ಮಂಗಳೂರು | ಕದ್ರಿ ಮಲ್ಲಿಕಟ್ಟೆಯಲ್ಲಿ ನ.26ರಂದು ಎಆರ್‌ಎಂ ಕಿಯಾ ಶೋರೂಂ ಶುಭಾರಂಭ

ಮಂಗಳೂರು, ನ.25: ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿ ಕಿಯಾ ಸಂಸ್ಥೆಯ ಅತ್ಯಾಧುನಿಕ ಎಆರ್‌ಎಂ ಕಿಯಾ ಶೋರೂಂ ನ.26ರಂದು ಮಧ್ಯಾಹ್ನ 12 ಗಂಟೆಗೆ ಶುಭಾರಂಭಗೊಳ್ಳಲಿದೆ.
ಎಆರ್‌ಎಂ ಮೋಟಾರ್ಸ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಿಯಾ ಇಂಡಿಯಾದ ದಕ್ಷಿಣ ವಲಯದ ಹಿರಿಯ ಪ್ರತಿನಿಧಿ ಜೊಂಗೊ ರ್ಯು, ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕ (ಮಾರುಕಟ್ಟೆ) ರಾಹುಲ್ ಕಿರಣ್ ನಿಕಮ್, ಪ್ರಾದೇಶಿಕ ವ್ಯವಸ್ಥಾಪಕ -(ಮಾರುಕಟ್ಟೆ) ರಿಶಿ ರಾಜ್, ಹಾಗೂ ಸ್ಥಳೀಯ ವ್ಯವಸ್ಥಾಪಕ (ಮಾರುಕಟ್ಟೆ) ಕಿರಣ್ ಬಂಗಾರಿಮಠ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





