ಮೂಡುಬಿದಿರೆ | ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಮುಹಮ್ಮದ್ ನಹ್‌ಯಾನ್ ಗೆ ಚಿನ್ನದ ಪದಕ

ಮೂಡುಬಿದಿರೆ: ಕರ್ನಾಟಕ ಸ್ಕ್ವಾಯ್ ಸಂಸ್ಥೆಯ ರಾಜ್ಯಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಮುಹಮ್ಮದ್ ನಹ್‌ಯಾನ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ನ.30 ರಂದು ಗದಗ ಜಿಲ್ಲೆಯಲ್ಲಿ ಆಯೋಜಿಸಿದ್ದ 11 ವರ್ಷ ವಯೋಮಿತಿಯ -27 ಕೆಜಿ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿ ಮುಹಮ್ಮದ್ ನಹ್‌ಯಾನ್ ಭಾಗವಹಿಸಿದ್ದಾರೆ.
2026 ಜ.4 ರಿಂದ 7 ರ ವರೆಗೆ ಹೈದರಾಬಾದ್‌ನ ಗಚಿಬಹುಲಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ಮೂಡುಬಿದಿರೆ ಅಲ್ ಬಿರ್ರ್ ಶಾಲೆಯ 5 ನೇ ತರಗತಿ ವಿದ್ಯಾರ್ಥಿಯಾಗಿರುವ ನಹ್‌ಯಾನ್, ಮೂಡುಬಿದಿರೆಯ ಮುಹಮ್ಮದ್ ನದೀಮ್, ಝಕಿಯಾ ಯಾಸ್ಮೀನ್ ದಂಪತಿಯ ಪುತ್ರ.
ಇವರು ಮುಹಮ್ಮದ್ ನದೀಮ್ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
Next Story





