ಮಂಗಳೂರು: ಮುಹಮ್ಮದ್ ಸಈದ್ ನಿಧನ

ಮಂಗಳೂರು, ಜ.11: ಮೂಲತಃ ಉಪ್ಪಳ ಸಮೀಪದ ಸಿರಿಯ ನಿವಾಸಿ ಪ್ರಸಕ್ತ ನಗರದ ಬಲ್ಮಠದಲ್ಲಿ ವಾಸವಾಗಿದ್ದ ಮುಹಮ್ಮದ್ ಸಈದ್ ಯಾನೆ ಮಮ್ಮುಂಞಿ (70) ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.
ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಯುಎಇ ಯಲ್ಲಿ ಹಲವು ವರ್ಷಗಳ ಕಾಲ ಉದ್ಯೋಗದಲ್ಲಿದ್ದ ಅವರು ಬಳಿಕ ನಗರದಲ್ಲಿ ನೆಲೆಸಿದ್ದರು. ಗುರುವಾರ ಕಾರ್ಯ ನಿಮಿತ್ತ ಬೆಳ್ತಂಗಡಿಗೆ ತೆರಳಿದ ವೇಳೆ ಹೃದಯಾಘಾತಕ್ಕೀಡಾದರು. ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮುಹಮ್ಮದ್ ಸಈದ್ ಅವರು ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ತಿಳಿದುಬಂದಿದೆ.
ನಗರದ ಬಂದರ್‌ನ ಮಸ್ಜಿದ್ ಝೀನತ್ ಬಕ್ಷ್ ವಠಾರದಲ್ಲಿ ಮೃತರ ದಫನ ಕಾರ್ಯವು ಶುಕ್ರವಾರ ಬೆಳಗ್ಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story





