Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಭರತನಾಟ್ಯದಲ್ಲಿ ಮಂಗಳೂರಿನ ರೆಮೋನಾ ಎವೆಟ್...

ಭರತನಾಟ್ಯದಲ್ಲಿ ಮಂಗಳೂರಿನ ರೆಮೋನಾ ಎವೆಟ್ ಪಿರೇರಾ ವಿಶ್ವ ದಾಖಲೆ

► ಸಂತ ಅಲೋಶಿಯಸ್ ವಿವಿಯ ವಿದ್ಯಾರ್ಥಿನಿಯಿಂದ ಗ್ಲೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ► 170 ಗಂಟೆಗಳ ಹೊಸ ದಾಖಲೆ ರಚನೆ

ವಾರ್ತಾಭಾರತಿವಾರ್ತಾಭಾರತಿ28 July 2025 5:47 PM IST
share
ಭರತನಾಟ್ಯದಲ್ಲಿ ಮಂಗಳೂರಿನ ರೆಮೋನಾ ಎವೆಟ್ ಪಿರೇರಾ ವಿಶ್ವ ದಾಖಲೆ

ಮಂಗಳೂರು, ಜು. 28: ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ, ಈಗಾಗಲೇ ಹಲವು ದಾಖಲೆಗಳ ಮೂಲಕ ಗಮನ ಸೆಳೆದಿರುವ ನೃತ್ಯ ಪಟು ರೆಮೋನಾ ಎವೆಟ್ ಪಿರೇರಾ ಅವರು ಭರನಾಟ್ಯ ದಲ್ಲಿ 170 ಗಂಟೆಗಳ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೃಷ್ಟಿಸಿದ್ದಾರೆ.

ಭರತನಾಟ್ಯದಲ್ಲಿ ನಿರಂತರ 7 ದಿನಗಳ ಪ್ರದರ್ಶನದೊಂದಿಗೆ ದೀರ್ಘಾವಧಿಯ ನೃತ್ಯದ ಹೊಸ ದಾಖಲೆ ಇದಾಗಿದೆ. ಭಾರತದ ಸೃಷ್ಟಿ ಸುಧೀರ್ ಜಗ್ತಾಪ್ ಹೆಸರಿನಲ್ಲಿ 127 ಗಂಟೆಗಳ ವಿಶ್ವದ ಈವರೆಗಿನ ದಾಖಲೆ ಯನ್ನು ಮುರಿದಿರುವ ರೆಮೋನಾ ಎವೆಟ್ ಪಿರೇರಾರಿಗೆ ಸೋಮವಾರ ಗ್ಲೋಬಲ್ ಬುಕ್ ಆಫ್ ರೆಕಾರ್ಡ್ಸ್ ನ ಏಷಿಯನ್ ಮುಖ್ಯಸ್ಥ ಡಾ. ಮನೀಶ್ ವಿಷ್ನೋಯಿ ಅವರು ನೂತನ ದಾಖಲೆಯ ಪ್ರಮಾಣ ಪ್ರದಾನಿಸಿದರು.

ಜು.21ರಂದು ಬೆಳಗ್ಗೆ 10 ಗಂಟೆಗೆ ಸಂತ ಅಲೋಶಿಯಸ್‌ನ ಎಲ್‌ಸಿಆರ್‌ಐ ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗಾಗಿ ‘ಭರತನಾಟ್ಯ ಮ್ಯಾರಥಾನ್’ ಆರಂಭಿಸಿದ್ದ ರೆಮೋನಾ ಜು. 28ರ ಮಧ್ಯಾಹ್ನ 12 ಗಂಟೆಯವರೆಗೆ ನೃತ್ಯ ಮುಂದುವರಿಸಿದ್ದರು. ಬಳಿಕ ರೆಕಾರ್ಡ್‌ನ ಪ್ರಮಾಣ ಪತ್ರ ಹಸ್ತಾಂತರಕ್ಕಾಗಿ ಆಕೆಯನ್ನು ವೇದಿಕೆಗೆ ಬರಮಾಡಿಕೊಳ್ಳುವ ಸಂದರ್ಭ ಆಕೆಯ ಭರತನಾಟ್ಯದ ಸಹಪಾಠಿಗಳು ಸಭಾಂಗಣಕ್ಕೆ ಭರತನಾಟ್ಯದೊಂದಿಗೆ ಸ್ವಾಗತಿಸಿದರು. ವೇದಿಕೆಯಲ್ಲಿ ರೆಮೋನಾರ ಕುರಿತಾದ ಸಾಧನೆಯ ಹಾದಿಯನ್ನು ನೃತ್ಯದ ಮೂಲಕ ಸಹಪಾಠಿಗಳು ಪ್ರದರ್ಶಿಸಿದರು.

