Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳೂರಿನ ರಿತುಪರ್ಣಗೆ ರೋಲ್ಸ್...

ಮಂಗಳೂರಿನ ರಿತುಪರ್ಣಗೆ ರೋಲ್ಸ್ ರೋಯ್ಸ್‌ನಲ್ಲಿ ಉದ್ಯೋಗ

ಸಂಸ್ಥೆಯ ಅತೀ ಕಿರಿಯ ಉದ್ಯೋಗಿಯಾಗಿ ಆಯ್ಕೆ!

ವಾರ್ತಾಭಾರತಿವಾರ್ತಾಭಾರತಿ12 July 2025 2:53 PM IST
share
ಮಂಗಳೂರಿನ ರಿತುಪರ್ಣಗೆ ರೋಲ್ಸ್ ರೋಯ್ಸ್‌ನಲ್ಲಿ ಉದ್ಯೋಗ

ಮಂಗಳೂರು, ಜು. 12: ಅಮೆರಿಕದ ಪ್ರತಿಷ್ಟಿತ ಕಂಪನಿಗಳಲ್ಲಿ ಒಂದಾದ ರೋಲ್ಸ್ ರೋಯ್ಸ್‌ನಲ್ಲಿ ಇಂಟರ್ನ್‌ಶಿಪ್ ಬಯಸಿ 8 ತಿಂಗಳ ಕಾಲ ಸಂದರ್ಶನ ನೀಡಿದ್ದ ಮಂಗಳೂರಿನ 20ರ ಹರೆಯದ ರಿತುಪರ್ಣ ಆ ಸಂಸ್ಥೆಯಲ್ಲಿ ನೇರವಾಗಿ ಉದ್ಯೋಗವನ್ನೇ ಗಿಟ್ಟಿಸಿಕೊಂಡಿದ್ದಾರೆ.

ಪ್ರಸಕ್ತ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೋಬೋಟಿಕ್ ಆ್ಯಂಡ್ ಅಟೋಮೇಶನ್ ಕೋರ್ಸ್‌ನ 6ನೇ ಸೆಮಿಸ್ಟರ್‌ನ ವಿದ್ಯಾರ್ಥಿನಿಯಾಗಿರುವ ರಿತುಪರ್ಣ ರೋಲ್ಸ್‌ರೋಯ್ಸ್ ಸಂಸ್ಥೆಯ ಜೆಟ್ ಇಂಜಿನ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ. ಕಂಪನಿಯಲ್ಲಿ ವಾರ್ಷಿಕ 72.3 ಲಕ್ಷ ರೂ.ಗಳ ವೇತನದ ಆಫರನ್ನು ಗಿಟ್ಟಿಸಿಕೊಂಡಿರುವ ರಿತುಪರ್ಣ ಅವರು ಸಂಸ್ಥೆಯ ಅತ್ಯಂತ ಕಿರಿಯ ಉದ್ಯೋಗಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.

ಮೂಲತಃ ತೀರ್ಥಹಳ್ಳಿಯವರಾದ ಸರೇಶ್ ಹಾಗೂ ಗೀತಾ ದಂಪತಿಯ ಪುತ್ರಿ ರಿತುಪರ್ಣ ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಗ್ರಾ.ಪಂ. ವ್ಯಾಪ್ತಿ. ಯಮರವಳ್ಳಿ ಗ್ರಾಮದ ಕೊದೂರಿನಲ್ಲಿ ಹುಟ್ಟಿದ್ದು.

