Mangaluru | ಮೇ 15ರಿಂದ 17ರವರೆಗೆ 'ವಿಂಟೇಜ್ ವೈಬ್ಸ್' ವಸ್ತು ಪ್ರದರ್ಶನ

ಮಂಗಳೂರು, ಮೇ 14: ಸಿಟಿ ಸೆಂಟರ್ ನೇತೃತ್ವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಫಿಲಾಟೆಲಿಕ್ಸ್ ಮತ್ತು ನುಮಿಸ್ ಮೆಟಿಕ್ಸ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಮೇ 15ರಿಂದ 17ರವರೆಗೆ ಮೂರು ದಿನಗಳ 'ವಿಂಟೆಜ್ ವೈಬ್ಸ್' ವಸ್ತು ಪ್ರದರ್ಶನ ನಡೆಯಲಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಪ್ರಭಾಕರ ಕಾಮತ್ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಕಾರ್ಯಕ್ರಮದಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಾಗಿದೆ. ಪುರಾತನ ನಾಣ್ಯ, ಕರೆನ್ಸಿ, ಅಂಚೆ ಚೀಟಿಗಳು, ಗಡಿಯಾರಗಳು, ವಸ್ತುಶಿಲ್ಪಗಳ ಜೊತೆಗೆ ಸುಮಾರು 19 ಬಗೆಯ ಸಂಗ್ರಹ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗುವುದು. ಪುರಾತನ ಜಗತ್ತಿನ ವಿಸ್ಮಯಗಳಿಂದ ಕೂಡಿದ ಅಪರೂಪವಾದ ವಸ್ತು ಪ್ರದರ್ಶನ ಸಿಟಿ ಸೆಂಟರ್ ಮಾಲ್ ನ ನೆಲ ಅಂತಸ್ತಿನಲ್ಲಿ ಜರುಗಲಿದೆ ಎಂದರು.
ಮಕ್ಕಳಿಗೆ ಗತಕಾಲದ ವಸ್ತುಗಳನ್ನು ತೋರಿಸಿ ಅದರ ಮಹತ್ವವನ್ನು ತಿಳಿಸಲು ಪೋಷಕರಿಗೆ ಸುವರ್ಣಾವಕಾಶವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ನೋಡಿದ ಕೆಲವು ವಸ್ತುಗಳನ್ನು ಹತ್ತಿರದಿಂದ ನೋಡುವ ಅವಕಾಶ ಇದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್ ಕಾರ್ಯದರ್ಶಿ ಸಂತೋಷ್ ಪ್ರಭು, ನಮಸ್ತೆ ಮಂಗಳೂರು ಮುಖ್ಯಸ್ಥರಾದ ಕಿರಣ್ ಶೆಣೈ, ಸಿಟಿ ಸೆಂಟರ್ ಮ್ಯಾನೇಜರ್ ನಿಶಿತ್, ವೈಶಾಲಿ, ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.




