ಏಡ್ಸ್ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ, ಆರೋಗ್ಯ ಸಂಸ್ಥೆಗಳೊಂದಿಗೆ ಸಂಘ ಸಂಸ್ಥೆ, ಸಮುದಾಯ ಕೈ ಜೋಡಿಸಬೇಕು: ಅಬ್ದುಲ್ ರಹ್ಮಾನ್

ಕೊಣಾಜೆ: ಏಡ್ಸ್ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಮತ್ತು ಆರೋಗ್ಯ ಸಂಸ್ಥೆಗಳೊಂದಿಗೆ ಸಂಘ ಸಂಸ್ಥೆ, ಸಮು ದಾಯ ಕೈ ಜೋಡಿಸಿದರೆ ಈ ರೋಗವನ್ನು ಸಂಪೂರ್ಣವಾಗಿ ನಿರ್ಮಾಲನೆ ಮಾಡಲು ಸಾಧ್ಯವಿದ್ದು, ವಿಶ್ವ ಏಡ್ಸ್ ದಿನಾಚರಣೆಯ ಮೂಲಕ ಸ್ವಯಂ ಸೇವಕರು ಇಲ್ಲಿ ನಡೆಯುವ ಕಾರ್ಯಾಗಾರದ ಪ್ರಯೋಜನವನ್ನು ಸದುಪಯೋಗಪಡಿಸಿ ಕೊಂಡು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ಕಣಚೂರು ವೈದ್ಯಕೀಯ ಕಾಲೇಜಿನ ನಿರ್ದೇಶಕ ಅಬ್ದುಲ್ ರಹ್ಮಾನ್ ಅಭಿಪ್ರಾಯಪಟ್ಟರು.
ದಕ್ಷಿಣ ಕನ್ಬಡ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ , ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರ ಹಾಗೂ ಲಯನ್ಸ್ ಕ್ಲಬ್ ಕಾಟಿಪಳ್ಳ ಕೃಷ್ಣಾಪುರ, ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ, ಯೇನೆಪೊಯ ನರ್ಸಿಂಗ್ ಕಾಲೇಜು ದೇರಳಕಟ್ಟೆ, ಸ್ವಯಂ ಸೇವಾ ಸಂಘ ಸಂಸ್ಥೆಗಳು ಮತ್ತು ಎನ್.ಎಸ್.ಎಸ್. ಘಟಕಗಳ ರೆಡ್ ರಿಬ್ಬನ್ ಕ್ಲಬ್‍ಗಳ ಜಂಟಿ ಆಶ್ರಯದಲ್ಲಿ ದೇರಳಕಟ್ಟೆಯ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಭಾಂಗಣದಲ್ಲಿ ಸಮುದಾಯಗಳು ಮುನ್ನಡೆಸಲಿ ಎನ್ನುವ ಘೋಷ ವಾಕ್ಯದೊಂದಿಗೆ ನಡೆದ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನಾಚರಣೆ -2023 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ಹಲವು ವರುಷಗಳಲ್ಲಿ ಈ ರೋಗದ ಹರಡುವಿಕೆಯ ಕುರಿತು ಜನಜಾಗೃತಿ ಮೂಡಿಸಿದ್ದರಿಂದ ಹಂತ ಹಂತವಾಗಿ ಕಡಿಮೆಯಾಗುತ್ತಾ ಬಂದಿದ್ದು, ಜಿಲ್ಲೆಯಲ್ಲಿ 10,000 ಎಚ್‍ಐವಿ ಪೀಡಿತರ ಸಂಖ್ಯೆ ಇದೆ ಎನ್ನುವ ಅಂಕಿ ಅಂಶಗಳು ಮಾಹಿತಿ ಯಿಂದ ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಈ ರೋಗಿಗಳ ಸಂಖ್ಯೆ ಕಡಿಮೆಯಾಗುವ ಮೂಲಕ ಸಂಪೂರ್ಣವಾಗಿ ಏಡ್ಸ್ ಮುಕ್ತ ಜಿಲ್ಲೆಯಾಗಬೇಕು ಈ ನಿಟ್ಟಿನಲ್ಲಿ ಸ್ವಯಂ ಸೇವಾ ಕಾರ್ಯಕರ್ತರು ಜಿಲ್ಲಾಡಳಿತ ಆರೋಗ್ಯ ಇಲಾಖೆ ಮತ್ತು ಆರೋಗ್ಯ ಸಂಸ್ಥೆಗಳೊಂದಿಗೆ ಕೈ ಜೋಡಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಚೂರು ವೈದ್ಯಕೀಯ ಕಾಲೇಜಿನ ಡೀನ್ ಡಾ.ರತ್ನಾಕರ್ ಯು.ಪಿ, ಅಧ್ಯಕ್ಷತೆ ವಹಿಸಿ ದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಣಚೂರು ವೈದ್ಯಕೀಯ ಕಾಲೇಜಿನ ಸಲಹಾ ಸಮಿತಿ ಅಧ್ಯಕ್ಷ ಡಾ.ಮಹಮ್ಮದ್ ಇಸ್ಮಾಯಿಲ್, ಆರೋಗ್ಯ ವಿಜ್ಞಾನದ ಸಲಹಾ ಸಮಿತಿ ಸದಸ್ಯ ಡಾ. ಎಂ. ವಿ. ಪ್ರಭು, ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಶೆಟ್ಟಿ, ಸಮುದಾಯ ವಿಭಾಗದ ವೈದ್ಯಾ„ಕಾರಿ ಡ. ಆಸಿಫ್ ಖಾನ್, ವೆನ್‍ಲಾಕ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾ„ಕಾರಿ ಡಾ.ಶರತ್ ಕುಮಾರ್, ಉಪಸ್ಥಿತರಿದ್ದರು.