‘ಸತತ ಏಳು ದಿನಗಳ ಕಾಲ ಮೂರು ಗಂಟೆಗಳ ನಡುವೆ 15 ನಿಮಿಗಳ ವಿರಾಮದ ಮೂಲಕ ಸತತ 170 ಗಂಟೆಗಳ ಭರತನಾಟ್ಯವನ್ನು ಪ್ರದರ್ಶಿಸಿದ್ದಾರೆ. ಶ್ರೀ ಗಣೇಶನ ಸ್ತುತಿಯೊಂದಿಗೆ ಕಾಲಿಗೆ ಗೆಜ್ಜೆ ಕಟ್ಟಿ ಭರತನಾಟ್ಯದ ಹೆಜ್ಜೆ ಇರಿಸಿದ್ದ ರೆಮೋನಾ ದುರ್ಗೆಯ ಹಾಡಿನೊಂದಿಗೆ ರೆಕಾರ್ಡ್‌ಗಾಗಿನ ಹೆಜ್ಜೆಯನ್ನು ಕೊನೆಗೊಳಿಸಿದರು. ಭರತನಾಟ್ಯದಲ್ಲಿ ಬರುವ ಎಲ್ಲಾ ರೀತಿಯ ನೃತ್ಯ, ಹಾವಭಾವ ಮುದ್ರೆಗಳನ್ನು ಆಕೆ 170 ಗಂಟೆಗಳ ಕಾಲ ಪ್ರದರ್ಶನ ನೀಡಿದ್ದಾರೆ. ಮೂರು ಗಂಟೆಗಳಿಗೆ ಪೂರಕವಾದ ಭರತನಾಟ್ಯದ ಹಾಡಿನ ಸೆಟ್‌ಗೆ ಅನುಗುಣವಾಗಿ ಆಕೆ ನೃತ್ಯ ಪ್ರದರ್ಶಿಸಿದ್ದು, ಮಲಯಾಳ, ಕನ್ನಡ ಸೇರಿದಂತೆ ಎಲ್ಲಾ ದ್ರಾವಿಡ ಭಾಷೆಗಳ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಭರಟನಾಟ್ಯದ 108 ಕರಣಗಳನ್ನು ರೆಮೋನಾ ಅಭ್ಯಾಸ ಮಾಡಿಕೊಂಡಿದ್ದು, 25ಕ್ಕೂ ಅಧಿಕ ಕರಣಗಳನ್ನು ಈ ರೆಕಾರ್ಡ್ ಸಂದರ್ಭ ಪ್ರದರ್ಶಿಸಿದ್ದಾರೆ. ಸೌರಭ ಕಲಾ ಪರಿಷತ್‌ನಿಂದ ಕುವೆಂಪು ರಾಮಾಯಾಣ ದರ್ಶನವನ್ನು ಪ್ರದರ್ಶಿಸಿದ್ದೇವೆ. ಇಲ್ಲಿ ರಾಮ, ಲಕ್ಷ್ಮಣ, ಸೀತೆಯ ಪಾತ್ರ ಪ್ರಪಂಚ ವಿಭಿನ್ನವಾಗಿದೆ. ಆ ರೂಪಕದ ಎಲ್ಲಾ ಪಾತ್ರಗಳನ್ನು ಅದಕ್ಕೆ ತಕ್ಕುದಾದ ಹಾವಭಾವ, ಭಂಗಿ, ಮುದ್ರೆಗಳ ಮೂಲಕ ರೆಮೋನಾ ರೆಕಾರ್ಡ್ ಸಂದರ್ಭ ಪ್ರದರ್ಶನ ನೀಡಿದ್ದಾರೆ. ರಾಮಾಯಣ ದರ್ಶನಂ, ಕರ್ನಾಟಕ ಸಂಭ್ರಮ, ಕೆಳದಿ ಚೆನ್ನಮ್ಮ, ದುರ್ಗಿ ಮೊದಲಾದ ರೂಪಕಗಳ ಪ್ರದರ್ಶನವನ್ನೂ ಆಕೆ ನೀಡಿದ್ದಾರೆ ಎಂದು ರೆಮೋನಾ ನೃತ್ಯ ಗುರು ಡಾ. ಶ್ರೀವಿದ್ಯಾ ಮುರಳೀಧರ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.


