Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಾಂಡ್ ಸೊಭಾಣ್ ನೇತೃತ್ವದಲ್ಲಿ ನಡೆದ ಸಮೂಹ...

ಮಾಂಡ್ ಸೊಭಾಣ್ ನೇತೃತ್ವದಲ್ಲಿ ನಡೆದ ಸಮೂಹ ಗಾಯನ ಸಮಾಪ್ತಿ; ‘ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ಅಧಿಕೃತ ಘೋಷಣೆ

► ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಮಂಗಳೂರು ಪುರಭವನ ► ಕೊಂಕಣಿ ಭಾಷಿಗರಿಂದ ಸಂಭ್ರಮ ಆಚರಣೆ

ವಾರ್ತಾಭಾರತಿವಾರ್ತಾಭಾರತಿ15 Nov 2026 9:56 PM IST
share
ಮಾಂಡ್ ಸೊಭಾಣ್ ನೇತೃತ್ವದಲ್ಲಿ ನಡೆದ ಸಮೂಹ ಗಾಯನ ಸಮಾಪ್ತಿ; ‘ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ಅಧಿಕೃತ ಘೋಷಣೆ

ಮಂಗಳೂರು, ನ.15: ಮಾಂಡ್ ಸೊಭಾಣ್ ನೇತೃತ್ವದಲ್ಲಿ ನ.3ರಿಂದ ನಗರದ ಪುರಭವನದಲ್ಲಿ ನಡೆಯುತ್ತಿದ್ದ ಪ್ರಪಥಮ ವಿಶ್ವ ಕೊಂಕಣಿ ಸಮೂಹ ಗಾಯನ ಕಾರ್ಯಕ್ರಮವು ರವಿವಾರ ಸಮಾಪ್ತಿಗೊಂಡಿತು.

ಈ ಗಾಯನ ಕಾರ್ಯಕ್ರಮವು ಶನಿವಾರ ‘ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ನಿರ್ಮಿಸಲಾಗಿದ್ದರೆ, ರವಿವಾರ ಸಂಜೆ ಅದರ ಅಧಿಕೃತ ಘೋಷಣೆಯೊಂದಿಗೆ ಸಂಭ್ರಮ ಆಚರಿಸಲಾಯಿತು. ‘ಟೀಮ್ ಸುಮೇಲ್’ ತಂಡದ ಹಾಡುಗಾರಿಕೆಯೊಂದಿಗೆ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಮೇಳಕ್ಕೆ ಅಧಿಕೃತ ತೆರೆ ಬಿತ್ತು.


ಅತೀ ದೀರ್ಘಾವಧಿಯ ಈ ಸಮೂಹ ಗಾಯನವು ಶನಿವಾರ ಸಂಜೆ 5:12 ಗಂಟೆಯಾಗುತ್ತಲೇ 11 ದಿನಗಳು, 11 ಗಂಟೆಗಳು, 11 ನಿಮಿಷಗಳನ್ನು ಕ್ರಮಿಸುವುದರೊಂದಿಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿಕೊಂಡಿತ್ತು. ಅಂದರೆ 2024ರಲ್ಲಿ ವಡ್ತಾಲ್‌ನಲ್ಲಿ ಹರಿಕೃಷ್ಣ ಕೀರ್ತನ್ ಯಾಗ್ ಸಂಸ್ಥೆಯು ನಿರ್ಮಿಸಿದ್ದ ಮೈಲಿಗಲ್ಲನ್ನು ಮಾಂಡ್ ಸೊಭಾಣ್ ಸಂಗೀತ ಮ್ಯಾರಥಾನ್ ಮುರಿದಿತ್ತು. ರವಿವಾರ ಸಂಜೆ 6:12ಕ್ಕೆ 12 ದಿನಗಳು, 12 ಗಂಟೆಗಳು, 12 ನಿಮಿಷಗಳನ್ನು ಕ್ರಮಿಸಿ ಸಮೂಹ ಗಾಯನ ಸಮಾಪ್ತಿಗೊಳಿಸುವ ಮೂಲಕ ಐತಿಹಾಸಿಕ ಕ್ಷಣಗಳಿಗೆ ಮಂಗಳೂರು ಪುರಭವನ ಸಾಕ್ಷಿಯಾಯಿತು. ‘ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ನ ತೀರ್ಪುಗಾರರು ಅಧಿಕೃತ ಘೋಷಣೆ ಮಾಡುತ್ತಿದ್ದಂತೆಯೇ ಸಭಿಕರು ಹರ್ಷ ವ್ಯಕ್ತಪಡಿಸಿದರು. ಪುರಭವನದ ಆವರಣದಲ್ಲಿ ಸಂಭ್ರಮದ ಅಲೆಯೇ ಕಂಡು ಬಂತು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ ದ.ಕ. ಜಿಲ್ಲೆಯ ಏಕತೆ ಮತ್ತು ಸಾಂಸ್ಕೃತಿಕ ಹಿರಿಮೆಗೆ ಈ ದಾಖಲೆ ಸಾಕ್ಷಿಯಾಗಿದೆ. ಮಾಂಡ್ ಸೊಭಾಣ್‌ನ ಸಂಸ್ಥಾಪಕ ಎರಿಕ್ ಒಝೇರಿಯೊ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಗೆ ಹೊಸ ಆಯಾಮ ನೀಡಿ, ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದರು. ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ ದಂತಹ ಕಾರ್ಯಕ್ರಮಗಳು ಜಾತಿ, ಮತ, ಧರ್ಮಗಳನ್ನು ಮೀರಿದ ಏಕತೆಗೆ ಉತ್ತಮ ನಿದರ್ಶನವಾಗಿವೆ. ಇಂದು ಕೊಂಕಣಿ ಸಮುದಾಯವು ನಾಡಿಗೆ ಹೆಮ್ಮೆ ತಂದಿದೆ ಎಂದು ಹೇಳಿದರು.


