಸರಿ ಉಸ್ತಾದ್, ಅಬ್ದುಲ್ ಜಬ್ಬಾರ್ ಯಮಾನಿ ಉಸ್ತಾದ್, ಜಮಾಅತ್ ಕಮಿಟಿ ಪದಾಧಿಕಾರಿಗಳು, ಸದಸ್ಯರು ಜಮಾಅತಿನ ಹಿರಿಯರು, ಕಿರಿಯರು ಊರಿನ,ಪರ ಊರಿನ ಬಾಂಧವರು ಉಪಸ್ಥಿತರಿದ್ದರು.
Next Story





