Mangaluru | ಉದ್ಯಮಿಯ ಹನಿಟ್ರ್ಯಾಪ್ ಪ್ರಕರಣ : ಆರೋಪಿಗಳಿಗೆ ಜಾಮೀನು ಮಂಜೂರು

ಸಾಂದರ್ಭಿಕ ಚಿತ್ರ
ಮಂಗಳೂರು : ಮಂಗಳೂರಿನ ಹೆಸರಾಂತ ಉದ್ಯಮಿಯೊಬ್ಬರಿಗೆ ಸಲಿಂಗಕಾಮಕ್ಕೆ ಸಂಬಂಧಿಸಿದ ವಿಡಿಯೊವನ್ನು ಮುಂದಿಟ್ಟು ಬ್ಲ್ಯಾಕ್ಮೇಲ್ ಮಾಡಿ 2.77 ಕೋಟಿ ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಿಜಾಮ್ ಹಾಗೂ ಜಿತೇಶ್ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉದ್ಯಮಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಿಜಾಮ್ @ ಇಬ್ರಾಹಿಂ ಮತ್ತು ಜಿತೇಶ್ ಅವರನ್ನು ಬಂಧಿಸಿ ಮಾನ್ಯ ಪ್ರಧಾನ ಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಪ್ರಸ್ತುತ, ಆರೋಪಿಗಳ ಪರವಾಗಿ ಮಂಡಿಸಲಾದ ವಾದಗಳನ್ನು ಪರಿಗಣಿಸಿದ ಮಾನ್ಯ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆರೋಪಿ ನಿಜಾಮ್ @ ಇಬ್ರಾಹಿಂ ಪರವಾಗಿ ನ್ಯಾಯವಾದಿ ಜೀಷನ್ ಅಲಿ ಸುರತ್ಕಲ್, ಯುವ ನ್ಯಾಯವಾದಿ ತಾಜುದ್ದೀನ್ ಹಾಗೂ ಆರೋಪಿ ಜಿತೇಶ್ ಪರವಾಗಿ ನ್ಯಾಯವಾದಿ ವಿಕ್ರಂ ವಾದ ಮಂಡಿಸಿದ್ದರು.
Next Story




