ಮಂಗಳೂರು: ನ.19ಕ್ಕೆ ಎಡ್ವಿನ್ ಡಿಸೋಜರಿಗೆ ನುಡಿನಮನ ಕಾರ್ಯಕ್ರಮ

ಮಂಗಳೂರು, ನ.17: ಇತ್ತೀಚೆಗೆ ನಿಧನರಾದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಕೊಂಕಣಿ ಸಾಹಿತಿ ಎಡ್ವಿನ್ ಜೆ. ಎಫ್. ಡಿಸೋಜರಿಗೆ ನುಡಿನಮನ ಕಾರ್ಯಕ್ರಮ ನ.19ರಂದು ಬೆಳಗ್ಗೆ 10ಕ್ಕೆ ಸಂತ ಅಲೋಶಿಯಸ್ ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ನಡೆಯಲಿದೆ.
ಸಂತ ಅಲೋಶಿಯಸ್ ಕಾಲೇಜು(ಸ್ವಾಯತ್ತ) ಕೊಂಕಣಿ ಸಂಸ್ಥೆಯ ನೇತೃತ್ವದಲ್ಲಿ, ಸಾಹಿತ್ಯ ಅಕಾಡಮಿ, ಹೊಸದಿಲ್ಲಿ, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮೈಕಲ್ ಡಿಸೋಜ ವಿಶನ್ ಕೊಂಕಣಿ ಮತ್ತು ರಾಕ್ಣೊ ವಾರಪತ್ರಿಕೆ ಸಹಯೋಗದಲ್ಲಿ, ಕೊಂಕಣಿ ಸಂಘಟನೆಗಳ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಗೋವಾ ವಿಶ್ವವಿದ್ಯಾನಿಲಯದ ಕೊಂಕಣಿ ವಿಭಾಗ ವಿಶ್ರಾಂತ ಮುಖ್ಯಸ್ಥೆ ಡಾ.ಚಂದ್ರಲೇಖಾ ಡಿಸೋಜ ಹಾಗೂ ಕವಿ-ಕಥೆಗಾರ ಕಿಶೂ ನುಡಿನಮನ ಸಲ್ಲಿಸಲಿದ್ದಾರೆ.
ಸಂತ ಅಲೋಶಿಯಸ್ ಕಾಲೇಜಿನ, ಕೊಂಕಣಿ ಸಂಸ್ಥೆಯ ಮುಖ್ಯಸ್ಥ ವಂ. ಡಾ.ಮೆಲ್ವಿನ್ ಪಿಂಟೊ, ನೀರುಡೆ ಗೌರವಾರ್ಪಣೆ ಮಾಡಲಿದ್ದಾರೆ.
ಕೊಂಕಣಿ ಸಾಹಿತ್ಯ ಸಂಘಟನೆಗಳು, ಕೊಂಕಣಿ ಸಾಹಿತ್ಯದ ವಿದ್ಯಾರ್ಥಿಗಳು ಮತ್ತು ಎಡ್ವಿನ್ ಜೆ.ಎಫ್.ಡಿಸೋಜರ ಅಭಿಮಾನಿಗಳಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪನಮನ ಸಲ್ಲಿಸಲು ಅವಕಾಶವಿದೆ ಎಂದು ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಕೊಂಕಣಿ ಸಂಸ್ಥೆಯ ಪ್ರಕಟನೆ ತಿಳಿಸಿದೆ.





