ಅಲ್ ಫುರ್ಖಾನ್ ಆಂಗ್ಲ ಮಾಧ್ಯಮ ಶಾಲೆ, ಪಿ.ಯು ಕಾಲೇಜಿಗೆ MEIF ಎಕ್ಸಲೆನ್ಸ್ ಪ್ರಶಸ್ತಿ

ಮೂಡುಬಿದಿರೆ: ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಮೂಡುಬಿದಿರೆಯ ಅಲ್ ಫುರ್ಖಾನ್ ಇಸ್ಲಾಮಿಕ್ ಪಿ ಯು ಕಾಲೇಜಿನ 2022-23 ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶಕ್ಕಾಗಿ ಮಂಗಳೂರಿನ ಪ್ರೆಸ್ಟೀಜ್ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ನಡೆದ ಮುಸ್ಲಿಂ ಶಿಕ್ಷಣ ಸಂಸ್ಥೆ ಫೆಡರೇಶನ್ (MEIF) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಮತ್ತು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ರವರು ಪ್ರಶಸ್ತಿ ನೀಡಿ ಗೌರವಿಸಿದರು.
ಶಾಲಾ ವಿಭಾಗದಲ್ಲಿ ಅತ್ಯುನ್ನತ ಡಿಸ್ಟಿಂಕ್ಷನ್ ಪ್ರಶಸ್ತಿ, ಪಿಯುಸಿ ವಿಭಾಗದಲ್ಲಿ ಅತ್ಯುನ್ನತ ಡಿಸ್ಟಿಂಕ್ಷನ್ ಪ್ರಶಸ್ತಿ, ಶಾಲಾ ವಿಭಾಗದಲ್ಲಿ ಶೇಕಡಾ ಫಲಿತಾಂಶ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಶಾಲಾ-ಕಾಲೇಜಿನ ಪರವಾಗಿ ಪ್ರಾಂಶುಪಾಲೆ ನಝ್ರನಾ ಶಾಫಿ, ಉಪ ಪ್ರಾಂಶುಪಾಲೆ ಅನೀಸ, ಅಲ್ ಫುರ್ಖಾನ್ ಎಜುಕೇಶನಲ್ ಟ್ರಸ್ಟ್‌ನ ಆಡಳಿತಾಧಿಕಾರಿ ಮುಹಮ್ಮದ್ ಶಹಾಮ್, ಖಜಾಂಜಿ ಮೊಹಮ್ಮದ್ ಅಶ್ಫಾಕ್ ಹಾಗೂ ಅರೇಬಿಕ್ ವಿಭಾಗದ ಮುಖ್ಯಸ್ಥ ಶೇಕ್ ಶಾಹಿದ್ ಖಾನ್ ಪ್ರಶಸ್ತಿ ಸ್ವೀಕರಿಸಿದರು.
ಸಂಸ್ಥೆಯ ಚಯರ್ ಮ್ಯಾನ್ ಮುಹಮ್ಮದ್ ಸಮೀರ್ ಮತ್ತು ನಿರ್ದೇಶಕರಾದ ಮುಮ್ತಾಝ್ ರವರು ಅಭಿನಂದಿಸಿದರು.