ಮಂಗಳೂರು: ಎಸ್ ಕೆಎಸ್ ಎಂ ಯೂತ್ ವಿಂಗ್ ನಿಂದ 'ಬಿಸಿನೆಸ್ ಇನ್ ಇಸ್ಲಾಂ' ಕಾರ್ಯಾಗಾರ

ಮಂಗಳೂರು, ಜ.17: ಎಸ್ ಕೆಎಸ್ ಎಂ ಯೂತ್ ವಿಂಗ್ ವತಿಯಿಂದ 'ಬಿಸಿನೆಸ್ ಇನ್ ಇಸ್ಲಾಂ' ಎಂಬ ವಿಷಯದಲ್ಲಿ ಮಾಹಿತಿ ಕಾರ್ಯಾಗಾರವನ್ನು ಗುರುವಾರ ಆಯೋಜಿಸಲಾಗಿತ್ತು.
ಅತ್ತಾವರದ ಹೋಟೆಲ್ ರಾಯಲ್ ಪ್ಲಾಝಾ ಸ್ಯೂಟ್ಸ್ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ತೆಲಂಗಾಣ ಫತ್ವಾ ಬೋರ್ಡ್ ಅಧ್ಯಕ್ಷ ಮತ್ತು ಆಲ್ ಇಂಡಿಯಾ ಎಜುಕೇಶನಲ್ ರಿಸರ್ಚ್ ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ಶೈಖ್ ಡಾ.ಸೈಯದ್ ಹುಸೈನ್ ಮದನಿ, ಹಾಗೂ ಎನ್ಐಎಸ್ಎಂ ಪ್ರಮಾಣೀಕೃತ ಹೂಡಿಕೆ ತಜ್ಞ ಮತ್ತು ಜಿಎ ಸ್ಟೀಲ್ ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ವೆಲ್ತ್ ವಾಲಾದ ಸಹ-ಸಂಸ್ಥಾಪಕ ಸಲಾಹುದ್ದೀನ್ ಕುದ್ರೋಳಿ ಉಪನ್ಯಾಸ ನೀಡಿದರು.
ಮಂಗಳೂರಿನಲ್ಲಿ ಮೊದಲ ಬಾರಿಗೆ ನಡೆದ 'ಆರ್ಥಿಕ ಸ್ವಾತಂತ್ರ್ಯ ಮತ್ತು ಸಂಪತ್ತು ಸೃಷ್ಟಿ' ಎಂಬ ವಿಷಯದ ಕುರಿತ ವಿಶಿಷ್ಟ ಕಾರ್ಯಾಗಾರದಲ್ಲಿ ವ್ಯಾಪಾರ ವಹಿವಾಟುಗಳು, ಹಣಕಾಸು ಮತ್ತು ಬ್ಯಾಂಕಿಂಗ್, ಷೇರು ಮಾರುಕಟ್ಟೆ ಮತ್ತು ಕ್ರಿಪ್ಟೋಕರೆನ್ಸಿ ಕುರಿತು ಇಸ್ಲಾಮಿಕ್ ದೃಷ್ಟಿಕೋನದಿಂದ ವಿವರವಾದ ಚರ್ಚೆ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಶ್ನೋತ್ತರ ಅವಧಿಯೂ ಇತ್ತು.