ಮಂಗಳೂರು | ಬರಕಾ ನೀಟ್ ಅಕಾಡೆಮಿಯಿಂದ ವೈದ್ಯಕೀಯ ಸಾಧಕ ವಿದ್ಯಾರ್ಥಿನಿಯರಿಗೆ ಸನ್ಮಾನ

ಮಂಗಳೂರು : ಬರಕಾ ನೀಟ್ ಅಕಾಡೆಮಿ ವತಿಯಿಂದ NEET ಪರೀಕ್ಷೆಯಲ್ಲಿ ಸಾಧನೆಗೈದ ಮತ್ತು ಉಚಿತ ಸರ್ಕಾರಿ ಸೀಟು ಗಳಿಸಿದ ವಿದ್ಯಾರ್ಥಿನಿಯರನ್ನು ಗೌರವಿಸುವ ಸನ್ಮಾನ ಸಮಾರಂಭ ನಡೆಯಿತು.
ಅಕಾಡೆಮಿಯ ಒಟ್ಟು 12 NEET ವಿದ್ಯಾರ್ಥಿಗಳ ಪೈಕಿ ಮೂವರು MBBS ಹಾಗೂ ಮೂವರು BDS ಸೀಟುಗಳನ್ನು ಪಡೆಯುವ ಮೂಲಕ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ. ಉಳಿದ ಆರು ವಿದ್ಯಾರ್ಥಿಗಳು ಮೂರನೇ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ ವೈದ್ಯಕೀಯ ಹಾಗೂ AYUSH ವಿಭಾಗದ ಸೀಟು ಹಂಚಿಕೆಗಾಗಿ ಕಾಯುತ್ತಿದ್ದಾರೆ.
ಹೀಗೆ ಕಳೆದ ವರ್ಷದಂತೆ ಈ ವರ್ಷವೂ 100 ಶೇ. ವಿದ್ಯಾರ್ಥಿಗಳು ವಿವಿಧ ವೈದ್ಯಕೀಯ ರಂಗದ ಸೀಟುಗಳನ್ನು ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ.
ಸಮಾರಂಭದಲ್ಲಿ ಸನ್ಮಾರ್ಗ ಗ್ರೂಪ್ ಆಫ್ ಮಾಸ್ ಮೀಡಿಯಾ ಸಂಪಾದಕ ಎ.ಕೆ. ಕುಕ್ಕಿಲ, MEIF ಉಪಾಧ್ಯಕ್ಷ ಫರ್ವೇಝ್ ಅಲಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಸ್ಸೈನಾರ್ ತಳಿತ್ತನೂಜಿ, Voice of Gen -Z ಸಂಸ್ಥಾಪಕ ಸಲಾಂ ಸಮ್ಮಿ ಹಾಗೂ ಬ್ಯಾರಿ ಕಲಾವಿದ ಝುಲ್ಫಿಕರ್ ಕಾಸಿಂ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ಅತಿಥಿಗಳೆಲ್ಲರೂ ಬರಕಾ ಅಕಾಡೆಮಿಯ ವತಿಯಿಂದ ನಡೆಸುವ ಈ ಸೇವೆಯನ್ನು ಶ್ಲಾಘಿಸಿದರಲ್ಲದೆ ಸಮುದಾಯದ ಹೆಣ್ಣುಮಕ್ಕಳು ಇದರ ಗರಿಷ್ಠ ಪ್ರಯೋಜನ ಪಡೆಯಬೇಕು ಎಂದು ಒತ್ತಿ ಹೇಳಿದರು.
ತಮ್ಮ ಮಕ್ಕಳ ಪರಿಶ್ರಮ, ತ್ಯಾಗ ಮತ್ತು ಸತತ ಪ್ರಯತ್ನದ ಫಲವಾಗಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ದೊರೆತಿರುವುದನ್ನು ಕಣ್ತುಂಬಿಕೊಂಡ ಪೋಷಕರಿಗೆ ಈ ಸಮಾರಂಭ ಅತ್ಯಂತ ಭಾವನಾತ್ಮಕ ಹಾಗೂ ಹೆಮ್ಮೆಯ ಕ್ಷಣವಾಗಿ ಪರಿಣಮಿಸಿತ್ತು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಬರಕಾ ಗ್ರೂಪ್ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಅವರು, ವೈದ್ಯರಾಗುವುದು ಕೇವಲ ವೃತ್ತಿಯಲ್ಲ, ಸಮಾಜ ಮತ್ತು ಮಾನವಕುಲದ ಸೇವೆಗೆ ದೊರೆಯುವ ಮಹತ್ವದ ಅವಕಾಶವಾಗಿದೆ ಎಂದು ಹೇಳಿದರು.
ಮುಂದಿನ NEET ವರ್ಷದಲ್ಲಿ ಹೆಚ್ಚಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದರ ಜೊತೆಗೆ, ಇನ್ನಷ್ಟು ವೈದ್ಯರನ್ನು ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡುವುದು ಅಕಾಡೆಮಿಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಲಾಯಿತು.
ಕಡಿಮೆ ಶುಲ್ಕದಲ್ಲಿ ಗುಣಮಟ್ಟದ NEET ಶಿಕ್ಷಣ ನೀಡುವುದರ ಜೊತೆಗೆ ಶಿಸ್ತು, ನೈತಿಕ ಮೌಲ್ಯಗಳು ಮತ್ತು ಇಸ್ಲಾಮಿಕ್ ಆಚರಣೆಗಳನ್ನು ಪಾಲಿಸುವ ವಾತಾವರಣವನ್ನು ಅಕಾಡೆಮಿ ರೂಪಿಸಿದೆ. ಈ ವಿಶಿಷ್ಟ ಸೇವೆಯ ಪ್ರಯೋಜನ ಪಡೆಯಲು 9611903137, 9108243155 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.






