ನಾಟೆಕಲ್: ದಾರುಸ್ಸಲಾಮ್ ಸಮ್ಮೇಳನ

ಉಳ್ಳಾಲ: ಮಂಗಳನಗರ ನಾಟೆಕಲ್ ನಲ್ಲಿ ಕಾರ್ಯಾಚರಿಸುವ ದಾರುಸ್ಸಲಾಮ್ ಸಂಸ್ಥೆ ವಾರ್ಷಿಕ ಸಮ್ಮೇಳನ ವು ದಿನಾಂಕ ಫೆ:23 ರಂದು ನಡೆಯಿತು.
ಬೆಳಗ್ಗೆ ಎಂಟು ಗಂಟೆಗೆ ಜಾಮಿಯಾ ಮಸ್ಜಿದುನ್ನೂರ್ ಮಸೀದಿ ಅಧ್ಯಕ್ಷರಾದ ಬಹು ಮೊಯಿದೀನ್ ಬಾವು ರವರು ಧ್ವಜಾರೋಹಣ ಮಾಡುವುದರೊಂದಿಗೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು.ನಂತರ ಸಾಮೂಹಿಕ ಝಿಯಾರತ್ ನಡೆಯಿತು.ಆಮೇಲೆ ನಡೆದ ಅನುಸ್ಮರಣಾ ಸಭಾ ಕಾರ್ಯಕ್ರಮ ಸ್ವಾಗತ ಸಮಿತಿ ಚೇರ್ಮನ್ ಎಮ್ ಹೆಚ್ ಬಾವುಚ್ಚ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಜೆ ಆರಂಭಗೊಂಡ ಸಮಾರೋಪ ಸಮಾರಂಭದಲ್ಲಿ ಸಯ್ಯಿದ್ ಅಮೀರ್ ತಂಙಳ್ ಮತ್ತು ಸಯ್ಯಿದ್ ಬಾತಿಷ್ ತಂಙಳ್ ನೇತೃತ್ವದಲ್ಲಿ ಶಂಸುಲ್ ಉಲಮಾ ಮೌಲಿದ್ ಮತ್ತು ಮಜ್ಲಿಸುನ್ನೂರ್ ನೆರವೇರಿತು.
ಸಮಾರೋಪ ಸಭೆಯ ಅಧ್ಯಕ್ಷತೆಯನ್ನು ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ವಹಿಸಿದ್ದರು. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಜಾಮಿಯಾ ದಾರುಸ್ಸಲಾಮ್ ಕುಲಪತಿ ಶೈಖುನಾ ಏ ವಿ ಉಸ್ತಾದ್ ಮುಖ್ಯ ಭಾಷಣವನ್ನು ಮಾಡಿದರು. ಆಸಿಫ್ ಅಝ್ಹರಿ, ಅಡ್ವಕೇಟ್ ಇಬ್ರಾಹಿಂ ಮಾತನಾಡಿದರು.
ಕೊನೆಯಲ್ಲಿ ವಿಶೇಷ ಮುನಾಜಾತ್ ದುಅಃ ಮಜ್ಲಿಸ್ ನಡೆಯಿತು. ಕಾರ್ಯಕ್ರಮ ದಲ್ಲಿ ಅಝೀಝ್ ಫೈಝಿ ಮದರ್ರಿಸ್,ಹನೀಫ್ ದಾರಿಮಿ, ಮೊಯಿದೀನ್ ಬಾವು,ಎಮ್ ಹೆಚ್ ಬಾವುಚ್ಚ,ಜಮಾಲುದ್ದೀನ್ ಹಾಜಿ,ಸಿಎಚ್ ಮುಹಮ್ಮದ್,ಸ್ವಾಗತ್ ಅಬೂಬಕರ್ ಹಾಜಿ,ಅಬ್ಬಾಸ್ ಮುಸ್ಲಿಯಾರ್, ಹಿದಾಯತುಲ್ಲಾ,ಅಬ್ದುರ್ರಹ್ಮಾನ್ ಕತ್ರಿ ಕತಾರ್, ಮುಸ್ತಫಲ್ ಫೈಝಿ, ಅಬ್ದುಲ್ ಖಾದರ್ ದಾರಿಮಿ, ಝುಬೈರ್ ದಾರಿಮಿ, ಅಶ್ರಫ್ ಮರಾಟಿಮೂಲೆ, ರಿಯಾಝ್ ಮರಾಟಿಮೂಲೆ, ಅಬ್ದುಲ್ ಹಮೀದ್ ತುಂಬೆ, ಪುತ್ತುಬಾವುಚ್ಚ, ಬಸೀರ್ ಮಂಗಳನಗರ, ಎನ್ ಎ ಅಶ್ರಫ್, ಅನ್ವರ್ ಮಾಸ್ಟರ್, ಶೈಖ್ ಸಿದ್ದೀಖ್ ಮಹಮ್ಮದ್, ಅಬುಸ್ವಾಲಿಹ್ ಹಾಜಿ ಕುರಿಯಕ್ಕಾರ್ಸ್, ಅಬ್ಬಾಸ್ ಹಾಜಿ ಕುರಿಯಕ್ಕಾರ್ಸ್, ಅಬೂಬಕರ್, ಹಮೀದ್ ಮದ್ಪಾಡಿ, ಟಿ ಮುಹಮ್ಮದ್ ಚೊಕ್ಕಬೆಟ್ಟು, ಅಝೀಝ್ ಚೊಕ್ಕಬೆಟ್ಟು, ನೂರ್ ಮುಹಮ್ಮದ್, ಆಸಿಫ್ ಚೊಕ್ಕಬೆಟ್ಟು, ನವಾಝ್ ಚೊಕ್ಕಬೆಟ್ಟು ,ಸಿರಾಜ್ ಅಶ್ಯಾಫಿ, ಶರೀಫ್ ಲತೀಫಿ , ಇಬ್ರಾಹಿಂ ಎಸ್ ಕೆ ಮುಂತಾದವರು ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿದರು.







