ಮಂಗಳೂರು: ಮಲಬಾರ್ ಗೋಲ್ಡ್ & ಡೈಮಂಡ್ಸ್ ನಲ್ಲಿ ವಿಶೇಷ ಆಂಟಿಕ್ ಜ್ಯುವೆಲರಿ ಪ್ರದರ್ಶನ, ಮಾರಾಟಕ್ಕೆ ಚಾಲನೆ

ಮಂಗಳೂರು: ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ನ ಮಂಗಳೂರು ಶೋರೂಂನಲ್ಲಿ ಆಂಟಿಕ್ ಜ್ಯುವೆಲರಿಗಳ ವಿಶೇಷ ಪ್ರದರ್ಶನ ಹಾಗೂ ಮಾರಾಟ ಬುಧವಾರ ಆರಂಭಗೊಂಡಿದೆ.
ಸೆ.9ರಿಂದ 17 ರವರೆಗೆ 9 ದಿನಗಳ ಕಾಲ ನಡೆಯಲಿರುವ ಪ್ರದರ್ಶನ, ಮಾರಾಟಕ್ಕೆ ಮಿಸೆಸ್ ಇಂಡಿಯಾ ಕರ್ನಾಟಕ 2025 ಪ್ರಶಸ್ತಿ ವಿಜೇತೆ ತಶ್ಮಾ ಚೇತನ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮಲಬಾರ್ ಗೋಲ್ಡ್ & ಡೈಮಂಡ್ಸ್ ಯಾವಾಗಲೂ ಪರಂಪರೆಗೆ ಆಧುನಿಕತೆಯ ಸ್ಪರ್ಶ ನೀಡುವ ಆಭರಣಗಳನ್ನು ಪರಿಚಯಿಸುತ್ತಿದೆ. ಈ ಆಂಟಿಕ್ ಸಂಗ್ರಹವು ಪ್ರತಿಯೊಬ್ಬ ಮಹಿಳೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಿ.ಎಚ್.ಡಿ. ಸಂಶೋಧಕಿ ರೇಷ್ಮಾ ಕೋಟೆ ಮಾತನಾಡಿ, "ಈ ಆಂಟಿಕ್ ಜ್ಯುವೆಲರಿ ಸಂಗ್ರಹವನ್ನು ವಿಶೇಷವಾಗಿ ಆಭರಣಪ್ರಿಯರು, ಮದುವೆಗೆ ಸಿದ್ಧರಾಗುತ್ತಿರುವ ವಧುಗಳು, ಹಾಗೂ ಹಬ್ಬ, ನಿಶ್ಚಿತಾರ್ಥ ಮತ್ತು ಇತರ ವಿಶೇಷ ಸಂದರ್ಭಗಳಿಗಾಗಿ ವಿಭಿನ್ನ ಹಾಗೂ ವಿಶೇಷ ವಿನ್ಯಾಸದ ಆಭರಣಗಳನ್ನು ಹುಡುಕುತ್ತಿರುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದಂತಿದೆ. ಪ್ರತಿಯೊಂದು ಆಭರಣದಲ್ಲೂ ಕರಕುಶಲತೆಯ ಅದ್ಭುತವನ್ನು ಕಾಣಬಹುದು" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಮಂಗಳೂರು ಶೋರೂಮಿನ ಸ್ಟೋರ್ ಹೆಡ್ ಹಫೀಝ್ ರಹ್ಮಾನ್, ಡೆಪ್ಯುಟಿ ಸೇಲ್ಸ್ ಮ್ಯಾನೇಜರ್ ಮುಹಮ್ಮದ್ ಸಮೀರ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಕ್ ಫರ್ಹಾನ್ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರದರ್ಶನದ ವಿಶೇಷತೆಗಳು:
ಪರಂಪರೆ, ಸಂಸ್ಕೃತಿ ಮತ್ತು ರಾಜಮನೆತನದ ಸೊಬಗನ್ನು ಪ್ರತಿಬಿಂಬಿಸುವ ನೂರಾರು ವಿಶಿಷ್ಟ ವಿನ್ಯಾಸಗಳ ಆಭರಣಗಳನ್ನು ಒಳಗೊಂಡ ಈ ಪ್ರದರ್ಶನವು ಸೆ.9ರಿಂದ 17ರವರೆಗೆ ಒಂಭತ್ತು ದಿನಗಳ ನಡೆಯಲಿದೆ.
ಪ್ರದರ್ಶನದ ಅವಧಿಯಲ್ಲಿ ಶೋರೂಮಿಗೆ ಭೇಟಿ ನೀಡಿ ಆಂಟಿಕ್ ಆಭರಣಗಳನ್ನು ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಚಾರ್ಜ್ ಮೇಲೆ ಶೇ.50ರ ವರೆಗೆ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದು ಗ್ರಾಹಕರಿಗೆ ತಮ್ಮ ಕನಸಿನ ಆಭರಣಗಳನ್ನು ಅತ್ಯಂತ ಆಕರ್ಷಕ ಬೆಲೆಯಲ್ಲಿ ಖರೀದಿಸಲು ಸುವರ್ಣಾವಕಾಶವಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.






