ಮಂಗಳೂರು | ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ದಂಪತಿಗೆ ಸನ್ಮಾನ

ಮಂಗಳೂರು, ಫೆ.15: ಲವಕುಶ ಜೋಡುಕರೆ ಕಂಬಳ ಸಮಿತಿ ನರಿಂಗಾನ ಇದರ ವತಿಯಿಂದ ಅನಿವಾಸಿ ಉದ್ಯಮಿ, ಕೊಡುಗೈ ದಾನಿ ಡಾ. ರೊನಾಲ್ಡ್ ಕೊಲಾಸೊ ಮತ್ತವರ ಪತ್ನಿ ಜೀನ್ ಕೊಲಾಸೊ ಅವರನ್ನು ರವಿವಾರ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್‌ರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಲವಕುಶ ಜೋಡುಕರೆ ಕಂಬಳ ಸಮಿತಿ ನರಿಂಗಾನ ಇದರ ಗೌರವಾಧ್ಯಕ್ಷ ಹಾಗೂ ಸ್ಪೀಕರ್ ಯು.ಟಿ. ಖಾದರ್, ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ ಕೌನ್ಸಿಲ್‌ನ ಅಧ್ಯಕ್ಷ ಯು.ಟಿ.ಇಫ್ತಿಕಾರ್ ಅಲಿ, ಶಾಸಕ ಐವನ್ ಡಿಸೋಜ, ಸಮಿತಿಯ ಕಾರ್ಯಾಧ್ಯಕ್ಷ ಪ್ರಶಾಂತ ಕಾಜವ, ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ಮುರಳೀಧರ ಮೋರ್ಲ, ಮ್ಯಾಕ್ಸಿಂ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
Next Story