ಗಿನ್ನೆಸ್ ದಾಖಲೆಯನ್ನು ಅಧಿಕೃತವಾಗಿ ಘೋಷಿಸಿದ ಸ್ವಪ್ನಿಲ್ ದಂಗಾರಿಕರ್ ಪ್ರಸಿದ್ಧ ದಾಖಲೆಗಳ ಸಾಲಿಗೆ ಸೇರುವ ಕಾರ್ಯಕ್ರಮ ಇದಾಗಿದೆ. ಇಲ್ಲಿ ಪ್ರಸ್ತುತಿಗೊಂಡ ಎಲ್ಲಾ ಹಾಡುಗಳೂ ಮೋಹಕವಾಗಿದ್ದವು. ಕೊಂಕಣಿಗರು ಭಾಷೆ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸಿದ ಪರಿ ಕಂಡು ರೋಮಾಂಚನವಾಗಿದೆ. ಇಲ್ಲಿ ನೀಡಿದ ಪ್ರದರ್ಶನ ವಿಶ್ವಮಟ್ಟದ್ದಾಗಿತ್ತು ಎಂದರು.

ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಮಾತನಾಡಿ ಈ ಕಾರ್ಯಕ್ರಮದ ಆಯೋಜಕರ ಶ್ರಮ ಶ್ಲಾಘನೀಯ. ಪೂರ್ವನಿಗದಿತ ಕಾರ್ಯಕ್ರಮಗಳ ಒತ್ತಡದಿಂದ ಮುಖ್ಯಮಂತ್ರಿಗೆ ಈ ಕಾರ್ಯಕ್ರಮಕ್ಕೆ ಬರಲು ಅನನುಕೂಲ ವಾಯಿತು. ಆದರೂ ಸರಕಾರದಿಂದ ಕಾರ್ಯಕ್ರಮದ ಯಶಸ್ವಿಗೆ 1 ಕೋ.ರೂ. ಅನುದಾನ ನೀಡಿದ್ದಾರೆ. ಇದು ಕರಾವಳಿ ಪ್ರದೇಶ ಮತ್ತು ಇಲ್ಲಿನ ಪರಂಪರೆಯ ಬಗ್ಗೆ ಅವರಿಗಿರುವ ಅಪಾರ ಪ್ರೀತಿಯನ್ನು ತೋರಿಸುತ್ತದೆ ಎಂದರು.

ಸ್ವಾಗತ ಭಾಷಣಗೈದ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ಮಾತನಾಡಿ ಕೊಂಕಣಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮಾಂಡ್ ಸೊಭಾಣ್‌ನ ಅಭಿಯಾನ ಮುಂದುವರಿಯಲಿದೆ. ಡಿ.6ರಂದು ಮಂಗಳೂರಿನ ಕಲಾಂಗಣದಲ್ಲಿ ‘ಬೈಲಾ ಇಂಟರ್‌ನ್ಯಾಷನಲ್ ಸೂಪರ್ ಶೋ’ ನಡೆಯಲಿದೆ ಎಂದರು.


ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಸಂಘಟಕರಾದ ಮೈಕೆಲ್ ಡಿಸೋಜ, ಜಾಯ್ಸ್ ಒಝೇರಿಯೊ, ಸ್ವಾಗತ ಸಮಿತಿ ಉಪಾಧ್ಯಕ್ಷ ರಾಯ್ ಕ್ಯಾಸ್ಟೆಲಿನೊ, ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಗೋವಾ ಪ್ರತಿನಿಧಿ ಮೈಕೆಲ್ ಗ್ರೇಸಿಯಸ್, ಕಲಾಂಗಣ್ ಅಧ್ಯಕ್ಷ ರೊನಾಲ್ಡ್ ಡಿ’ಮೆಂಡೋನ್ಸಾ, ಸಂಗೀತ ನಿರ್ದೇಶಕ ಜಾಯಲ್ ಪಿರೇರ, ನವೀನ್ ಲೋಬೊ, ಎಲ್ರಾನ್ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು. ಅರುಣ್‌ರಾಜ್ ಕಾರ್ಯಕ್ರಮ ನಿರೂಪಿಸಿದರು.

ಮಾಂಡ್ ಸೊಭಾಣ್ ಸಂಸ್ಥೆಯ 40ನೇ ವಾರ್ಷಿಕೋತ್ಸವದ ನೆನಪಿಗಾಗಿ ಮತ್ತು ಸಂಸ್ಥಾಪಕ ದಿವಂಗತ ಎರಿಕ್ ಒಝೇರಿಯೊ ಸ್ಮರಣಾರ್ಥವಾಗಿ ಹಮ್ಮಿಕೊಳ್ಳಲಾದ ಮಹಾಸಂಗೀತ ಸಮ್ಮೇಳನದ ಪ್ರಮುಖ ಭಾಗವಾಗಿ ಈ ದಾಖಲೆಯ ಪ್ರಯತ್ನ ಮಾಡಲಾಗಿತ್ತು. ಅದರಲ್ಲೀಗ ಯಶಸ್ಸು ಸಾಧಿಸಿದೆ.

ಲಂಡನ್‌ನ ಗಿನ್ನೆಸ್ ದಾಖಲೆಯ ತೀರ್ಪುಗಾರ ಸ್ವಪ್ನಿಲ್ ದಂಗಾರಿಕರ್ ಅವರಿಂದ ಗಿನ್ನೆಸ್ ದಾಖಲೆ ನಿರ್ಮಿಸಿದ ಪ್ರಮಾಣಪತ್ರವನ್ನು ಸ್ವೀಕರಿಸಲಾಯಿತು.

ಸಮೂಹ ಗಾಯನ ಕಾರ್ಯಕ್ರಮದಲ್ಲಿ 300 ತಂಡಗಳು, 7,235 ಗಾಯಕರು ಮತ್ತು 4,596 ಹಾಡುಗಳು ಪ್ರಸ್ತುತಿಗೊಂಡವು.

*ಗಾಯನ ಕಾರ್ಯಕ್ರಮದ ನಿರ್ದೇಶಕ ಜೋಯೆಲ್ ಪಿರೇರಾ ಅವರನ್ನು ಶಾಲು, ಸ್ಮರಣಿಕೆ ಮತ್ತು ಚಿನ್ನದ ಪದಕ ನೀಡಿ ಸನ್ಮಾನಿಸಲಾಯಿತು. ಸಹ ನಿರ್ದೇಶಕರಾದ ಆಲ್ವಿನ್ ನೊರೊನ್ಹಾ (ಬಜಪೆ), ಫಾ. ಆಲ್ವಿನ್, ಸೈಮನ್ ಬಜಾಲ್, ಅನಿಲ್ ಪತ್ರಾವೊ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಪೋಷಕರು, ಸಹ-ಪೋಷಕರು ಮತ್ತು ದಾನಿಗಳನ್ನು ಅಭಿನಂದಿಸಲಾಯಿತು.


