ನೀಟ್-ಎಮ್ಡಿ: ಡಾ.ನಬೀಲ್ ಅಹ್ಮದ್ಗೆ 892ನೆ ರ್ಯಾಂಕ್

ಮಂಗಳೂರು, ಸೆ.27: ನ್ಯಾಶನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್(ಎನ್ಬಿಇಎಂಎಸ್) ನೀಟ್- ಎಮ್ಡಿ-2026ಗೆ ಇತ್ತೀಚೆಗೆ ನಡೆಸಿದ ಪರೀಕ್ಷೆಯಲ್ಲಿ ಮಂಗಳೂರಿನ ದೇರಳಕಟ್ಟೆಯ ಕಣಚೂರು ಇನ್ಸ್ಟಿಟ್ಯೂಶನ್ ಆಫ್ ಮೆಡಿಕಲ್ ಸೈನ್ಸ್ನ ಡಾ. ನಬೀಲ್ ಅಹ್ಮದ್ 571/720 ಅಂಕಗಳೊಂದಿಗೆ ಅಖಿಲ ಭಾರತ ಮಟ್ಟದಲ್ಲಿ 892ನೇ ರ್ಯಾಂಕ್ (ಎಐಆರ್) ಗಳಿಸಿದ್ದಾರೆ.
ಪಾವೂರು ಗ್ರಾಮದ ಮಲಾರ್ ಬದ್ರಿಯಾ ನಗರದ ಉದ್ಯಮಿ ಹಂಝ ಹುಸೈನ್ ಮತ್ತು ಮೈಮುನಾ ದಂಪತಿಯ ಪುತ್ರನಾಗಿರುವ ಡಾ. ನಬೀಲ್ ಅಹ್ಮದ್, ಜನರಲ್ ಮೆಡಿಸಿನ್ ಸ್ನಾತಕೋತ್ತರ (ಎಮ್ಡಿ) ಶಿಕ್ಷಣ ಪಡೆಯುವ ಗುರಿ ಹೊಂದಿದ್ದಾರೆ. ಎಂಬಿಬಿಎಸ್ ಅಂತಿಮ ಪರೀಕ್ಷೆಯಲ್ಲಿ ಡಾ. ನಬೀಲ್ ಅಹ್ಮದ್ ರಾಜ್ಯಕ್ಕೆ ಪ್ರಥಮ ಸ್ಥಾನ ತಂದುಕೊಟ್ಟಿದ್ದರು.
Next Story




