ರಸ್ತೆ ಹೊಂಡಗಳನ್ನು ಮಣ್ಣಿನಿಂದ ಮುಚ್ಚುವ ಪುರಸಭೆ !

ಡಾಂಬರು ರಸ್ತೆಯಲ್ಲಿರುವ ಹೊಂಡಗಳನ್ನು ಕಡಿಮೆ ಖರ್ಚಿನಲ್ಲಿ ತುಂಬಿಸುವುದು ಹೇಗೆ ? ಮೂಡುಬಿದಿರೆ ಪುರಸಭೆಯನ್ನು ಕೇಳಿದರೆ ಗುಡ್ಡೆಯಿಂದ ತಂದ ಮಣ್ಣನ್ನು ಸುರುವಿ... ಎಂದುತ್ತರಿಸುತ್ತಾರೆ.
ಸಾಕ್ಷಿ ಬೇಕಾದರೆ ಚಿತ್ರ ನೋಡಿ. ಮೂಡುಬಿದಿರೆಯ ಇತಿಹಾಸ ಪ್ರಸಿದ್ಧ ಚೌಟರ ಅರಮನೆಯ ಎದುರಿನ ಶಾಪಗ್ರಸ್ತ ರಸ್ತೆಯಿದು. ಡಾಂಬರಿನ ಪ್ಯಾಚ್ ಹಾಕಲು ಆಗದಂತಹ ದಾರಿದ್ರ್ಯ ನಮ್ಮ ಸರ್ಕಾರಕ್ಕೆ ಬಂದದ್ದು ಹೇಗೆ ಎನ್ನುವುದು ಜನ ಸಾಮಾನ್ಯನ ಜಿಜ್ಞಾಸೆ.
- ರಾಜೇಂದ್ರ ಪೈ
Next Story