ಕಳೆದ ಒಂದು ವಾರದ ಅವಧಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಸಾವಿರಾರು ಮಂದಿ ರೆಮೋನಾ ನೃತ್ಯ ಪ್ರದರ್ಶನ ವೀಕ್ಷಣೆಗೆ ಆಗಮಿಸಿ ಆಕೆಗೆ ಹುರಿದುಂಬಿಸಿದ್ದಾರೆ. ಆಕೆಯ ‘ಹಾರಿಝನ್’ ನೃತ್ಯ ತಂಡ ಹಾಗೂ ಕಾಲೇಜಿನ ಅನೇಕ ಸಹಪಾಠಿಗಳು ಕೂಡಾ ರಾತ್ರಿ ಹಗಲು ಕಾರ್ಯಕ್ರಮದ ಸಭಾಂಗಣದಲ್ಲಿದ್ದು ಆಕೆಯ ಹಾವಭಾವದಲ್ಲಿ ವಿಲೀನವಾಗಿ ಆಕೆಯ ಜತೆ ತಾಳ ಹಾಕುತ್ತಿದ್ದರು. ನೃತ್ಯದ ಬಗ್ಗೆ ಅರಿವಿಲ್ಲದವರೂ ಆಸ್ವಾದಿಸುವ ಮೂಲಕವೂ ಆಕೆ ದಾಖಲೆ ನಿರ್ಮಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಗೋಲ್ಡನ್ ಬುಕ್‌ಆಫ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ ಹಸ್ತಾಂತರ ಸಮಾರಂಭದಲ್ಲಿ ರೆಮೋನಾ ತಾಯಿ ಗ್ಲ್ಯಾಡಿಸ್, ಸಂತ ಅಲೋಶಿಯಸ್ ಸಂಸ್ಥೆಯ ರೆಕ್ಟರ್ ರೆ.ಫಾ. ಮೆಲ್ವಿನ್ ಜೆ. ಪಿಂಟೋ ಉಪಸ್ಥಿತರಿದ್ದರು.

ದಣಿವರಿಯದ ರೆಮೋನಾ!

ನೃತ್ಯ ಅದೆಷ್ಟು ರೆಮೋನಾರ ಮನ ಮನಸ್ಸುಗಳಲ್ಲಿ ಸೇರಿದೆಯೆಂಬುದಕ್ಕೆ ಆಕೆ ರೆಕಾರ್ಡ್‌ಗಾಗಿನ 170 ಗಂಟೆಗಳ ಪ್ರದರ್ಶನದ ಬಳಿಕ ವೇದಿಕೆಯ ಮೇಲೆ ನೀಡಿದ ಪ್ರದರ್ಶನ ಸಾಕ್ಷಿಯಾಯಿತು. ದಾಖಲೆ ನಿರ್ಮಾಣದ ಅವಧಿ ಮುಗಿದ ಬಳಿಕ ಭರತನಾಟ್ಯದ ಸಾಂಪ್ರದಾಯಿಕ ಉಡುಗೆ ತೊಟ್ಟು ವೇದಿಕೆಯ ಮೇಲೆ ಸುಮಾರು 10 ನಿಮಿಷಗಳ ಪ್ರದರ್ಶನ ವೀಕ್ಷಕರನ್ನು ನಿಬ್ಬೆರಗಾಗಿಸಿತು. ಕಣ್ಣುಗಳು ನಿದ್ದೆ ಬಯಸುತ್ತಿದ್ದರೂ, ಅದೇನೂ ಇಲ್ಲದಂತೆ ವೇದಿಕೆಯ ಮೇಲೇರಿದ ರೆಮೋನಾರನ್ನು ಎದುರು ಕುಳಿತಿದ್ದ ಪ್ರೇಕ್ಷಕರು, ಆಕೆಯ ಸ್ನೇಹಿತರು ಶಿಳ್ಳೆ, ಕರತಾಡನದೊಂದಿಗೆ ಹುರಿತುಂಬಿಸಿದರೆ, ಆಕೆ ತನ್ನೆಲ್ಲಾ ಆಯಾಸ, ಪ್ರಯಾಸವನ್ನು ಬದಿಗೊತ್ತಿ ದಣಿವೇ ಇಲ್ಲದಂತೆ, ‘ಘಟಂ’ ಮೇಲೇರಿ ನೃತ್ಯ ಪ್ರದರ್ಶಿಸಿದರು.

