ಜನತೆಯ ಸಹಭಾಗಿತ್ವದಲ್ಲಿ ಸಮೃದ್ಧ ಮಂಗಳೂರು: ಮೇಯರ್ ಸುಧೀರ್ ಶೆಟ್ಟಿ
ಬ್ರ್ಯಾಂಡ್ ಮಂಗಳೂರು ವಾಕಥಾನ್

ಮಂಗಳೂರು: ಸ್ವಚ್ಛತೆ ಹಾಗೂ ಸೌಹಾರ್ದವು ನಗರದ ಅಭಿವೃದ್ದಿಗೆ ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕ ಸಹಭಾಗಿತ್ವ ಅಗತ್ಯವಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದ ಅಂಗವಾಗಿ ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ರವಿವಾರ ಆಯೋಜಿಸಲಾದ ಬ್ರ್ಯಾಂಡ್ ಮಂಗಳೂರು ವಾಕಥಾನ್‌ಗೆ ನಗರದ ಕುದ್ಮುಲ್ ರಂಗರಾವ್ ಪುರಭವನದ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ದ.ಕ.ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ಸ್ಮಾರ್ಟ್ ಸಿಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಪೊಲೀಸ್ ಆಯುಕ್ತರ ಕಾರ್ಯಾಲಯ, ಮಂಗಳೂರು ವಿವಿ ಎನ್ನೆಸ್ಸೆಸ್ ಘಟಕದ ಸಹಭಾಗಿತ್ವದಲ್ಲಿ ನಗರದ ಮೈದಾನ್ ರಸ್ತೆ-ಸ್ಟೇಟ್ ಬ್ಯಾಂಕ್- ಹಂಪನಕಟ್ಟೆ ರಸ್ತೆ ಮೂಲಕ ಸಾಗಿ ಬಂದ ವಾಕಥಾನ್‌ನಲ್ಲಿ ವಿದ್ಯಾರ್ಥಿಗಳು ಸ್ಚಚ್ಚತೆ ಬಗ್ಗೆ ಅರಿವು ಮೂಡಿಸಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಮಂಗಳೂರು ವಿಶ್ವವಿದ್ಯಾನಿಲಯದ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ.ನಾಗರತ್ನ, ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಇಂಜಿನಿಯರ್ ಚಂದ್ರಶೇಖರಯ್ಯ ಕೆ.ಟಿ., ಮಂಗಳೂರು ಸ್ಮಾರ್ಟ್ ಸಿಟಿಯ ಮಹಾಪ್ರಬಂಧಕ ಅರುಣ್ ಪ್ರಭಾ, ಗ್ರಾಮೀಣ ವಿಕಾಸ ಯೋಜನೆಯ ನೋಡಲ್ ಅಧಿಕಾರಿ ತುಕಾರಾಮ ಗೌಡ, ಸಂತ ಆ್ಯಗ್ನೆಸ್ ಕಾಲೇಜಿನ ಎನ್ನೆಸ್ಸೆಸ್ ಘಟಕದ ಯೋಜನಾಧಿಕಾರಿ ಉದಯ ಕುಮಾರ್, ಕೆನರಾ ಕಾಲೇಜಿನ ಯೋಜನಾಧಿಕಾರಿ ಸೀಮಾ ಪ್ರಭು, ಬೆಸೆಂಟ್ ಕಾಲೇಜಿನ ಯೋಜನಾಧಿಕಾರಿ ರವಿಪ್ರಭಾ, ಕೀರ್ತನಾ ಭಟ್, ಜಿಲ್ಲಾ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್., ಕಾರ್ಯಕಾರಿ ಸಮಿತಿಯ ಸದಸ್ಯ ರಾಜೇಶ್ ದಡ್ಡಂಗಡಿ, ಸದಸ್ಯ ರೇಮಂಡ್ ತಾಕೊಡೆ, ರೆಡ್ ಕ್ರಾಸ್ ನಿರ್ದೇಶಕ ರವೀಂದ್ರನಾಥ ಉಚ್ಚಿಲ್, ವಿಭಾ ನಾಯಕ್ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.







