ಮಂಗಳೂರು | ಬಸ್ ಢಿಕ್ಕಿ : ಮೃತ ವ್ಯಕ್ತಿಯ ಗುರುತು ಪತ್ತೆಗೆ ಮನವಿ

ಸಾಂದರ್ಭಿಕ ಚಿತ್ರ
ಮಂಗಳೂರು,ನ.21: ರಾ.ಹೆ. 66ರ ಬೈಕಂಪಾಡಿ ಚಿತ್ರಾಪುರದಲ್ಲಿ ಬುಧವಾರ ರಾತ್ರಿ ನಡೆದ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಗಾಗಿ ಮಂಗಳೂರು ಸಂಚಾರ ಠಾಣೆಯ ಪೊಲೀಸರು ಮನವಿ ಮಾಡಿದ್ದಾರೆ.
ರಾತ್ರಿ ಸುಮಾರು 8:10ಕ್ಕೆ 35ರಿಂದ 40 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ರಸ್ತೆ ದಾಟಲು ನಿಂತಿದ್ದ ವೇಳೆ ಸುರತ್ಕಲ್ನಿಂದ ಪಣಂಬೂರು ಕಡೆಗೆ ಚಲಿಸುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡಿರುವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಸುಮಾರು 5 ಅಡಿ ಎತ್ತರದ, ನಸು ನೀಲಿ ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಬಲಕೈಯಲ್ಲಿ ಮಂಜು ಎಂದು ಕನ್ನಡದಲ್ಲಿ ಬರೆದ ಹಚ್ಚು ಇದೆ. ಈ ವ್ಯಕ್ತಿಯ ಗುರುತು ಅಥವಾ ವಾರಸುದಾರರು ಇದ್ದಲ್ಲಿ ದೂ.ಸಂ: 0824-2220833 / 2220800ನ್ನು ಸಂಪರ್ಕಿಸಬಹುದಾಗಿದೆ.
Next Story





