ಮಂಗಳೂರು: ಬದ್ರಿಯಾ ಹಳೆ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಕಾರ್ಯಕ್ರಮ

ಮಂಗಳೂರು: ಬದ್ರಿಯಾ ವಿದ್ಯಾ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಇಕ್ಬಾಲ್ ಸರ್ ಹಾಗೂ ಖಲೀಲ್ ಸರ್ ಅವರ ಹಜ್ಜ್ ಯಾತ್ರೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿಗಳ ವತಿಯಿಂದ ನಡೆಯಿತು.
ಬದ್ರಿಯಾ ಜುಮಾ ಮಸೀದಿ ಕಂದಕ್ ಇದರ ಖತೀಬ್ ಯಾಕೂಬ್ ಮದನಿ ಅವರು ದುಆದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಬದ್ರಿಯಾ ವಿದ್ಯಾ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ಡಾ. ಎನ್. ಇಸ್ಮಾಯಿಲ್, ಹಂಝ, ಯೂಸುಫ್, ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ರಹಮತ್ ಅಲಿ, ಯುವ ಉದ್ಯಮಿ ಮುಹಮ್ಮದ್ ಅಮೀನ್, ವಕೀಲರಾದ ಮುಖ್ತಾರ್, ಪಾಲಿಕೆ ಮಾಜಿ ಸದಸ್ಯರಾದ ಲತೀಫ್ ಕಂದಕ್, ಹಸೈನಾರ್ ಮುಸ್ಲಿಯಾರ್, ಹಳೆ ವಿದ್ಯಾರ್ಥಿಗಳಾದ ಫೈಝಲ್, ಇಸಾಕ್, ಸಾಜಿದ್, ಗುಲ್ಝಾರ್, ಸಂಶುದ್ದೀನ್, ಆಸೀಫ್, ಸಲಾಂ, ಹಾರಿಸ್, ಫಾರೂಕ್, ಝಹೀರ್, ತಾಹಿರ್, ಕರೀಂ, ಹೈದರ್, ಮುಸ್ತಫಾ ಹಾಗೂ ಇತರರು ಉಪಸ್ಥಿತರಿದ್ದರು.
Next Story