ಇದಕ್ಕೂ ಮೊದಲು ಮಾಧ್ಯಮದ ಜತೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ರೆಮೋನಾ, ತನ್ನ ಈ ಸಾಧನೆಗೆ ಸಹಕರಿಸಿದ ಪರಮಾತ್ಮ, ತಾಯಿ, ಶಿಕ್ಷಕರ ಜತೆ ‘ನಾನು ದಾಖಲೆ ಮಾಡಬಲ್ಲೆ’ ಎಂದು ನನಗೆ ಸದಾ ಪ್ರೋತ್ಸಾಹ ನೀಡಿದ ತನ್ನ ಸಹಪಾಠಿಗಳಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.


‘ಭರತನಾಟ್ಯದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ದಾಖಲೆಯನ್ನು ರೆಮೋನಾ ಮಾಡಿದ್ದಾರೆ. ಅದೊಂದು ಸಾಧನೆ ಅಲ್ಲ, ವಿಸ್ಮಯ.ನಿದ್ದೆ ಇಲ್ಲದೆ ಭರತನಾಟ್ಯನೃತ್ಯ ಪ್ರದರ್ಶನ ಊಹಿಸುವುದೂ ಅಸಾಧ್ಯ. ಅಂತಹದರಲ್ಲಿ ರೆಮೋನಾ 170 ಗಂಟೆ ನಿದ್ದೆ ಇಲ್ಲದೆ ಮನಸ್ಸು ಮತ್ತು ದೇಹವನ್ನು ಸಮತೋಲನದಲ್ಲಿರಿಸಿ ನೃತ್ಯ ಮಾಡುವುದು ವಿಸ್ಮಯ ಹಾಗೂ ದೈವಿಕ ಸಾಹಸ. ನಾನು ಯಾವ ರೀತಿ ನೃತ್ಯಾಭ್ಯಾಸಕ್ಕೆ ಪೂರ್ವ ತಯಾರಿಸಿ ನೀಡಿದ್ದೆನೋ ಅದೇ ರೀತಿಯ ಹಾವಭಾವ, ಆಂಗಿಕ ಭಂಗಿಯೊಂದಿಗೆ ಕೊನೆಯ ದಿನವಾದ ಇಂದು ಕೂಡಾ ರೆಮೋನಾ ನೃತ್ಯ ಪ್ರದರ್ಶನ ನೀಡಿದ್ದಾರೆ. ನೃತ್ಯದ ಮನೋಧರ್ಮ ವನ್ನು ದಾಖಲೆಯ ತುಡಿತಕ್ಕೆ ಸಮಾನವಾಗಿ ಪ್ರಸ್ತುತಪಡಿಸಿ ನೃತ್ಯ ಕ್ಷೇತ್ರದಲ್ಲಿ ಈ ದಾಖಲೆ ಮೂಲಕ ತುಳುನಾಡು ಮಾತ್ರವಲ್ಲದೆ, ಭಾರತಕ್ಕೆ ಮಾದರಿಯಾಗಿದ್ದಾಳೆ. ಜಾತಿ, ಮತ ಎಲ್ಲವನ್ನೂ ಮೀರಿ ಕಲೆಯನ್ನು ಒಟ್ಟುಗೂಡಿಸಿ ತನ್ನ 19ನೆ ವಯಸ್ಸಿನಲ್ಲಿ ವಿಶ್ವದಾಖಲೆ ಮಾಡಿರುವುದು ಆಕೆಯ ಗುರುವಾಗಿ ನನಗೂ ಹೆಮ್ಮೆಯಾಗಿದೆ.’

-ಡಾ. ವಿದ್ಯಾ ಮುರಳೀಧರ್, ನೃತ್ಯ ಗುರು.


