ಮುಲ್ಕಿ | ಆ.31ರಂದು ಸೈಯದ್ ಪಸ್ ಮಾನ್ ಜಾರ ದರ್ಗಾದ ನವೀಕೃತ ಕಟ್ಟಡ ಉದ್ಘಾಟನೆ, ಮಿಲಾದುನ್ನಬಿ ಕಾರ್ಯಕ್ರಮ

ಮುಲ್ಕಿ: ಮುಲ್ಕಿ ಶಾಫಿ ಜುಮ್ಮಾ ಮಸೀದಿ ವಠಾರದಲ್ಲಿರುವ ಇತಿಹಾಸ ಪ್ರಸಿದ್ಧ ಸೈಯದ್ ಪಸ್ ಮಾನ್ ಜಾರ ದರ್ಗಾದ ನವೀಕೃತ ಕಟ್ಟಡದ ಉದ್ಘಾಟನೆ ಹಾಗೂ ಮಿಲಾದುನ್ನಬಿ ಕಾರ್ಯಕ್ರಮವು ಆ.31ರ ಭಾನುವಾರದಿಂದ ಸೆ.4ರ ಗುರುವಾರದವರೆಗೆ ನಡೆಯಲಿದೆ ಎಂದು ಕಾರ್ಯದರ್ಶಿಗಳಾದ ಫಾರೂಕ್ ಹಾಜಿಯವರು ತಿಳಿಸಿದ್ದಾರೆ.
ದರ್ಗಾದ ನವೀಕೃತ ಕಟ್ಟಡದ ಉದ್ಘಾಟನೆಯನ್ನು ಸೆ.4ರ ಗುರುವಾರ ಸಂಜೆ 7 ಗಂಟೆಗೆ ಸೈಯದ್ ಅಲಿ ಷಾ ತಂಙಳ್ ಕುಂಬೋಳ್ ರವರು ನೆರವೇರಿಸಲಿದ್ದು, ದುವಾ ಆರ್ಶೀವಚನ ಜಮಾಅತಿನ ಖತೀಬರು, ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಹು ಉಸ್ಮಾನುಲ್ ಪೈಝಿ ತೋಡಾರ್ ಅವರು ನಡೆಸಲಿದ್ದಾರೆ.
ವಕ್ಪ್ ಮತ್ತು ವಸತಿ ಸಚಿವರಾದ ಝಮೀರ್ ಅಹ್ಮದ್ ಖಾನ್, ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಆಲಿ ಮುಲ್ಕಿ, ವಕ್ಫ್ ಅಧಿಕಾರಿ ಅಬೂಬಕ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷರಾದ ಸುಹೈಲ್ ಹೈದರ್ ವಹಿಸಲಿದ್ದಾರೆ. ಜಮಾಅತ್ ಬಾಂಧವರು, ಮಹಿಳೆಯರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಕೊಡಬೇಕೆಂದು ಕಾರ್ಯದರ್ಶಿಗಳಾದ ಫಾರೂಕ್ ಹಾಜಿಯವರು ವಿನಂತಿಸಿಕೊಂಡಿದ್ದಾರೆ.







