ಮೇ 4: ಎಸೆಸೆಲ್ಸಿ, ಪಿಯುಸಿ ಟಾಪರ್‌ಗಳಿಗೆ ಸನ್ಮಾನ; ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಮಂಗಳೂರು, ಮೇ 3: ಹಿಕ್ಮಾ ಎಜುಕೇಶನಲ್ ಟ್ರಸ್ಟ್, ಎಂಎನ್‌ಎಸ್ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ ಹಾಗೂ ಹೆಚ್‌ಐಎಫ್ ಇಂಡಿಯಾ, ಪುತ್ತೂರು ಕಮ್ಯುನಿಟಿ ಸೆಂಟರ್ ಸಹಯೋಗದಲ್ಲಿ ಇತ್ತೀಚೆಗೆ ಪ್ರಕಟವಾದ ಎಸೆಸೆಲ್ಸಿ (ರಾಜ್ಯ), ಪಿಯುಸಿ ಹಾಗೂ ಸಿಬಿಎಸ್‌ಇ ಫಲಿತಾಂಶಗಳಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಮೇ 4ರಂದು ನಗರದ ಟೌನ್ ಹಾಲ್‌ನಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿದೆ.
ನೋಂದಾಯಿತ ವಿದ್ಯಾರ್ಥಿಗಳಲ್ಲಿ ಗರಿಷ್ಠ ಅಂಕ ಪಡೆದವರಿಗೆ ವಿಶೇಷ ಪ್ರಶಸ್ತಿ ನೀಡಲಾಗುವುದು. ಇದರೊಂದಿಗೆ ಮುಂದಿನ ಶಿಕ್ಷಣದ ಬಗ್ಗೆ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸಲಾಗುವುದು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು:
* ಅನುಭವ ಹೊಂದಿದ ಕೌನ್ಸಿಲರ್‌ಗಳಿಂದ ಒನ್-ಟು-ಒನ್ ಕೌನ್ಸಿಲಿಂಗ್
* ವಿವಿಧ ಕೋರ್ಸ್‌ಗಳು, ಕಾಲೇಜುಗಳು ಮತ್ತು ಉದ್ಯೋಗಾವಕಾಶಗಳ ಮಾಹಿತಿ
* ವಿದ್ಯಾರ್ಥಿವೇತನ ಯೋಜನೆಗಳ ಮಾರ್ಗದರ್ಶನ
* NEET, CET, JEE ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಸಲಹೆ
* UPSC, IAS, IPS, KAS, FDA, SDA ಸೇರಿದಂತೆ ಸರ್ಕಾರಿ ಉದ್ಯೋಗಗಳ ಮಾಹಿತಿ
* ಪ್ರಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಸೀಟುಗಳ ಅವಕಾಶ
* ಸರ್ಕಾರಿ ವಿದ್ಯಾರ್ಥಿ ಯೋಜನೆಗಳ ಕುರಿತು ಮಾಹಿತಿ
ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 74111 65005 ಅಥವಾ 74112 65005 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.