"ವಿಶೇಷ ಹಾಗೂ ಅದ್ಭುತವಾದ ವಿಷಯಗಳನ್ನು ಮಾತ್ರವೇ ಅಮೆರಿಕ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಪರಿಗಣಿಸಲಾಗುತ್ತದೆ. ಭಾರತದ ಶಾಸ್ತ್ರೀಯ ನೃತ್ಯ ಕಲೆಗಳಲ್ಲಿ ಭರತನಾಟ್ಯ ಅತ್ಯಂತ ಕ್ಲಿಷ್ಟಕರ ನೃತ್ಯವಾಗಿ ಗುರುತಿಸಿಕೊಂಡಿದೆ. ಇಲ್ಲಿ ನೃತ್ಯ ಪಟುವಿನ ಹಾವಭಾವಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಹಾಗಾಗಿ ರೆಮೋನಾ ಭರತನಾಟ್ಯದ 7 ದಿನಗಳ ಮಾರಥಾನ್ ಬಗ್ಗೆ ಸಂಸ್ಥೆಯಲ್ಲಿ ಕೋರಿಕೊಂಡಾಗ, ರೆಕಾರ್ಡ್‌ಗೆ 5 ದಿನಗಳ ನಿರಂತರ ನೃತ್ಯ ಸಾಕು ಎಂದಿದ್ದೆವು. ಆದರೆ ಆಕೆ ಮಾತ್ರ ಆಕೆ ಮಾತ್ರ 7 ದಿನಗಳ ಕಾಲ ನೃತ್ಯ ಮಾಡುವುದಾಗಿ ನಮಗೆ ಆರಂಭದಲ್ಲಿಯೇ ಹೇಳಿಕೊಂಡಿದ್ದಳು. ಆ ಮೂಲಕ 10,200 ನಿಮಿಷಗಳ ನೃತ್ಯ ದಾಖಲೆಯನ್ನು ಆಕೆ ಮಾಡಿದ್ದಾಳೆ. ಈ ರೆಕಾರ್ಡ್‌ನಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಸಹಕಾರ, ಆಕೆಯ ಸ್ನೇಹಿತರ ಪ್ರೋತ್ಸಾಹವೂ ಕಾರಣ".

-ಡಾ. ಮನೀಶ್ ವಿಷ್ನೋಯಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಭಾರತೀಯ ಪ್ರತಿನಿಧಿ.

"ರೆಮೋನಾ ತನ್ನ ಸಾಧನೆಯನ್ನು ಗುರಿ ಮುಟ್ಟುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಆಕೆಯ ಸಾಧನೆ ಇತರರಿಗೂ ಮಾದರಿ".


-ಐವನ್ ಡಿಸೋಜಾ, ವಿಧಾನ ಪರಿಷತ್ ಸದಸ್ಯರು.

"ಆಕೆ ಬಿಎ ಪದವಿಗೆ ಸಂಸ್ಥೆಗೆ ಸೇರುವ ಸಂದರ್ಭದಲ್ಲಿಯೇ ನೃತ್ಯದಲ್ಲಿ ದಾಖಲೆ ಮಾಡುವ ಬಗ್ಗೆ ಹೇಳಿಕೊಂಡಿದ್ದರು. ಅದಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ಸಂಸ್ಥೆ ಕೂಡಾ ಸಂಬಂಧಪಟ್ಟವರನ್ನು ಸಂಪರ್ಕಿಸಿ, ಕಾಲೇಜಿನಲ್ಲಿ ದಾಖಲೆ ನಿರ್ಮಾಣಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದ್ದೇವೆ. ಆಕೆ ತನ್ನ ಸಾಧನೆಯ ಗುರಿ ಮುಟ್ಟುವ ಮೂಲಕ ಸಂಸ್ಥೆಗೂ ಕೀರ್ತಿ ತಂದಿದ್ದಾಳೆ. ನಮಗೆಲ್ಲರಿಗೂ ಇದು ಹೆಮ್ಮೆಯ ವಿಚಾರ."

-ರೆ.ಫಾ. ಡಾ. ಪ್ರವೀಣ್ ಮಾರ್ಟಿಸ್, ಉಪ ಕುಲಪತಿ, ಸಂತ ಅಲೋಶಿಯಸ್ ವಿವಿ.





















share
ವಾರ್ತಾಭಾರತಿ
ವಾರ್ತಾಭಾರತಿ
Next Story
X