ಮಂಗಳೂರು: ಉದ್ಯೋಗ ಕೊಡಿಸುವುದಾಗಿ ವಂಚನೆ; ಪ್ರಕರಣ ದಾಖಲು

ಮಂಗಳೂರು, ಜು.18: ಇಂಡಿಗೋ ಏರ್‌ಲೈನ್ಸ್‌ನಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ಹೇಳಿ 56,500 ರೂ. ಪಡೆದು ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.
ಜೂ.13ರಂದು ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕೆಲಸಕ್ಕೆಂದು ಆನ್‌ಲೈನ್ ಮೂಲಕ ತಾನು ಅರ್ಜಿ ಸಲ್ಲಿಸಿದ್ದೆ. ಅದೇ ದಿನ ಅಪರಿಚಿತ ವ್ಯಕ್ತಿ ತನಗೆ ಕರೆ ಮಾಡಿ 1,500 ರೂ. ಪಾವತಿಸಿ ಹೆಸರು ನೋಂದಾಯಿಸುವಂತೆ ತಿಳಿಸಿದ್ದ. ಅದರಂತೆ ತಾನು ಗೂಗಲ್‌ಪೇ ಮೂಲಕ ಹಣ ಪಾವತಿಸಿದ್ದೆ. ಮರುದಿನ ಇಂಟರ್ ವ್ಯೂ ಎನ್ನುತ್ತಾ 6,000 ರೂ. ಪಡೆದುಕೊಂಡ. ಬಳಿಕ ತರಬೇತಿ, ಕೋರಿಯರ್ ಚಾರ್ಜ್, ಇನ್ಸೂರೆನ್ಸ್ ಇತ್ಯಾದಿ ಕಾರಣಗಳನ್ನು ಹೇಳಿ 56,600 ರೂ. ಪಡೆದುಕೊಂಡು ವಂಚಿಸಿದ್ದಾನೆ ಎಂದು ಕಂಕನಾಡಿ ನಗರ ಠಾಣಾ ಪೊಲೀಸರಿಗೆ ವಂಚನೆಗೊಳಗಾದವರು ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story