ಮಂಗಳೂರು | ವ್ಯಾಪಾರ, ಉದ್ದಿಮೆ ಹೆಸರಿನಲ್ಲಿ ಬ್ಯಾಂಕ್‌ನಿಂದ ಸಾಲ ಪಡೆದು ವಂಚನೆ: ಪ್ರಕರಣ ದಾಖಲು

ಮಂಗಳೂರು, ಡಿ.5: ಬೇರೆ ಬೇರೆ ವ್ಯಾಪಾರ ಮತ್ತು ಉದ್ದಿಮೆ ನಡೆಸುವ ಸಲುವಾಗಿ ಬ್ಯಾಂಕ್ನಿಂದ ಸಾಲ ಪಡೆದ 14 ಮಂದಿ ಸಕಾಲಕ್ಕೆ ಸಾಲ ಮರುಪಾವತಿಸದೆ ವಂಚಿಸಿದ ಹಾಗೂ ಅವರಿಗೆ ಸಹಕಾರ ನೀಡಿದ ಆರೋಪದ ಮೇರೆಗೆ ನಗರದ ಮಲ್ಲಿಕಟ್ಟೆಯಲ್ಲಿ ಶಾಖೆಯನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರಿಲೇಶನ್ ಶಿಪ್ ಮ್ಯಾನೇಜರ್ ಅಭಿಷೇಕ್ ನಂದ ವಿರುದ್ಧ ಬ್ಯಾಂಕ್ n ಪ್ರಧಾನ ವ್ಯವಸ್ಥಾಪಕ ಸೌರಭ್ ಕುಮಾರ್ ವರ್ಮ ಕದ್ರಿ ಠಾಣೆಗೆ ದೂರು ನೀಡಿದ್ದಾರೆ.
2025ರ ಜೂನ್ 2ರಿಂದ ತಾನು ಈ ಬ್ಯಾಂಕ್ n ಮುಖ್ಯ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿರುವೆ. ಈ ಬ್ಯಾಂಕಿನಲ್ಲಿ ರಿಲೇಷನ್ ಶಿಪ್ ಮ್ಯಾನೇಜರ್ ಆಗಿದ್ದ 1ನೇ ಆರೋಪಿ ಅಭಿಷೇಕ್ ನಂದ 2022ರ ಜೂನ್ 27ರಿಂದ 2024ರ ನವೆಂವರ್ 20ರ ಮಧ್ಯೆ ಲಘು ಉದ್ಯಮ ಯೋಜನೆಯಡಿ ರಿಫಾದ್ ಮುಹಮ್ಮದ್, ಸೆಫಿಯಾ, ಮುಹಮ್ಮದ್ ಝಿಯಾಮ್ ನಿಟ್ಟೆ ಹಸನ್ ಆದಂ ಎಂಬವರಿಗೆ ಇಲೆಕ್ಟ್ರಾನಿಕ್ಸ್ ವಸ್ತುಗಳ ಉದ್ಯಮ ನಡೆಸಲು, ಅಕ್ಷತಾಳಿಗೆ ಸೋಲಾರ್ ರೂಫ್ ಟಾಪ್ ವಸ್ತುಗಳ ಉದ್ಯಮ ನಡೆಸಲು, ಅನ್ವರ್ ಹುಸೈನ್, ಅಬೂಬಕರ್, ಮುಹಿಯುದ್ದೀನ್, ರಶ್ಮಿತಾ, ಹೀಬಾ ಹಲೀಮಾ, ಅಶ್ರಫ್ ಅಬ್ಬಾಸ್ ಬ್ಯಾರಿ, ಸುಷ್ಮಾ, ಅಕ್ಬರ್ ಸಲಾಂ, ರೈಹಾನತ್ ಕೆ.ಎ., ಮುಹಮ್ಮದ್ ರಫಾನ್ ಅವರಿಗೆ ಫ್ಲೈವುಡ್ ಟ್ರೇಡಿಂಗ್, ಅಡಿಕೆ ವ್ಯಾಪಾರ, ಕೋಳಿ ಆಹಾರದ ಉದ್ದಿಮೆ, ಸುಪರ್ ಮಾರ್ಕೆಟ್ ಉದ್ಯಮ, ಲೆದರ್ಬ್ಯಾಗ್ ಹಾಗೂ ಶೂ ಟ್ರೇಡಿಂಗ್ ಉದ್ಯಮ, ಗೃಹೋಪಯೋಗಿ ವಸ್ತುಗಳ ತಯಾರಿಕೆ ಉದ್ಯಮ, ಕಿಚನ್ ಸಾಮಗ್ರಿ ಉದ್ಯಮ, ಹೊಟೇಲ್ ಮತ್ತು ರೆಸ್ಟೋರೆಂಟ್ ಉದ್ಯಮ ನಡೆಸಲು ಆರೋಪಿಗಳಿಂದ ದಾಖಲಾತಿಗಳನ್ನು ಪಡೆದುಕೊಂಡು ಸಾಲ ಮಂಜೂರು ಮಾಡಿದ್ದಾರೆ. ಆದರೆ ಸಾಲಗಾರರು ಕಂತನ್ನು ಅಂದರೆ ಸುಮಾರು 10,47,40,000 ಕೋ.ರೂ. ವನ್ನು ಕ್ಲಪ್ತ ಸಮಯಕ್ಕೆ ಬ್ಯಾಂಕ್ ge ಪಾವತಿಸದೆ ವಂಚಿಸಿದ್ದಾರೆ.
ಸಾಲಗಾರರು ಬ್ಯಾಂಕ್ ge ಮೋಸ ಮಾಡುವ ಸಮಾನ ಉದ್ಧೇಶವನ್ನು ಹೊಂದಿದ್ದು,ಬ್ಯಾಂಕ್ n ರಿಲೇಶನ್ ಶಿಪ್ ಮ್ಯಾನೇಜರ್ ಅಭಿಷೇಕ್ ನಂದ ಸಾಲಗಾರರಿಂದ ಆರ್ಥಿಕ ಲಾಭವನ್ನು ಪಡೆದಿದ್ದಾರೆ. ಸಾಲಗಾರರು ಉದ್ದಿಮೆಯನ್ನು ಸಮರ್ಪಕವಾಗಿ ನಡೆಸುವುದಿಲ್ಲವೆಂದು ತಿಳಿದಿದ್ದರೂ ಕೂಡಾ ಸಾಲ ಮಂಜೂರಾತಿಗೆ ಶಿಫಾರಸ್ಸು ಮಾಡಿರುವುದಾಗಿ ದೂರು ನೀಡಲಾಗಿದೆ. ಅದರಂತೆ ಬ್ಯಾಂಕ್ n ರಿಲೇಶನ್ ಶಿಪ್ ಮ್ಯಾನೇಜರ್ ಸಹಿತ 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.





