ದ.ಕ.ಲೋಕಸಭಾ ಕ್ಷೇತ್ರ: ಮೊದಲ ದಿನ ಇಬ್ಬರು ನಾಮಪತ್ರ ಸಲ್ಲಿಕೆ

ಬ್ರಿಜೇಶ್ ಚೌಟ
ಮಂಗಳೂರು, ಮಾ.28: ದ.ಕ.ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ ಗೊಂಡಿದ್ದು, ಗುರುವಾರ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಜನತಾ ದಳ ಸಂಯುಕ್ತ (ಜೆಡಿಯು) ಅಭ್ಯರ್ಥಿಯಾಗಿ ಸುಪ್ರಿತ್ ಕುಮಾರ್ ಪೂಜಾರಿ ನಾಮಪತ್ರ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿಯ ಕಚೇರಿಯ ಕೋರ್ಟ್ ಹಾಲ್ನಲ್ಲಿ ಸ್ಥಾಪಿಸಲಾಗಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
Next Story