ಮಂಗಳೂರಿನ ಸೈಂಟ್ ಆಗ್ನೆಸ್‌ನ ಬಳಿಕ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೊಬೆಟಿಕ್ ಆ್ಯಂಡ್ ಅಟೋಮಿಷನ್ ಕೋರ್ಸ್‌ನ ವಿದ್ಯಾರ್ಥಿನಿ. ಇಂಜಿನಿಯರಿಂಗ್ ಶಿಕ್ಷಣದ ಪ್ರಥಮ ವರ್ಷದಲ್ಲಿ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಇನ್ನೋವೇಶನ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಆಕೆ ಹಾರ್ವೆಸ್ಟಿಂಗ್ ಆ್ಯಂಡ್ ಸ್ಪೇಯರ್ ಎಂಬ ವಿಷಯದ ಅವಿಷ್ಕಾರಕ್ಕೆ ಆಕೆ ಚಿನ್ನ ಮತ್ತು ಕಂಚಿನ ಪದಕ ಪಡೆಯುತ್ತಾರೆ. ಈ ರೀತಿ ಆರಂಭಗೊಂಡ ಅನ್ವೇಷಣೆಯೊಂದಿಗೆ ಆಕೆ ತನ್ನ ಸಹಪಾಠಿಗಳ ತಂಡ ಕಟ್ಟಿಕೊಂಡು ಮಧ್ಯ ಪ್ರದೇಶದ ಇಂದೋರ್ ಐಐಟಿಗೆ, ಮಂಗಳೂರಿನ ಎನ್‌ಐಟಿಕೆಗೆ ತರಳಿ ಅನ್ವೇಷಣೆಗಳಲ್ಲಿ ಭಾಗಿಯಾಗುತ್ತಾರೆ. ನಂತರ ಡಾಕ್ಟರ್‌ಗಳನ್ನು ಸಂಪರ್ಕಿಸಿ ರೊಬೋಟಿಕ ಸರ್ಜರಿಯನ್ನು ಗಮನಿಸಿ ಅಲ್ಲಿಯೂ ಅನ್ವೇಷಣೆಯ ಪ್ರಯತ್ನ ಮಾಡಿದ್ದಾರೆ. ಮಂಗಳೂರಿ ಕಸ ವಿಲೇವಾರಿಗೆ ಸಂಬಂಧಿಸಿ ಆ್ಯಪ್ ಅಭಿವೃದ್ಧಿ ಪಡಿಸುವ ಕೆಲಸದಲ್ಲಿ ಸಹಪಾಠಿಗಳೊಂದಿಗೆ ತೊಡಗಿಸಿಕೊಂಡಿದ್ದಾರೆ.

ನಮಗೆ ಸರ್‌ಪ್ರೈಸ್ ನೀಡಿದ್ದಾಳೆ!

ಪುತ್ರಿಯ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸರೇಶ್, ‘ತಮ್ಮ ಮಗಳು ಕಳೆದ ಎಂಟು ತಿಂಗಳಿನಿಂದ ರಾತ್ರಿ ಹಗಲು ಕಂಪ್ಯೂಟರ್ ಎದುರು ಕುಳಿತು ಒತ್ತಡದಲ್ಲಿದ್ದಾಗ ನಾವೂ ಆತಂಕಕ್ಕೆ ಒಳಗಾಗಿದ್ದೆವು. ಅದೇನೋ ಓದಿನ ಒತ್ತಡಕ್ಕೆ ಸಿಲುಕಿದ್ದಾಳೆಯೇ ಎಂಬ ಅಳುಕೂ ನಮ್ಮದಾಗಿತ್ತು. ಆದರೆ ಕೆಲ ಸಮಯ ಹಿಂದೆ ಆಕೆ 8 ತಿಂಗಳ ಶ್ರಮವನ್ನು ನಮ್ಮ ಮುಂದಿರಿಸಿ ‘ರೋಲ್ಸ್ ರೋಯ್ಸ್’ನಂತಹ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿದ್ದನ್ನು ಹೇಳಿ ನಮಗೆ ಸರ್‌ಪ್ರೈಸ್ ನೀಡಿದ್ದಾಳೆ’ ಎನ್ನುತ್ತಾರೆ.

ಕಂಪನಿ ಜತೆಗಿನ ರಿತುಪರ್ಣರ 8 ತಿಂಗಳ ರೋಚಕ ಪಯಣ!