ಎಚ್‍ಐವಿ ರೋಗಿಗಳ ಸಾಂತ್ವಾನ ಕೇಂದ್ರದ ಪ್ರತಿನಿಧಿ ಸ್ನೇಹ ಸದನ ಗುರುಪುರದ ಫಾ. ಸಿಡಿ, ಜೀವದಾನ ಸಂಸ್ಥೆಯ ಸಿಸ್ಟರ್ ಬಿನ್ಸಿ, ಸ್ನೇಹ ದೀಪ ಸಂಸ್ಥೆ ತಬಸ್ಸುಮ, ಎನ್‍ಎಸ್‍ಎಸ್‍ನ ರೆಡ್ ರಿಬ್ಬನ್ ಕ್ಲಬ್‍ಗಳ ಪ್ರತಿನಿಧಿಗಳಾದ ಸೈಂಟ್ ಆಗ್ನೆಸ್ ಕಾಲೇಜಿನ ಡಾ| ಉದಯ ಕುಮಾರ್ ಬಿ., ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶನಿ ನಿಲಯ ಕಾಲೇಜಿನ ಓಬನಾಥ್, ಯೇನೆಪೋಯ ನರ್ಸಿಂಗ್ ಕಾಲೇಜು ದೇರಳಕಟ್ಟೆಯ ಡೈಸಿ ಡಿ.ಸೋಜ, ಕಣಚೂರು ಆಸ್ಪತ್ರೆಯಲ್ಲಿ ಪ್ರಥಮ ಪಿಪಿಪಿ ಮಾಡೆಲ್ ಎಚ್‍ಐವಿ ಆ್ಯಂಟಿ ರೆಟ್ರೋ ವೈರಲ್ ಟ್ರೀಟ್‍ಮೆಂಟ್ ಸೆಂಟರ್ ಸ್ತಾಪಿಸಿದ ಕಣಚೂರು ವೈದ್ಯಕೀಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ| ರೋಹನ್ ಮೋನಿಸ್, ಮತ್ತು ಅತ ಹೆಚ್ಚು ಎಚ್‍ಐವಿ ರೋಗಿಗಳ ಶುಶ್ರೂಷೆ ಮಾಡಿದ ಕೆ.ಎಂ.ಸಿಯ ವೈದ್ಯಕೀಯ ಅಧೀಕ್ಷಕ ಡಾ| ಜಾನ್ ಟಿ ರಾಮ್‍ಪುರಂ ಅವರನ್ನು ಗೌರವಿಸಲಾಯಿತು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ| ಬದ್ರುದ್ದಿನ್ ಎಂ.ಎನ್. ಸ್ವಾಗತಿಸಿದರು. ವೆನ್‍ಲಾಕ್ ಆಸ್ಪತ್ರೆಯ ಆಪ್ತ ಸಮಾಲೋ ಚಕಿ ರಜನಿ ಶೆಟ್ಟಿ ಪ್ರತಿಜ್ಞಾವಿ„ ಬೋಧಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕದ ಆಪ್ತ ಸಮಾಲೋಚಕಿ ಅಕ್ಷತಾ ವಂದಿಸಿದರು. ಆಪ್ತ ಸಮಾಲೋಚಕ ತಾರನಾಥ್ ರೈ ಕುಂಬ್ರ ಕಾರ್ಯಕ್ರಮ ನಿರ್ವಹಿಸಿದರು.







