ಮಂಗಳೂರು | ಇಂಡಿಯಾನ ಆಸ್ಪತ್ರೆಯಲ್ಲಿ ವಿಶ್ವ ಲಿವರ್ ದಿನಾಚರಣೆ: ರಿಕ್ಷಾ ಚಾಲಕರಿಗೆ ಆರೋಗ್ಯ ಮಾಹಿತಿ ಕಾರ್ಯಕ್ರಮ

ಮಂಗಳೂರು : ಲಿವರ್ (ಯಕೃತ್ತು)ದೇಹದ ಶಕ್ತಿಶಾಲಿ ಅಂಗವಾಗಿದ್ದು, ನಮ್ಮ ದೇಹವನ್ನು ಆರೋಗ್ಯಕರವಾಗಿ ಮತ್ತು ಸರಿಯಾಗಿ ನಿರ್ವಹಿಸುವಲ್ಲಿ ಲಿವರ್ ನಿರ್ಣಾಯಕ ಪಾತ್ರ ವಹಿಸುತ್ತಿರುವುದರಿಂದ ಲಿವರ್ನ ಆರೋಗ್ಯದ ಕಡೆಗೆ ನಾವು ಕಾಳಜಿ ವಹಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಹೇಳಿದ್ದಾರೆ.
ವಿಶ್ವ ಲಿವರ್ ದಿನದ ಅಂಗವಾಗಿ ನಗರದ ಇಂಡಿಯಾನ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್ಸ್ಟಿಟ್ಯೂಟ್ನಲ್ಲಿ ಶನಿವಾರ ನಡೆದ ಲಿವರ್ ಆರೋಗ್ಯದ ಬಗ್ಗೆ ರಿಕ್ಷಾ ಚಾಲಕರಿಗೆ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಟೋರಿಕ್ಷಾ ಚಾಲಕರಿಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಇಂಡಿಯಾನಾ ಆಸ್ಪತ್ರೆಯನ್ನು ಅಭಿನಂದಿಸಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಇಂಡಿಯಾನ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್ಸ್ಟಿಟ್ಯೂಟ್ನ ಆಡಳಿ ತ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ ಅವರು ನಾವು ದಿನನಿತ್ಯ ಸೇವಿಸುವ ಆಹಾರಗಳು ಮತ್ತು ಜೀವನ ಶೈಲಿಯು ಉತ್ತಮವಾಗಿದ್ದರೆ ಲಿವರ್ನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಲು ಸಾಧ್ಯ ಎಂದರು.
ತಜ್ಞ ವೈದ್ಯರಾದ ಡಾ.ಅಪೂರ್ವ ಜಯದೇವ, ಡಾ.ನಿಹಾಲ್ ಅಲಿ ಕುಂಬ್ಳೆ , ಅವರು ಉತ್ತಮ ಆರೋಗ್ಯ ಸೇವಿಸುವ ಮೂಲಕ ಲಿವರ್ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಉಪಯುಕ್ತ ಮಾಹಿತಿ ನೀಡಿದರು. ಮಂಗಳೂರು ಮಹಾನಗರ ರಿಕ್ಷಾಚಾಲಕರ ಸಂಘದ ಉಪಾಧ್ಯಕ್ಷ ಶೇಖರ ಸಾಲಿಯಾನ್ ದೇರಳಕಟ್ಟೆ, ಒಕ್ಕೂಟದ ಅಧ್ಯಕ್ಷ ಭರತ್ ಕುಮಾರ್ , ಹಿರಿಯ ಸದಸ್ಯ ವಸಂತಶೆಟ್ಟಿ,ವೀರನ ಗರ , ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಿಕ್ಷಾ ಚಾಲಕರಿಗೆ ಆರೋಗ್ಯ ಕಾರ್ಡ್ ಅನ್ನು ವಿತರಿಸಲಾಯಿತು.
ಮಧುಮೇಹ ತಜ್ಞ ಮತ್ತು ಇಂಟೆನ್ಸಿವಿಸ್ಟ್ ಡಾ. ಆದಿತ್ಯ ಭಾರದ್ವಾಜ ವಂದಿಸಿದರು.