ಇದು ಕೊಂಕಣಿ ಸಂಸ್ಕೃತಿಯ ವಿಜಯ: ಡಾ. ರೊನಾಲ್ಡ್ ಕೊಲಾಸೊ

ದಾಖಲೆಗಳನ್ನು ಮುರಿಯಲು ಮತ್ತು ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಮಾಂಡ್ ಸೊಭಾಣ್ ಹೆಸರುವಾಸಿಯಾಗಿದೆ. ಈ ಹಿಂದೆ ವಿಶ್ವ ಕೊಂಕಣಿ ಸಮ್ಮೇಳನಕ್ಕೆ ಭಾರತದ ರಾಷ್ಟ್ರಪತಿಗಳನ್ನೇ ಕರೆತಂದ ಹೆಗ್ಗಳಿಕೆ ಈ ಸಂಸ್ಥೆಗಿದೆ. ಬಹು ಗಾಯಕರ ವಿಭಾಗದಲ್ಲಿ 12 ದಿನ, 12 ಗಂಟೆ, 12 ನಿಮಿಷಗಳ ನಿರಂತರ ಗಾಯನವು ಒಂದು ಅಮೋಘ ಸಾಧನೆಯಾಗಿದೆ. ಇದು ಕೊಂಕಣಿ ಸಂಸ್ಕೃತಿಯ ವಿಜಯವಾಗಿದೆ ಎಂದು ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ, ಕೊಡುಗೈ ದಾನಿ ಡಾ. ರೊನಾಲ್ಡ್ ಕೊಲಾಸೊ ಬಣ್ಣಿಸಿದರು.

ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾಂಡ್ ಸೊಭಾಣ್‌ನ ಅಪ್ರತಿಮ ಸಂಘಟನಾಚಾತುರ್ಯ ಮತ್ತು ಶಿಸ್ತನ್ನು ಶ್ಲಾಘಿಸಿದರಲ್ಲದೆ ಈ ಸಾಧನೆಯು ದಾಖಲೆಗಳ ಪುಸ್ತಕದ ಜೊತೆಗೆ ಜನರ ಮನಸ್ಸಿನಲ್ಲೂ ಶಾಶ್ವತವಾಗಿ ಉಳಿಯಲಿದೆ ಎಂದರು.

ಕರಾವಳಿ ಪ್ರದೇಶವು ಶಿಕ್ಷಣ, ಬ್ಯಾಂಕಿಂಗ್, ಸಿನಿಮಾ, ಕ್ರೀಡೆ ಮತ್ತು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಉಲ್ಲೇಖಿಸಿದ ಡಾ. ರೊನಾಲ್ಡ್ ಕೊಲಾಸೊ ಮಾಂಡ್ ಸೊಭಾಣ್ ಮತ್ತೊಂದು ದಾಖಲೆ ನಿರ್ಮಿಸಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಇದು ನಮ್ಮ ಪ್ರದೇಶದ ಹೆಗ್ಗುರುತಾಗಿದೆ. ಈ ದಾಖಲೆಯನ್ನು ಮುರಿಯಲು ಕೇವಲ ಮಾಂಡ್ ಸೊಭಾಣ್‌ನಿಂದ ಮಾತ್ರ ಸಾಧ್ಯ ಎಂದರು.

ಮಾಂಡ್ ಸೊಭಾಣ್‌ನ ಸಂಸ್ಥಾಪಕ ಎರಿಕ್ ಒಝೇರಿಯೊ ಕೊಂಕಣಿ ಭಾಷೆ, ಸಂಸ್ಕೃತಿ ಮತ್ತು ಜನರಿಗಾಗಿ ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದಾರೆ. ಇದೀಗ ಲುವಿ ಜೆ. ಪಿಂಟೊ ಅವರ ಕನಸನ್ನು ಮುನ್ನಡೆಸುತ್ತಿದ್ದಾರೆ. ನಾವು ಇತಿಹಾಸ ನಿರ್ಮಿಸಿದ್ದೇವೆ. ಇದು ಸಂಭ್ರಮಿಸುವ ಮತ್ತು ವಿಜಯೋತ್ಸವ ಆಚರಿಸುವ ಸಮಯವಾಗಿದೆ ಎಂದರು.


























share
ವಾರ್ತಾಭಾರತಿ
ವಾರ್ತಾಭಾರತಿ
Next Story
X