ಮಂಗಳೂರು: 'ಇನ್ ಲ್ಯಾಂಡ್ ಎಲೋರಾ' ವಸತಿ ಯೋಜನೆಗೆ ಶಿಲಾನ್ಯಾಸ
ಮಂಗಳೂರು, ಸೆ.27: ಕರ್ನಾಟಕದ ಖ್ಯಾತ ಕಟ್ಟಡ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಇನ್-ಲ್ಯಾಂಡ್ ಗ್ರೂಪ್ ಮಂಗಳೂರಿನ ಮಣ್ಣಗುಡ್ಡ ಮಠದಕಣಿ ರಸ್ತೆಯಲ್ಲಿ ನಿರ್ಮಿಸಲಿರುವ ನೂತನ ಐಷಾರಾಮಿ ವಸತಿ ಯೋಜನೆ ‘ಇನ್ ಲ್ಯಾಂಡ್ ಎಲೋರಾ'ಕ್ಕೆ ಇಂದು ಶಿಲಾನ್ಯಾಸ ನೆರವೇರಿತು.
ಬಾಳಂಭಟ್ ಮಠದ ಅರ್ಚಕ ಗಿರಿಧರ ಭಟ್ ಭೂಮಿಪೂಜೆ ನೆರವೇರಿಸಿದರು. ಉರ್ವ ಇಮ್ಯಾಕುಲೇಟ್ ಕಾನ್ಸೆಪ್ಷನ್ ಚರ್ಚ್ ನ ಧರ್ಮ ಗುರು ವಂ.ಬೆಂಜಮಿನ್ ಪಿಂಟೊ ಪ್ರಾರ್ಥನೆಯೊಂದಿಗೆ ಶುಭ ಹಾರೈಸಿದರು, ಮದನಿ ನಗರ ಮಸೀದಿಯ ಖತೀಬ್ ಪಿ.ಎಸ್.ಮುಹಮ್ಮದ್ ಕಾಮಿಲ್ ಸಖಾಫಿ ಮತ್ತು ಯಹ್ಯಾ ಮದನಿ ದುಆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಇನ್ ಲ್ಯಾಂಡ್ ಎಲೋರಾ ವಸತಿ ಯೋಜನೆಯ ಮಾಹಿತಿ ಪತ್ರವನ್ನು ಇನ್ ಲ್ಯಾಂಡ್ ಸಮೂಹ ಸಂಸ್ಥೆ ಗಳ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ಬಿಡುಗಡೆಗೊಳಿಸಿದರು. ಶಾಸಕ ವೇದವ್ಯಾಸ ಕಾಮತ್, ಮನಪಾ ಮೇಯರ್ ಸುಧೀರ್ ಶೆಟ್ಟಿ, ಉದ್ಯಮಿ ಅಲ್ತಾಫ್ ಫಾರೂಕಿ, ಮನಪಾ ಸದಸ್ಯರಾದ ಜಗದೀಶ್ ಶೆಟ್ಟಿ, ಸಂಧ್ಯಾ ಮೋಹನ್ ಆಚಾರ್, ಇಂಜಿನಿಯರ್ ಗಳಾದ ಸುರೇಶ್ ಪೈ, ಅನಿಲ್ ಹೆಗ್ಡೆ, ರಾಹುಲ್ ಶೆಟ್ಟಿ, ಸಂಸ್ಥೆಯ ನಿರ್ದೇಶಕರಾದ ಮೆಹರಾಜ್ ಯೂಸುಫ್, ವಹಾಜ್ ಯೂಸುಫ್ ಉಪಸ್ಥಿತರಿದ್ದರು.