ರಿತುಪರ್ಣರ ರೋಲ್ಸ್‌ರೋಯ್ಸ್ ಕಂಪನಿ ಜತೆಗಿನ 8 ತಿಂಗಳ ಪಯಣದ ಬಗ್ಗೆ ಸರೇಶ್‌ರವರು ‘ವಾರ್ತಾಭಾರತಿ’ ಜತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

‘ಇಂಜಿನಿಯರಿಂಗ್ ಕಲಿಕೆಯ ವೇಳೆ ಇಂಟರ್ನ್‌ಶಿಪ್ ಮಾಡುವ ಹಂಬಲದೊಂದಿಗೆ ರಿತುಪರ್ಣ ವಿಶ್ವದ 10 ಮಹಾನ್ ಕಂಪನಿಗಳಲ್ಲಿ ಒಂದಾದ ರೋಲ್ಸ್ ರೋಯ್ಸ್ ಕಂಪನಿಯ ಕದ ತಟ್ಟುತ್ತಾರೆ. ಆದರೆ ಆ ಸಂದರ್ಭ ಕಂಪನಿಯಿಂದ ಬಂದ ಪ್ರತಿಕ್ರಿಯೆ ನಿರಾಸದಾಯಕವಾಗಿತ್ತು. ‘ ಈ ಕಂಪನಿ ಎಷ್ಟು ದೊಡ್ಡದು ಗೊತ್ತಾ? ಕಂಪನಿಯ ಒಳ ಬರಲು ನಿನ್ನ ಅರ್ಹತೆ ಏನು ಎಂಬ ಪ್ರಶ್ನೆಗೆ ಸುಮ್ಮನಾಗದ ರಿತುಪರ್ಣ, ನಿಮ್ಮ ಕಂಪನಿಗೆ ಏನು ಅರ್ಹತೆ ಬೇಕು ಎಂದು ಪ್ರಸ್ನಿಸಿದಾಗ, ಕಂಪನಿ ಕೋಪಗೊಂಡು, ನಮ್ಮ ಒಂದು ಟಾಸ್ಕ್ ನಿನಗೆ ತಿಂಗಳಾದರೂ ಮುಗಿಸಲು ಸಾಧ್ಯವಿಲ್ಲ ಎಂಬ ಉತ್ತರ ಬರುತ್ತದೆ.

