ನಂಡೆ ಪೆಂಙಳ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿ ಮನ್ಸೂರ್ ಅಹ್ಮದ್ ಆಝಾದ್ ಆಯ್ಕೆ

ಮನ್ಸೂರ್ ಅಹ್ಮದ್ ಆಝಾದ್
ಮಂಗಳೂರು, ಆ.13 : ಪ್ರಾಯ 30 ಮೀರಿದ ಸಮುದಾಯದ ಹೆಣ್ಣು ಮಕ್ಕಳ ಮದುವೆಯ ಯೋಜನೆ ʼನಂಡೆ ಪೆಂಙಳ್ ಚಾರಿಟೇಬಲ್ ಟ್ರಸ್ಟ್ʼ ಇದರ ಮಹಾಸಭೆಯು ಎಸ್.ಎಂ ರಶೀದ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ ಜರಗಿತು.
ಸಂಸ್ಥೆಯ ನೂತನ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಮನ್ಸೂರ್ ಅಹ್ಮದ್ ಆಝಾದ್ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಡಾ.ಎಸ್.ಎಂ ರಶೀದ್ ಹಾಜಿ, ಮುಖ್ಯ ಸಲಹೆಗಾರರಾಗಿ ಝಕರಿಯಾ ಹಾಜಿ ಜೋಕಟ್ಟೆ, ಸಲಹೆಗಾರರಾಗಿ ಎ. ಕೆ. ನಿಯಾಝ್, ಅಶ್ರಫ್ ಕರ್ನಿರೆ, ಬಿ.ಎಚ್. ಅಸ್ಗರ್ ಅಲಿ, ಉಪಾಧ್ಯಕ್ಷರುಗಳಾಗಿ ಬಿ.ಮಹಮ್ಮದ್ ಶರೀಫ್ ವೈಟ್ ಸ್ಟೋನ್, ಮುಹಮ್ಮದ್ ಶೌಕತ್ ಶೌರಿ, ಮುಹಮ್ಮದ್ ಹಾರಿಸ್, ಎಸ್ ಎಂ ಮುಸ್ತಫ ಭಾರತ್, ಪ್ರಧಾನ ಕಾರ್ಯದರ್ಶಿಯಾಗಿ ರಿಯಾಝ್ ಅಹ್ಮದ್ ಕೆ.ಬಿ, ಕೋಶಾಧಿಕಾರಿಯಾಗಿ ಆಬ್ದುಲ್ ರೌಫ್ ಸುಲ್ತಾನ್, ಕಾರ್ಯದರ್ಶಿಯಾಗಿ ನಿಸಾರ್ ಮೊಹಮ್ಮದ್, ಪ್ರಚಾರ ಮುಖ್ಯಸ್ಥರಾಗಿ ರಫೀಕ್ ಮಾಸ್ಟರ್, ಸರ್ವೆ ಮುಖ್ಯಸ್ಥರಾಗಿ ಅಬ್ದುಲ್ ಹಮೀದ್ ಕಣ್ಣೂರ್ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ನಂಡೆ ಪೆಂಙಳ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅಗಲಿದ ನೌಶಾದ್ ಹಾಜಿ ಸೂರಲ್ಪಾಡಿ ಮತ್ತು ಹಾಜಿ ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ ಅವರ ಸೇವೆಯನ್ನು ಸ್ಮರಿಸಲಾಯಿತು.
ನಂಡೆ ಪೆಂಙಳ್ ಅಭಿಯಾನದಡಿ ಕಳೆದ 8 ವರ್ಷಗಳಿಂದ ಯಾವುದೇ ಪ್ರಚಾರ ಇಲ್ಲದೆ ಪ್ರಾಯ 30 ಮೀರಿದ 638 ಯುವತಿಯರ ಮದುವೆಗೆ ಸಹಕಾರ ನೀಡಲಾಗಿದೆ. ಅದಕ್ಕೂ ಮೊದಲು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಾರಥ್ಯದಲ್ಲಿ 169 ಸಹೋದರಿಯರ ಮದುವೆಗೆ ನೆರವು ನೀಡಲಾಗಿದೆ. ನಮ್ಮ ಇನ್ನೂ ವಯಸ್ಸು ಮೀರಿದ ನೂರಾರು ಸಹೋದರಿಯರು ಮದುವೆಯಾಗಲು ಬಾಕಿಯಿದ್ದು, ಅವರ ಮದುವೆಗೆ ಸಹಕರಿಸಲು ನೂತನ ಸಮಿತಿಯು ಶ್ರಮಿಸಲಿದೆ ಎಂದು ಸಂಸ್ಥೆಯ ನೂತನ ಅಧ್ಯಕ್ಷ ಮನ್ಸೂರ್ ಆಝಾದ್ ತಿಳಿಸಿದ್ದಾರೆ.