ಇನ್-ಲ್ಯಾಂಡ್ ಈಗಾಗಲೇ ವಿವಿಧ ವಸತಿ ಪ್ರದೇಶಗಳಲ್ಲಿ ಹಲವು ಪೂರ್ಣಗೊಂಡಿರುವ ವಸತಿ ಯೋಜನೆಗಳನ್ನು ಹೊಂದಿದ್ದು, ‘ಇನ್ ಲ್ಯಾಂಡ್ ಎಲೋರಾ’ ಕಂಪೆನಿಯ ಪಾಲಿಗೆ ಮಣ್ಣಗುಡ್ಡದಲ್ಲಿ ಇನ್ನೊಂದು ಮುಕುಟಾಭರಣವಾಗಲಿದೆ. ಖರೀದಿದಾರರಿಗೆ ಆಧುನಿಕವಾದ ಮನೆಯನ್ನು ಒದಗಿಸಿ ಆ ಮೂಲಕ ಅವರಲ್ಲಿ ಒಡೆತನದ ಹೆಮ್ಮೆ ಮೂಡಿಸುವಂತೆ ‘ಇನ್ ಲ್ಯಾಂಡ್ ಎಲೋರಾ'ವನ್ನು ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ನೂತನ ಪೀಳಿಗೆಯ ಜೀವನಶೈಲಿಗೆ ಇದು ಅತ್ಯಂತ ಸೂಕ್ತವಾಗಿದೆ ಎಂದು ಇನ್ ಲ್ಯಾಂಡ್ ಸಮೂಹ ಸಂಸ್ಥೆ ಗಳ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ತಿಳಿಸಿದ್ದಾರೆ.
ನಾಲ್ಕು ಅಂತಸ್ತುಗಳ ನೂತನ ಕಟ್ಟಡವು ಸಂಪೂರ್ಣ ವಾಸ್ತು ಅನುಗುಣವಾಗಿದ್ದು, ವಿಶಾಲ ಪ್ರವೇಶಾಂಗಣ, 24 ಗಂಟೆಗಳ ಸ್ಟಾಂಡ್ ಬೈ ವಿದ್ಯುತ್ ವ್ಯವಸ್ಥೆ, ಸಿಸಿಟಿವಿ ಭದ್ರತೆ, ಜಿಮ್, ಮಕ್ಕಳ ಆಟದ ಪ್ರದೇಶ ಮತ್ತು ಮೀಸಲು ಕಾರ್ ಪಾರ್ಕಿಂಗ್ ಸ್ಥಳಗಳಂತಹ ಅತ್ಯುತ್ಕೃಷ್ಟ ಸೌಲಭ್ಯಗಳೊಂದಿಗೆ 3 ಬಿ.ಎಚ್.ಕೆ. (1,490, 1,510 ಮತ್ತು 1,630 ಚದರ ಅಡಿ) ಮತ್ತು 2 ಬಿ.ಎಚ್.ಕೆ. (1,165 ಮತ್ತು 1215 ಚದರ ಅಡಿ)ಗಳ ಅಪಾರ್ಟ್ ಮೆಂಟ್ ಗಳನ್ನು ಹೊಂದಿದೆ ಎಂದು ಹೇಳಿದರು.
ಇನ್-ಲ್ಯಾಂಡ್ ಮೊದಲ ಕೆಲವು ಖರೀದಿದಾರರಿಗೆ ವಿಶೇಷ ಆರಂಭಿಕ ಬೆಲೆಯ ಕೊಡುಗೆ ನೀಡುತ್ತಿದ್ದು, ಇದು ಇನ್-ಲ್ಯಾಂಡ್ ಎಲೋರಾ ಆಯ್ಕೆ ಮಾಡಿಕೊಳ್ಳುವವರಿಗೆ ಮೌಲ್ಯಯುತ ಪ್ರೋತ್ಸಾಹವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕಂಪೆನಿಯು ಖರೀದಿದಾರರಿಗೆ ನೆರವಾಗಲು ವಿಶೇಷ ಬಡ್ಡಿದರಗಳಲ್ಲಿ ಮತ್ತು ರಿಯಾಯಿತಿ ಸೌಲಭ್ಯಗಳೊಂದಿಗೆ ಗೃಹಸಾಲಗಳನ್ನು ಒದಗಿಸಲು ಎಲ್ಲ ಪ್ರಮುಖ ಬ್ಯಾಂಕುಗಳೊಂದಿಗೆ ಸಹಯೋಗ ಹೊಂದಿದೆ. ಈ ಕಟ್ಟಡ ಯೋಜನೆಯು ರೇರಾದಿಂದ ಅನುಮೋದಿಸಲಾಗಿದೆ ಎಂದವರು ತಿಳಿಸಿದ್ದಾರೆ.
ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ
https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.