ಟಾಸ್ಕ್‌ಕೊಡಿ ನಾನು ಕಂಪ್ಲೀಟ್ ಮಾಡುತ್ತೇನೆ ಎಂದು ಕಂಪನಿಗೆ ದಂಬಾಲು ಬೀಳುವ ರಿತುಪರ್ಣಗೆ, ಕಂಪನಿಯಿಂದ ಟಾಸ್ಕ್ ನೀಡಲಾಗಿ ತಿಂಗಳೊಳಗೆ ನೀಡುವಂತೆ ಗಡುವು ವಿಧಿಸಲಾಗುತ್ತದೆ. ಒಂದು ತಿಂಗಳೊಳಗೆ ಟಾಸ್ಕ್ ಮುಗಿಸದಿದ್ದರೆ ಮತ್ತೆ ಕಂಪನಿ ಸಂಪರ್ಕಕ್ಕೆ ಬರಬೇಡಿ ಎಂದು ನಿರ್ದಾಕ್ಷಿಣ್ಯ ಮೇಲ್ ಆದಾಗಿತ್ತು. ಟಾಸ್ಕ್ ಪಡೆದಾಗ ರಿತುಪರ್ಣಗೆ ಅದರ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ಸೋಲೊಪ್ಪದ ರಿತುಪರ್ಣ, ರಾತ್ರಿ ಹಗಲೆನ್ನದೆ, ಇಂಟರ್‌ನೆಟ್‌ನಲ್ಲಿ ಹುಡುಕಾಡಿ, ವಿಷಯ ತಿಳಿದು ತಿಂಗಳ ಟಾಸ್ಕ್ ವಾರದಲ್ಲೇ ಕಳುಹಿಸುತ್ತಾಳೆ. ಕಂಪನಿಯಿಂದ ಇನೊಂದು ಟಾಸ್ಕ್ ಎಂಬ ಉತ್ತರ ಬಂದಾಗ ಅದಕ್ಕೂ ಒಪ್ಪಿ ಸರಿ ಸುಮಾರು 8 ತಿಂಗಳ ಕಾಲ ಕಂಪನಿ ನೀಡಿದ ಟಾಸ್ಕ್‌ಗಳನ್ನು ರಾತ್ರಿ ಹಗಲು ಒತ್ತಡ, ಕಣ್ಣೀರಿನೊಂದಿಗೆಯೇ ಎದುರಿಸಿದ್ದಾಳೆ. ಕೊನೆಯ ನಾಲ್ಕೈದು ಸುತ್ತಿನ ಸಂದರ್ಶನ ಕಬ್ಬಿಣದ ಕಡಲೆಯಾಗಿ ಇನ್ನೇನೂ ತನಗೆ ಸಾಧ್ಯ ಇಲ್ಲ ಎನ್ನುವ ಸ್ಥಿತಿಗೆ ಬಂದಾಗ ಕಂಪನಿಯು ಆಕೆಗೆ ನೀಡಿದ ಆಫರ್ ಆಕೆಯಲ್ಲಿ ಆಶಾಭಾವನೆಯನ್ನು ಹುಟ್ಟಿಸಿತು. ಡಿಸೆಂಬರ್ 2024ರ ವೇಳೆಗೆ ಕಂಪನಿಯಿಂದ ಆಕೆಗೆ ಬಂದ ಮೇಲ್‌ನಲ್ಲಿ, ಇಂಟರ್ನ್‌ಶಿಪ್‌ಗೆ ನಿಮಗೆ ಅವಕಾಶವಿಲ್ಲ. ಬದಲಾಗಿ ನೀವು ನೇರವಾಗಿ ಉದ್ಯೋಗಿಯಾಗಿ ಬರಲು ತಯಾರಿದ್ದೀರಾ ಎಂಬ ಸಂದೇಶವಿತ್ತು.

ಇದಾದ ನಂತರ ಕಂಪನಿ ತಕ್ಷಣದಿಂದ ಅಂದರೆ 2025ರ ಜನವರಿ 2ರಿಂದ ಕೆಲಸ ಮಾಡಲು ನಿರ್ದೇಶನ ನೀಡುತ್ತದೆ. ಮಧ್ಯರಾತ್ರಿ 12ರಿಂದ ಬೆಳಗ್ಗೆ 6ವರೆಗೆ ಕಂಪನಿಗೆ ಒಂದು ವರ್ಷ ಮನೆಯಿಂದಲೇ ಕೆಲಸ ಮಾಡಬೇಕು. ಇಂಜಿನಿಯರಿಂಗ್‌ನ 7ನೆ ಸೆಮ್ ಮುಗಿದ ತಕ್ಷಣ ಅಮೆರಕಿದ ಟೆಕ್ಸಾಸ್‌ನಲ್ಲಿ ಕಂಪನಿಗೆ ಸೇರಿಕೊಳ್ಳಲು ಒಪ್ಪಂದವಾಗುತ್ತದೆ. ಈ ಮೂಲಕ ಜನವರಿ 2ರಿಂದ ತರಬೇತಿ ಜತೆಗೆ ಕಂಪನಿ ಕೆಲಸವನ್ನು ಸರಿದೂಗಿಸಿಕೊಂಡು ಸಾಗುತ್ತಿರುವ ರಿತುಪರ್ಣಗೆ ಎಪ್ರಿಲ್‌ನಲ್ಲಿ ಬಂದ ಕಂಪನಿಯಿಂದ ಇನ್ನೊಂದು ಸಂದೇಶ ಬರುತ್ತದೆ. ಅದರಂತೆ ನಿಮ್ಮ ಕೆಲಸ ಮತ್ತು ಏಕಾಗ್ರತೆಯನ್ನು ಮೆಚ್ಚಿ ಕಂಪನಿ ನಿಮಗೆ ವಾರ್ಷಿಕವಾಗಿ ನಿಗದಿಪಡಿಸಿದ್ದ ವೇತನ 39.58 ಲಕ್ಷ ರೂನಿಂದ 72.3 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂಬುದು ಆ ಸಂದೇಶವಾಗಿತ್ತು’ ಎಂದು ತನ್ನ ಮಗಳ ಕಠಿಣ ಪರಿಶ್ರಮದ ಬಗ್ಗೆ ಸರೇಶ್‌ರವರು ವಿವರ ನೀಡಿದ್ದಾರೆ.

