ಮಂಗಳೂರು: ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧಕಿ ರೆಮೋನಾಗೆ ರೋಹನ್ ಕಾರ್ಪೋರೇಶನ್ ನಿಂದ ಸನ್ಮಾನ

ಮಂಗಳೂರು, ಆ.1: ಏಳು ದಿನಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲಿಸಿದ ಭರತನಾಟ್ಯ ಕಲಾವಿದೆ ರೆಮೋನಾ ಎವೆಟ್ ಪಿರೇರಾರನ್ನು ರೋಹನ್ ಕಾರ್ಪೊರೇಶನ್ ಸಂಸ್ಥೆ ಶುಕ್ರವಾರ ಸನ್ಮಾನಿಸಿದೆ.
ಬಿಜೈ ಮುಖ್ಯ ರಸ್ತೆಯ ರೋಹನ್ ಸಿಟಿಯಲ್ಲಿರುವ ರೋಹನ್ ಕಾರ್ಪೊರೇಶನ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಥಾಪಕ ಡಾ.ರೋಹನ್ ಮೊಂತೇರೊರವರು ರೆಮೋನಾ ಪಿರೇರಾರನ್ನು ಸ್ಮರಣಿಕೆಯೊಂದಿಗೆ ಗೌರವಿಸಿದರು.
“ರೆಮೋನಾ ಅವರ ಸಾಧನೆ ಮಂಗಳೂರು ಮಾತ್ರವಲ್ಲ, ಇಡೀ ದೇಶಕ್ಕೆ ಹೆಮ್ಮೆ ತಂದಿದೆ. ಇವರು ಇಂದಿನ ಯುವ ಸಮುದಾಯಕ್ಕೆ ಸ್ಫೂರ್ತಿ” ಎಂದು ಡಾ.ರೋಹನ್ ಮೊಂತೇರೊ ಶ್ಲಾಘಿಸಿದರು.
ಅದ್ವಿತೀಯ ಸಾಧನೆಗಾಗಿ ಸಂಸ್ಥೆಯ ವತಿಯಿಂದ ಭವಿಷ್ಯದಲ್ಲೂ ಇಂತಹ ಪ್ರತಿಭೆಗಳಿಗೆ ವೇದಿಕೆ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
Next Story







