ಮಾ.8ರಿಂದ ಮಂಗಳೂರು - ಜಿದ್ದಾ - ಮಸ್ಕತ್ ವಿಮಾನ ಯಾನ ಪುನರಾರಂಭ

ಮಂಗಳೂರು, ಮಾ.7: ಮಂಗಳೂರು - ಜೆದ್ದಾ ಮತ್ತು ಮಂಗಳೂರು - ಮಸ್ಕತ್ ಮಧ್ಯೆ ಮಾ.8ರಿಂದ ವಿಮಾನ ಯಾನ ಪುನರಾರಂಭಗೊಳ್ಳಲಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಮಂಗಳೂರಿನಿಂದ ಜೆದ್ದಾಕ್ಕೆ ಐಎಕ್ಸ್ 845 ವಿಮಾನ ಮುಂಜಾವ 5:20ಕ್ಕೆ ನಿಗದಿಯಾಗಿತ್ತು. ಆದರೆ ಅದು ಬೆಳಗ್ಗೆ 9ಕ್ಕೆ ನಿರ್ಗಮಿಸುವ ಸಾಧ್ಯತೆ ಇದೆ. ಐಎಕ್ಸ್ 846 ವಿಮಾನವು ಜೆದ್ದಾದಿಂದ ಹೊರಟು ಮಂಗಳೂರಿಗೆ ಸಂಜೆ 6:20ಕ್ಕೆ ತಲುಪುವ ಬಗ್ಗೆ ಸಮಯ ನಿಗದಿಯಾಗಿದ್ದರೂ ಅದು ರಾತ್ರಿ 10ಕ್ಕೆ ಮಂಗಳೂರು ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಾ.8ರಂದು ಬೆಳಗ್ಗೆ 9:25ಕ್ಕೆ ಮಂಗಳೂರಿನಿಂದ ಮಸ್ಕತ್ಗೆ ಏರ್ಇಂಡಿಯಾ ವಿಮಾನ ತೆರಳಲಿದೆ. ಮಸ್ಕತ್ನಿಂದ ಮಂಗಳೂರಿಗೆ ಸಂಜೆ 5:25ಕ್ಕೆ ಏರ್ಇಂಡಿಯಾ ವಿಮಾನ ಆಗಮಿಸಲಿದೆ.
*ಮಾ.8ರಂದು ರಾತ್ರಿ 8ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಹೆಚ್ಚುವರಿಯಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಚರಿಸಲಿದೆ.
*ಮಾ.8ರ ಮಂಗಳೂರು-ದುಬೈ (ಐಎಕ್ಸ್ 831), ದುಬೈ-ಮಂಗಳೂರು (ಐಎಕ್ಸ್ 832), ಮಂಗಳೂರು -ದುಬೈ (ಐಎಕ್ಸ್ 813), ಮಾ.9ರ ದುಬೈ-ಮಂಗಳೂರು (ಐಎಕ್ಸ್ 814), ಮಾ.8ರ ಮಂಗಳೂರು-ಬಹರೈನ್ (ಐಎಕ್ಸ್ 841), ಮಾ.9ರ ಬಹರೈನ್- ಮಂಗಳೂರು (ಐಎಕ್ಸ್ 842), ಮಾ.8ರ ಮಂಗಳೂರು-ಅಬುಧಾಬಿ (ಐಎಕ್ಸ್815), ಮಾ.9ರ ಅಬುಧಾಬಿ-ಮಂಗಳೂರು (ಐಎಕ್ಸ್ 816) ವಿಮಾನಗಳ ಸಂಚಾರ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.