‘ಯಾವುದೇ ವಿಷಯ ಕೊಟ್ಟರೂ ಗಂಟೆಗಟ್ಟಲೆ ಮಾತನಾಡಬಲ್ಲ ಚಾಕಚಕ್ಯತೆ ಹೊಂದಿರುವ ರಿತುಪರ್ಣಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ವಿಪರೀತ ಹಿಡಿತವಿದೆ. ಇದಕ್ಕ ಕಾರಣ ಆಕೆ ಕಲಿತ ಸೈಂಟ್ ಆ್ಯಗ್ನೆಸ್ ಶಾಲೆ. ಪಿಯುಸಿ ನಂತರ ವೈದ್ಯಕೀಯ ಶಿಕ್ಷಣ ಆಕೆಯ ಇಚ್ಚೆಯಾಗಿತ್ತು. ನೀಟ್‌ನಲ್ಲಿ ಸರಕಾರಿ ಸೀಟು ಸಿಗಾದ ಇಷ್ಟವಿಲ್ಲದೆ ಇಂಜಿನಿಯರಿಂಗ್ ಕೋರ್ಸ್‌ನ್ನು ಆಯ್ಕೆ ಮಾಡಿಕೊಂಡಿದ್ದಳು. 2022ರ ಸಿಇಟಿಯಲ್ಲಿ ಸರಕಾರಿ ಸೀಟ್‌ನೊಂದಿಗೆ ಮಂಗಳೂರಿನ ಸಹ್ಯಾದ್ರಿ ಕಾಲೇಜಿಗೆ ಸೇರ ಆಕೆ ಆರಂಭದಿಂದಲೇ ಹಠಕ್ಕೆ ಬಿದ್ದು, ಹೊಸ ಆಲೋಚನೆಗಳೊಂದಿಗೆ ಅನ್ವೇಷಣೆಗೆ ಗಮನ ಹರಿಸಿದಳು. ಆಕೆಗೆ ರೋಲ್ಸ್‌ರೋಯ್ಸ್‌ನಿಂದ ಮೊದಲ ಆಫರ್ ಬರುವವರೆಗೂ ನಮಗೆ ಯಾವುದೇ ಮಾಹಿತಿಯೇ ಇರಲಿಲ್ಲ. ಅದೃಷ್ಟ ಎನ್ನುವುದಕ್ಕಿಂತ ಆಕೆಯ ಪ್ರತಿಭೆ, ಸಹನೆ, ತಾಳ್ಮೆಯೇ ಆಕೆಗೆ ಈ ಅವಕಾಶ ನೀಡಿದೆ. ಕಠಿಣ ಪರಿಶ್ರಮಕ್ಕೆ ನನ್ನ ಮಗಳಿಗಿಂತ ಉದಾಹರಣೆ ಬೇರೆ ಇಲ್ಲ’.

-ಸರೇಶ್, ರಿತುಪರ್ಣ ತಂದೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X