ಲಾಡ್ಜ್‌ನಲ್ಲಿ ವ್ಯಕ್ತಿ ಅನುಮಾನಾಸ್ಪದ ಮೃತ್ಯು

ಮಂಗಳೂರು,ಜ.3: ನಗರದ ಲಾಡ್ಜ್‌ನಲ್ಲಿ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಬಗ್ಗೆ ಬಂದರು ಠಾಣೆ ಪ್ರಕರಣ ದಾಖಲಾಗಿದೆ.
ಡಿ.26ರಂದು ಅಪರಿಚಿತ ವ್ಯಕ್ತಿಯು ಕೊಠಡಿ ಪಡೆದಿದ್ದರು. ಡಿ.31ರಂದು ಬೆಳಗ್ಗೆ ಕೊಠಡಿಯ ನೆಲದಲ್ಲಿ ಬೆಡ್ ಮೇಲೆ ಮಲಗಿದ್ದ ವ್ಯಕ್ತಿಯನ್ನು ಲಾಡ್ಜ್ ಸಿಬ್ಬಂದಿ ಮಾತನಾಡಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೂಡಲೇ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಸುಮಾರು 5.8 ಅಡಿ ಎತ್ತರದ, ಎಣ್ಣೆ ಕಪ್ಪುಮೈ ಬಣ್ಣದ, ಕಂದು ಬಣ್ಣದ ಟಿ-ಶರ್ಟ್ ಮತ್ತು ತಿಳಿ ನೀಲಿ ಬಣ್ಣದ ಜೀನ್ಸ್ ಧರಿಸಿರುವ ಈ ವ್ಯಕ್ತಿಯ ಕುರಿತು ಮಾಹಿತಿ ಇದ್ದಲ್ಲಿ ಬಂದರು ಠಾಣೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
Next Story





