ಮರ್ಕಝುಲ್ ಹುದಾ ಸಲಾಲ ಘಟಕ: ನೂತನ ಪದಾಧಿಕಾರಿಗಳ ಆಯ್ಕೆ

ಅಬ್ದುಲ್ ಖಾದರ್ ಮಣ್ಣಾಪು
ಪುತ್ತೂರು, ಫೆ.6: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ನೂತನ ಘಟಕವನ್ನು ಒಮಾನಿನ ಸಲಾಲದ ಖಾಸಗಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ಅವರ ನೇತೃತ್ವದಲ್ಲಿ ರಚಿಸಲಾಯಿತು.
ಮರ್ಕಝುಲ್ ಹುದಾ ಒಮಾನ್ ರಾಷ್ಟೀಯ ಸಮಿತಿಯ ಉಪಾಧ್ಯಕ್ಷ ನಾಸಿರ್ ನಂದಾವರ ಅಧ್ಯಕ್ಷತೆ ವಹಿಸಿದ್ದರು. ಕೆಸಿಎಫ್ ಸಲಾಲ ಝೋನ್ ದಾಇ ಅಶ್ರಫ್ ಅಮ್ಜದಿ ಪಕ್ಷಿಕೆರೆ ಉದ್ಘಾಟಿಸಿದರು. ನೂತನ ಸಮಿತಿಗೆ ಮುಹಮ್ಮದ್ ಅಶ್ರಫ್ ಅಮ್ಜದಿ ಪಕ್ಷಿಕೆರೆ (ಸಲಹೆಗಾರ), ನಾಸಿರುದ್ದೀನ್ ನಂದಾವರ (ಗೌರವಾಧ್ಯಕ್ಷ), ಅಬ್ದುಲ್ ಖಾದರ್ ಮಣ್ಣಾಪು (ಅಧ್ಯಕ್ಷ), ಸದಖತುಲ್ಲಾಹ್ ಸಂಸೆ (ಉಪಾಧ್ಯಕ್ಷ), ಅಬ್ದುಲ್ಲತೀಫ್ ಸುಳ್ಯ (ಪ್ರಧಾನ ಕಾರ್ಯದರ್ಶಿ), ಮುಹಮ್ಮದ್ ಶರೀಫ್ ಕುತ್ತಾರ್ (ಕಾರ್ಯದರ್ಶಿ), ಅಬ್ದುಲ್ ಕಮಾಲ್ ಸುಳ್ಯ (ಕೋಶಾಧಿಕಾರಿ) ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸದಸ್ಯರಾಗಿ ಆದಿಲ್ ಮಾಚಾರ್, ಅಬ್ದುಲ್ ಖಾದರ್ ಪರ್ಪುಂಜ, ಫಾರೂಕ್ ಸುರಿಬೈಲ್ ತುಂರೀತ್, ಶರೀಫ್ ಕುಂಜತ್ಬೈಲ್, ಶಫೀಕ್ ಇನ್ನಾ ರು ಅವರನ್ನು ಆಯ್ಕೆ ಮಾಡಲಾಯಿತು.





