ಮೂಡುಬಿದಿರೆ | ಬ್ರೇಕ್ ವೈಫಲ್ಯಕ್ಕೀಡಾಗಿ ಅಂಗಡಿಗೆ ನುಗ್ಗಿದ ಲಾರಿ

ಮೂಡುಬಿದಿರೆ: ಲಾರಿಯೊಂದು ಬ್ರೇಕ್ ಫೇಲ್ ಆಗಿ ಹಿಮ್ಮುಖವಾಗಿ ಚಲಿಸಿ ಸಮೀಪದಲ್ಲಿದ್ದ ಅಂಗಡಿಗೆ ನುಗ್ಗಿದ ಘಟನೆ ಮೂಡುಬಿದಿರೆ ತಾಲೂಕಿನ ತೋಡಾರು ಕೊಡಮಣಿತ್ತಾಯ ದ್ವಾರದ ಬಳಿ ರವಿವಾರ ನಡೆದಿದೆ.
ಇಲ್ಲಿನ ಯೆನೆಪೊಯ ಕಾಲೇಜಿನ ಗೇಟ್ ನಿಂದ ಹೊರಬಂದ ಲಾರಿ ಮೇಲಿನ ಮುಖ್ಯರಸ್ತೆಗೆ ಪ್ರವೇಶಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಬ್ರೇಕ್ ವೈಫಲ್ಯಕ್ಕೀಡಾಗಿದ್ದರಿಂದ ಲಾರಿಯು ಚಾಲಕ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿ ಪಕ್ಕದಲ್ಲಿ ಅಂಗಡಿಗೆ ನುಗ್ಗಿದೆ. ಇದರಿಂದ ಅಂಗಡಿಗೆ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.
Next Story




