ಸಹಜ ಸ್ಥಿತಿಯತ್ತ ಮರಳಿದ ಮಂಗಳೂರು
ರೌಡಿ ಶೀಟರ್ ಹತ್ಯೆ ಹಿನ್ನೆಲೆಯಲ್ಲಿ "ಬಂದ್" ಆಗಿದ್ದ ಬಂದರು ನಗರ

PC: facebook.com/mangaloremerijaanofficial
ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ಶುಕ್ರವಾರ "ಬಂದ್" ಆಗಿದ್ದ ಮಂಗಳೂರು ಸಹಿತ ದ.ಕ. ಜಿಲ್ಲೆಯು ಇಂದು (ಶನಿವಾರ) ಸಹಜ ಸ್ಥಿತಿಯತ್ತ ಮರಳಿದೆ.
ಇಂದು ಬೆಳಗ್ಗಿನಿಂದಲೇ ಸರಕಾರಿ ಮತ್ತು ಖಾಸಗಿ ಬಸ್ಗಳು ಸಂಚಾರ ಆರಂಭಿಸಿವೆ. ರಿಕ್ಷಾ, ಟೆಂಪೋ ಸಹಿತ ಎಲ್ಲ ವಾಹನಗಳು ರಸ್ತೆಗಿಳಿದಿವೆ.
ಬಂದರ್ ಧಕ್ಕೆ ಸಹಿತ ಮಾರುಕಟ್ಟೆಗಳು , ಅಂಗಡಿ ಮುಂಗಟ್ಟುಗಳು ತೆರೆದಿವೆ.
ಸಾರ್ವಜನಿಕರು ನಿಧಾನವಾಗಿ ತಮ್ಮ ಎಂದಿನ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
Next Story